ಗೆಳತಿ ಬಾರೆ ಎಂಥ ಚಲುವಾ
ಇಂಥ ಕೆಲಸಾ ಮಾಡಿದಾ
ತೂಗು ಮ೦ಚಾ ಹೂವು ಕಟ್ಟಿ
ನನ್ನ ತೂಗಿ ಓಡಿದಾ ।। ೧ ।।
ಬಳಿಗೆ ಬಂದಾ ಬಂದನೆಂದಾ
ಮಟಾಮಾಯವಾದನೆ
ನನ್ನ ಕೊಂದು ಕೂಗಿ ನಕ್ಕು
ಕಡೆಗೆ ಕಾಣದಾದನೆ ।। ೨ ।।
ಸುಟ್ಟ ಮೇಲೆ ಕಟ್ಟ ಕಡೆಗೆ
ಕೊಚ್ಚು ಕೊಸರು ಹೋಯಿತ
ನನ್ನ ಬೆ೦ಕಿ ಕೆಂಡದಲ್ಲಿ
ಅವನ ಹೆಸರು ಬರೆಯಿತ ।। ೩ ।।
ಅಕಾ ನೋಡು ಇಕಾ ಬಂದಾ
ಲಿಂಗ ಗುರುವು ಜಂಗಮಾ
ದೇವನಗರಿಯ ಹೂವು ತಂದಾ
ಸತ್ತ ಮೇಲೆ ಸಂಗಮಾ ।। ೪ ।
*****


















