ಒಂದು ಕೊಳ. ಅದರ ಬದಿ ಒಂದು ಪುಟ್ಟ ಗುಡಿಸಲು. ಅದರಲ್ಲಿ ಬಾತು ಕೋಳಿಗಳನ್ನು ನೋಡಿಕೊಳ್ಳುತ್ತಾ, ಒಬ್ಬ ಹಳ್ಳಿಯ ವೃದ್ದ ವಾಸವಾಗಿದ್ದ. ಅವನಿಗೆ ಸಂಸಾರದಲ್ಲಿ ಸಾವಿರಾರು ತಾಪತ್ರಯಗಳು, ಮನದಲ್ಲಿ ಸಾವಿರಾರು ಬಗೆಯ ತೀರದ ಪ್ರಶ್ನೆಗಳು ತುಂಬಿಕೊಂಡಿತ್ತು.
ಬಾತು ಕೋಳಿಗಳು ಕೊಳದಲ್ಲಿ ಹಾಯಾಗಿ ಈಜುತ್ತಾ ಕ್ವಾಕ್, ಕ್ವಾಕ್, ಎಂದು ಕೊಂಡು ಉತ್ತರ ಕೊಡುತ್ತಾ ಹಾಯಾಗಿ ಸಾಗುತ್ತಿದ್ದವು.
ವೃದ್ದ ಒಮ್ಮೆ ಈ ಬಾತು ಕೋಳಿಯನ್ನು ದಿಟ್ಟಿಸಿ ನೋಡಿದ. ಕೊಕ್ಕಿನಿಂದ ಕತ್ತಿನ ಭಾಗದವರೆಗೆ ಪ್ರಶ್ನಾರ್ಥ ಚಿಟ್ಟೆಯನ್ನು ಹೊತ್ತ ಈ ಬಾತು ಕೋಳಿ, ಇಷ್ಟು ಹಾಯಾಗಿ ಜೀವನ ನಡೆಸ ಬೇಕಾದರೆ ಇದರ ಹೊಟ್ಟೆಯಲ್ಲಿ ಜೀವನದ ಪ್ರಶ್ನೆಗಳಿಗೆ ಉತ್ತರ ಅಡಿಗಿರ ಬೇಕೆಂದು ಯೋಚಿಸಿದ.
ಒಂದು ಕತ್ತಿಯನ್ನು ಮಸೆದು ಬಾತು ಕೋಳಿಯ ಹೊಟ್ಟೆಯಿಂದ ಉತ್ತರ ಪಡಿಯಲು ಯೋಚಿಸಿದ. ಕತ್ತಿಮಸಿಯುವಾಗ, ಅಲ್ಲಿಗೆ ಒಬ್ಬ ಸನ್ಯಾಸಿ ಬಂದರು.
ಎಲಾ, ವೃದ್ದಾ! “ಏಕೆ ಕತ್ತಿಮಸಿಸುಯುತ್ತಿರುವೆ?” ಎಂದರು.
“ನನ್ನ ಬಾಳಿನ ಪ್ರಶ್ನೆಗಳಿಗೆ ಬಾತುಕೋಳಿ ಹೊಟ್ಟೆಯಲ್ಲಿ ಉತ್ತರವಿದೆ. ಅದನ್ನು ಕೊಚ್ಚಿ ತೆಗೆಯುತ್ತಿದ್ದೆನೆ.” ಎಂದ.
ಎಲಾ, ವೃದ್ಧ! “ಬಾತು ಕೋಳಿ ಹೊಟ್ಟೆ ಬಗೆದು ಕೊಚ್ಚಿದರೆ ನಿನಗೆ ನಿನ್ನ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಸನ್ಮತಿಯ ಮಚ್ಚಿನಲ್ಲಿ ಬಾಳಿನ ಪ್ರಶ್ನೆಗಳನ್ನು ಕೊಚ್ಚಿ ಉತ್ತರ ಕಡೆ”, ಎಂದಾಗ ವೃದ್ಧನ ಮತಿ ಎಚ್ಚೆತ್ತಿತು.
*****

















