ಹುಣ್ಣಿಮೆಯ ಒಂದು ರಾತ್ರಿ
ಚಂದ್ರಮನಿಂದಾಗಿ ಬೆಳಗುತ್ತಿತ್ತು ಧಾತ್ರಿ
ತಂಪು-ತಂಪಾದ ಗಾಳಿ ಎತ್ತಲೂ
ಬೆಳಕಿನೆದುರು ಸೋತು; ಸತ್ತಿತ್ತು ಕತ್ತಲು
ಚಂದ್ರಮನು ನಗುತ್ತಿದ್ದ ಮಕ್ಕಳಂತೆ
ಈ ರಾತ್ರಿ ಆಗಸದಲ್ಲಿ ಬೆಳಕಿನ ಸಂತೆ
ಚಂದ್ರಮನ ಈ ಚಿತ್ತಾರ ಕಂಡು ನನ್ನ ಮನ
ಆಗಿಹೋಗಿತ್ತು ನಿತ್ಯ ನೂತನ
ಚಂದ್ರಮ ಚೆಲ್ಲಾಟವಾಡಿದ್ದ ಇಲ್ಲದೆ ಯಾವುದೇ ತಕರಾರು
ಈಗ ನೀಲಾಕಾಶದ ತುಂಬಾ ಚಂದ್ರನದ್ದೇ ಕಾರುಬಾರು
ಈ ಹುಣ್ಣಿಮೆ ನನ್ನ ಪೆನ್ನಿಗೆ ಕೊಟ್ಟಿತ್ತು ಕೆಲಸ
ಮನ ಬಯಸುತ್ತಿತ್ತು ಹೀಗೇ ಇರಲಿ ಎಲ್ಲಾ ದಿವಸ.
*****


















