ಭಸ್ಮವಾದರು ದೃಶ್ಯ ಅಸ್ಮಿ ಎನ್ನುತ್ತಲಿದೆ ಕಸ್ಮಾತ್‌? ಅಕಸ್ಮಾತ್ತೋ? ಸಾಕ್ಷಿ! ಹೇಳು. ಯಾ ಅನಾಹತನಾದ ಯಾವದೋ ಆಸ್ವಾದ ಹೃದ್ಗಂಧಿಯಾಮೋದ ಬಂತು ತಾಳು. ಕ್ಷಣ ಕ್ಷಣ ಅಹಂ ಮೃತಿಯು ಆದರೂ ಆಕೃತಿಯು ಸತ್ಯ ವಾಸನೆಯಂತೆ ಸುಳಿಯುತಿಹುದು. ಆವಾಸ ರಜತವೋ ಆಸ್ತಿಕ್ಯ ನಿಹಿತವೋ ಪಾದ ಮೂಡದ ಹಾದಿ ತುಳಿಯುತಿಹುದು. ಒಂದೆ ಎರಡಾಗ...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳು...

ಚಳಿ ಚಳಿ ಚಳಿಗಾಲ ಬಂದೇ ಬಂತು ಅಣ್ಣ ಕಡಲೆ ಬೀಜ ತಿನ್ನಲು ಬಲು ರುಚಿ ಅಣ್ಣ ಬೆಚ್ಚನೆ ಟೋಪಿ, ರುಮಾಲು ಹೊದಿಕೆ ಹೊದ್ದು ಮಲಗುವೆ ನಾನಣ್ಣ *****...

ಮೂಲ: ಉರ್ಸುಲಾ ಕೋಸಿಯೋಲ್ (ಪೋಲಿಷ್ ಕವಿ) ಮರ ಹುದುಗುತ್ತದೆ ತನ್ನ ನೆರಳೊಳಕ್ಕೆ ನಾವೂ ನಮ್ಮ ಭ್ರಮಾಕೂಪಕ್ಕೆ ಜಾರುತ್ತೇವೆ ಬೆದರಿ ಧಗಧಗಿಸುವ ಈ ತಾಪಕ್ಕೆ ನೆರಳೇ ಹಬ್ಬಿರುವಾಗ ಈಗ ಎಲ್ಲ ಜಾಗ ಗುರುತಿಸಬೇಕಾಗಿದೆ ನಾವು ನೇಲುವ ಕೈಗಳ ನೆರಳಿನ ಪ್ರತ್ಯೇ...

ಬೆಳಗ್ಗೆ ಎದ್ದವರು ಎದ್ದ ಹಾಗೆ ಶಾನುಭೋಗರು ಸಂಗಪ್ಪನ ಮನೆಗೆ ಬಂದರು. ಸಂಗಪ್ಪ ಶಯನಗೃಹವನ್ನಿನ್ನೂ ಬಿಟ್ಟಿರಲಿಲ್ಲ. ಅವನ ಹೆಂಡತಿಗೆ ಶಾನುಭೋಗರ ಮೇಲೆ ಸಿಟ್ಟೇ ಬಂದಿತು. ರಾತ್ರಿ ಸಂಗಪ್ಪ ಅದೆಲ್ಲಿ ಹೋಗಿದ್ದನೊ ಬೆಳಗಿನ ಜಾವದಲ್ಲಿ ಮನೆಗೆ ಬಂದಿದ್ದ. ಯ...

ಅಹಾ! ನೀರೆ! ದೇವದಾನವರು ಮೇರುಪರ್ವತವನಿಟ್ಟು ಮ೦ಥಿಸಿದಾಗ, ಆದಿಶೇಷನ ಹಚ್ಚಿ ಕಡೆದಾಗ, ವಿಷಜ್ವಾಲೆಯ ನುಂಗಿ ಅಣಿಗೊಂಡಾಗ,- ಕಲ್ಪತರುವನಿತ್ತೆ! ಕಾಮಧೇನುವನಿತ್ತೆ! ಚಂದ್ರನನ್ನು ಕರುಣಿಸಿದೆ! ಲಕ್ಷ್ಮಿಯನ್ನು ಧಾರೆಯೆರೆದೆ! ಅಮೃತವನ್ನು ಬೀರಿದೆ! ಎಣೆ...

ಗೆಳತಿ ಬಾರೆ ಎಂಥ ಚಲುವಾ ಇಂಥ ಕೆಲಸಾ ಮಾಡಿದಾ ತೂಗು ಮ೦ಚಾ ಹೂವು ಕಟ್ಟಿ ನನ್ನ ತೂಗಿ ಓಡಿದಾ ।। ೧ ।। ಬಳಿಗೆ ಬಂದಾ ಬಂದನೆಂದಾ ಮಟಾಮಾಯವಾದನೆ ನನ್ನ ಕೊಂದು ಕೂಗಿ ನಕ್ಕು ಕಡೆಗೆ ಕಾಣದಾದನೆ ।। ೨ ।। ಸುಟ್ಟ ಮೇಲೆ ಕಟ್ಟ ಕಡೆಗೆ ಕೊಚ್ಚು ಕೊಸರು ಹೋಯಿತ...

ಅಧ್ಯಾಯ ಹದಿನಾರು ಅರವತ್ತರ ದಶಕವು ಕನ್ನಡ ಚಿತ್ರೋದ್ಯಮದ ತೀವ್ರ ಕಲಿಕೆಯ ದಿನಗಳು. ಅದು ತನ್ನ ಉಳಿವಿಗಾಗಿ ಸಿದ್ಧ ಶೈಲಿಯೊಂದರ ಹುಡುಕಾಟದಲ್ಲಿತ್ತು. ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರ ನಿರ್ಮಾಣ ಕೇಂದ್ರ ಮದರಾಸೇ ಆಗಿತ್ತು. ೧೯೬೦ರ ಆರಂಭದಿಂದ...

ಬೇಗ ಬಾ, ಇರುಳ ದೇವಿ ಬಾ, ಬಾ, ತಡೆಯದಿರು ಸಿಂಗರಕೆ, ಬೇಗ ಬಾ, ಬಾ, ಬಾ! ತಾರೆಗಳ ಲಾಸ್ಯವೇಕೆ ಚಂದ್ರಿಕೆಯ ಹಾಸ್ಯವೇಕೆ ಮುಡಿಗೆ ಸಾಕು ಏಳು ಚಿಕ್ಕೆ ಕಿವಿಗೆ ಎರಡು ಓಲೆ! ಮೊಗ್ಗೆಗಿನಿಸು ನಗೆಯನಾಯ್ದು ದಣಿದ ಮನಕೆ ತಣಿವತಂದು ಬೆಂದ ಬಾಳು ಅರಳುವಂತೆ ಬ...

ನನ್ನ ಪಂಕದಲ್ಲಿ ಹುಟ್ಟಿ ಲೇಪವಿಲ್ಲದಿರುವೆ, ನನ್ನ ಪಂಕಜವೆ ! ನನ್ನ ನೀರಲ್ಲಿ ಬೆಳೆದು ನೀರಾಳದಲ್ಲಿರುವೆ, ನನ್ನ ನೀರಜವೆ ! ಒಡೆಯಲು ಬಾರದ ಒಡಪಿನಂತಿರುವೆ, ಬಿಡಿಸಿಲು ಬಾರದ ತೊಡಕಿನಂತಿರುವೆ, ನನ್ನ ಮಾನಸದ ಮದಗವೆ ಮುಳುಗಿ ನೋಡಿದೆ. ಮುದ್ದಿಸಿ ನೋಡ...

ಶಿಷ್ಯರನೇಕರು, ತಮಗೆ ತೋರಿದ ಕಾಣಿಕೆಯಾಗಿ ಬುಟ್ಟಿ, ಹಣ್ಣು, ಹೂವು, ಚಿನ್ನ, ಬೆಳ್ಳಿ, ಹಣ ಮೊದಲಾದವುಗಳನ್ನು ಗುರುಗಳಿಗೆ ತಂದು ಕೊಡುತ್ತಿದ್ದರು. ಶಿಷ್ಯ ರಾಮನಿಗೆ ಎನೂ ತೋಚಲಿಲ್ಲ. ಸೀದಾ ಗುರುಗಳಲ್ಲಿಗೆ ಬಂದು “ನನಗೆ ಏನು ಕಾಣಿಕೆ ಕೊಡಲು ತ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...