ನನ್ನಲ್ಲಿ ತ್ಯಾಗದ ಭಾವ ಮೂಡಿಲ್ಲ
ಮತ್ತೆ ನಾನು ಯೋಗಿಯಾಗ್ವನೇ
ಸತ್ಯ ಅಹಿಂಸೆ ದಯಾ ಪರನಿಲ್ಲದೆ
ಪರಮಾತ್ಮನ ತಿಳಿಯದ ರೋಗಿಯಾಗೇನೆ!
ನನ್ನ ನಾನು ಬದಲಾಗದೆ ಮತ್ತೆ
ಜಗದತ್ತ ನಾ ಬೆರಳು ಹರಿಸುವದೇ
ಕಾಲ ಬದಲಾಗಿದೆಂದು ಭಾವಿಸುತ್ತ ನಾ
ನಿತ್ಯ ಪಾಪ ಕರ್ಮ ಬೆಳೆಸುವದೇಕೆ!
ಸಾವಿರ ಜನರಿರಲಿ ಮತ್ತೆ ಕೋಟಿ
ನಾನು ಮಾತ್ರ ಇಲ್ಲಿ ಏಕಾಂಗಿ
ನನ್ನ ಕರ್ಮಗಳಿಗೆ ನಾನೇ ಹೊಣೆ
ಭಾವಗಳಲ್ಲನ ನಾನು ವಿಕಲಾಂಗಿ
ಪರಮಾತ್ಮನಿಗೆ ಅರೆಸುವದಾದರೆ
ನನಗೇಕೆ ಬೇಕು ಜನಜಾತ್ರೆ
ಮಾಣಿಕ್ಯ ವಿಠಲನ ಮರೆತು
ಕರಕಲಾಗಬೇಕೆ ನನ್ನ ಪಾತ್ರೆ
*****
















