ಜೀವಜ್ಯೋತಿ ಮಿನುಗುತಿತ್ತು
ರಾಗದೊಲುಮೆ ತೋರಿ,
ಭಾವಬಹಳ ಬೀರುತಿತ್ತು
ಮೆರೆಗನೊರೆಯ ಹಾಡಿ;
ಮನದ ಮುದವ ತೋರುತಿತ್ತು
ಧ್ಯೇಯ ದೂರ ಸೇರಿ,
ಮಾಯರಂಗನೇರಿ ಬಂದು
ಎದೆಯ ಹರುಷ ಹೂಡಿ;
ಕಣ್ಣ ನೋಟ ಚನ್ನ ಚಲುವ
ಈಟಿ ಮೀಟಿ ನೋಡಿ,
ರಂಗಮುಗಿಲ ಬಿಂಬವೇರಿ
ಜತೆಯ ಸೇರಿ ಹಾರಿ;
ಸಣ್ಣ ರಾಗ ತಂತಿಮಿಡಿದು
ಮೋರೆ ಮೊಗ್ಗು ಬೀರಿ,
ಪ್ರಕೃತಿವೃಂದ ವೃಕ್ಷವೇರಿ
ಲಹರಿ ನಲ್ಮೆ ತೂರಿ;
ಜೀವಜ್ಯೋತಿ ಮಿನುಗುತಿತ್ತು
ಲೀಲೆ ಹಿಗ್ಗು ಹಾಡಿ.
*****


















