ಶಿಷ್ಯರನೇಕರು, ತಮಗೆ ತೋರಿದ ಕಾಣಿಕೆಯಾಗಿ ಬುಟ್ಟಿ, ಹಣ್ಣು, ಹೂವು, ಚಿನ್ನ, ಬೆಳ್ಳಿ, ಹಣ ಮೊದಲಾದವುಗಳನ್ನು ಗುರುಗಳಿಗೆ ತಂದು ಕೊಡುತ್ತಿದ್ದರು. ಶಿಷ್ಯ ರಾಮನಿಗೆ ಎನೂ ತೋಚಲಿಲ್ಲ. ಸೀದಾ ಗುರುಗಳಲ್ಲಿಗೆ ಬಂದು “ನನಗೆ ಏನು ಕಾಣಿಕೆ ಕೊಡಲು ತಿಳಿಯುತ್ತಿಲ್ಲ” ಎಂದ “ಶಿಷ್ಯಾ! ಏಕೆ ಒದ್ದಾಡುತ್ತಿರುವೆ? ಒಣಗಿದ ಕಟ್ಟಗಿಯನ್ನು ಒಂದಿಷ್ಟು ಕೊಡು, ಸಾಕು: ಎಂದರು.
“ಇದೇನು ಗುರುವರ್ಯಾ! ವಿಚಿತ್ರವಾಗಿ ಹೇಳುತ್ತಿದ್ದಿರಿ?” ಎಂದ ಶಿಷ್ಯ. “ಶಿಷ್ಯಾ! ಇದು ನನಗೆ ಅತ್ಯಂತ ಪ್ರಿಯವಾದದ್ದು, ಎಲ್ಲರು ಕೊಡುವ ಚಿನ್ನ, ಬೆಳ್ಳಿ, ಮನೆ, ಹಣ, ಇವುಗಳಲ್ಲಿ ನನಗೆ ಕಿಂಚಿತ್ತು ಬೆಲೆ ಇಲ್ಲ. ನೀನು ಒಣಗಿದ ಕಟ್ಟಿಗೆಯ ಗಂಟು ಕೊಟ್ಟಾಗ ನೀ ಅರಿವಿನ ಮಾರ್ಗದಲ್ಲಿ ನಡೆಯಲು ಅತ್ಯಂತ ಉಪಯೋಗಕಾರಿ.” ಎಂದರು. ಅದು ಹೇಗೆ ಗುರುಗಳೇ?” ಎಂದ. ನಿನ್ನ ಗತ ಬಾಳಿನಿಂದ ದೂರವಿರಿಸಿ, ನಿನ್ನ ಮನದ ನಕಾರಾತ್ಮಕ ಭಾವನೆಗಳನ್ನು ಸುಟ್ಟು, ಜ್ಞಾನದ ಬೆಂಕಿಯಲ್ಲಿ ದಹಿಸಿ ಅರಿವಿನ ಈ ಕ್ಷಣದ ಬೆಳಕಿನ ಮಾರ್ಗ ತೋರುವುದು, ಎಂದಾಗ ಶಿಷ್ಯನ ಎದೆ ತುಂಬಿತು. ಸ್ವಾಮಿರಾಮ ಗುರುಗಳ ಪಾದಕ್ಕೆ ಎರಗಿದ.
*****

















