ಹಾಗಾದರೆ ನಾನೇನೂ ಅಲ್ಲ ಒಂದಿಷ್ಟು ಆಕಾಶ, ಒಂದಿಷ್ಟು ನೆಲ ಹನಿ ನೀರು, ಚೂರು ಇಟ್ಟಿಗೆ, ಮಣ್ಣು ಎಲ್ಲ, ನಾನು ಕಟ್ಟ ಕಡೆಯ ನ್ಯಾಯ, ಮೊಟ್ಟ ಮೊದಲ ಶೋಷಿತೆ. ದಮ್ಮುಗಟ್ಟಿ ಉಸಿರು ಬಿಗಿ ಹಿಡಿದ ಸೆಗಣಿ ಹುಳುವಿನ ದುಡಿಮೆ ನಿರಂತರ ಪೀಡಿತ ಲೋಕದ ಧ್ವನಿಯಿಲ...
ಕೊಪ್ಪಳ ಸಮೀಪದಲ್ಲಿ ಭಾಗ್ಯ ನಗರವಿದೆ. ಅಲ್ಲಿ ವಿನಯ ವೀರೇಶ ಸವಡಿ ಎಂಬ ನಾಲ್ಕು ವರ್‍ಷದ ಬಾಲಕನಿದ್ದಾನೆ. ಮನೆಯಲ್ಲಿ ಕನ್ನಡ, ಶಾಲೆಯಲ್ಲಿ ಕನ್ನಡ, ಸ್ನೇಹಿತರೂ ಕನ್ನಡ ಮಾತನಾಡುವರು. ಶಾಲೆಯಲ್ಲಿ ನೆರೆಹೊರೆಯವರೂ ಕನ್ನಡ ಮಾತನಾಡುವರು. ಈ ಬಾಲಕನ ಅಣ್ಣ...
೧ ಕೆಲಸ ಬೊಗಸೆ ಮುಗಿಸಿ ನಾನು ಬಯಲ ಬೆಳಕ ಬಯಸಿ ನಾನು ದೇವರೊಲುಮೆಗೆಳಸಿ ನಾನು ದಿನವು ದಿನವು ಬೆಳಗಿನಲ್ಲಿ ಮನೆಯ ಬಿಡುವೆನು ಕುಣಿವ ಕುಲಮನಗಳಿಂದ ತಣಿಯುತಿರುವೆನು ೨ ಮಾನ ಧನದ ಪ್ರಾಣಿಯೊಂದು ಸೇನೆ ಸೇರಿ ಸರಗಿ ಒಂದು ಶಿರದ ಮೇಲೆ ಸೆಣಸಿ ನಿಂದು ಕಿರಿ...
ಕಪ್ಪು ಕೋಗಿಲೆ ಕೆಂಪಾಯ್ತು ಸಂಭ್ರಮದಾ ಮನ ಬೆವೆತೋಯ್ತು ಕೆಂಪು ಸೂರ್ಯ ಕೆಂಪಾಗಿಯೆ ಉಳಿದ ಹುಣ್ಣಿಮೆ ಚಂದ್ರ ಕೆಂಪಾದ ಗುಡುಗು ಸಿಡಿಲು ಮಳೆ ಮಿಂಚು ಮೋಡ ಒಂದಾಯಿತು ಕಳೆದಾಮೋದ ಹರಡಿದ ಎಲ್ಲೂ ಇಬ್ಬನಿ ಮಾಲೆ ಕೋಟಿ ಸೂರ್ಯರಿಗೆ ಮರುಜನ್ಮ ಜೊತೆಗೇ ಬಂತು ...
ಎದುರು ಮನೇಲಿ ಇರೋ ಎಳೆವಯಸ್ಸಿನ ಗಂಡಹಂಡತಿನಾ ನೋಡಿದರೆ ಅವರುಗಳದ್ದು ಅರೇಂಜ್ಡ್ ಮ್ಯಾರೇಜ್ ಅನ್ನಿಸೋದಿಲ್ಲ ಕಣ್ರಿ ಅಂದಳು ನಿರ್ಮಲಮ್ಮ. “ಅಯ್ಯೋ! ಯಾಕ್ ಹಂಗಂತಿರ್ರೀ? ಬಲು ಅನುಮಾನ ಬಿಡಿ ನಿಮ್ಗೆ…. ಆದರೆ ನನಗೂ ಹಾಗೆ ಅನ್ಸುತ್ತೆ ...
ಮೂಲ: ತಾರಾಪದ ರಾಯ್ ಹೇಳು ಕಲ್ಕತ್ತಾ, ನನ್ನ ಬಳಿಯಿದ್ದ ಹಸಿರಂಗಿ, ಪಾಸ್ ಪೋರ್ಟುಗಳ ನೆನಪಿದೆಯೆ ನಿನಗೆ? ಪೂರ್ವ ಪಾಕಿಸ್ತಾನದಿಂದ ಓಡುತ್ತ ಬಂದ ರೈಲಿಂದ ಇಳಿದು ಸಿಯಾಲ್ದಾ ನಿಲ್ದಾಣದ ಹೆಬ್ಬಾಗಿಲನ್ನು ದಾಟಿ ಬಂದೆ ಸುರಿಮಳೆಯಲ್ಲಿ. ನನ್ನ ಜೀವನದಲ್ಲ...
ಕೆಲವು ಕಾಲದ ಮೇಲೆ ತಿರುಚನಾಪಳ್ಳಿಯ ಅರಸನು ತನ್ನ ಜಟ್ಟಿಯನ್ನು ಕಾಳಗದಲ್ಲಿ ಕೊಂದವನೇ ಶ್ರೀರಂಗಪಟ್ಟಣದ ಒಡೆತನಕ್ಕೆ ಬಂದನೆಂಬುದನ್ನು ತಿಳಿದು ಭಯಭ್ರಾಂತನಾದನು. ಇಷ್ಟು ಪೌರುಷಸಾಹಸಗಳುಳ್ಳ ಒಡೆಯರು ತಮ್ಮ ರಾಜ್ಯದಮೇಲೆ ಕೈ ಮಾಡಿದರೇನುಗತಿಯೆಂದು ಚಿಂತ...
ಜೀವನದ ಜ್ವಾಲೆಗಳು ಸುಟ್ಟ ಹೃದಯವು ಬೆಂದು ತಾಳಲಾರದೆ ನೋವ, ತನ್ನ ತಾ ಮರೆಯಲೆನೆ ಬಿನದವನೆ ಮರೆಹೊಕ್ಕು ತೋಯುವದು ತಪತಪನೆ ಸರಸಗೋಷ್ಠಿ ವಿಹಾರದೊಂದು ರಚನೆಯಲಿಂದು. ಜಕ್ಕವಕ್ಕಿಗಳ ಬೆಳದಿಂಗಳೂಟವ ತಂದು ತಿನಿಸುವದು. ಹೂಗಣೆಯ ಗುರಿಯನೆಸಗುವ ಸ್ಮರನೆ ಬಂ...
ಜಗದ ಚಿ೦ತೆಗೆ ಯುಗದ ಸಂತೆಗೆ ದೇವ ಗುರುಗಳೆ ಉತ್ತರಾ ಜನುಮ ಜನುಮದ ಜೀವ ಯಾತ್ರೆಗೆ ತಂದೆ ಶ್ರೀಗುರು ಹತ್ತರಾ ಪ್ರೇಮರಾಜ್ಯದ ಪ್ರಭುವ ಮರೆತರೆ ಬರಿ ಕತ್ತಲೊ ಕತ್ತಲಾ ಗುರುವನರಿತಾ ಭುವನವೆಲ್ಲಾ ಲಿಂಗರಾಜ್ಯದ ಕೊತ್ತಳಾ ಆತ್ಮಜ್ಞಾನವೆ ಅಮರ ಜ್ಞಾನವು ಕಣ್...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...







