ಗುರ್ಚಿ ಗುರ್ಚಿ ಎಲ್ಯಾಡಿ ಬಂದಿ
ಹಳ್ಳ ಕೊಳ್ಳ ತಿರುಗ್ಯಾಡಿ ಬಂದೆ.
ಕಾರಮಳೆಯೆ ಕಪ್ಪತಮಳೆಯೆ
ಸುರುಮಳೆಯೆ ಸುರಿಮಳೆಯೆ.
ಸುರಿಮಳೆಯಾದರ ಒಕ್ಕಲಿಗ ಒಕ್ಕಲಿಗ
ಒಕ್ಕಲಿಗಣ್ಣ ಬಿತ್ತೊ ಹೊನ್ನ
ಸುತ್ತ ಸುರಿಯಿತು ಸುರಿಮಳೆಯೊ ಸುರಿಮಳೆಯೊ.
ಹಸರ ಬೆಳೆಯು ಭೂತಾಯಿ ಭೂತಾಯಿ
ಮಗಿಮಳೆಯಾಗಿ ಹೂ ಬೆಳಸಿ ಹೂ ಬೆಳಸಿ.
ಹಕ್ಕಿಯ ಹಬ್ಬ ಹೊಲದಾಗ ಹೊಲದಾಗ
ಕಾರಮಳೆಯೆ ಕಪ್ಪತ ಮಳೆಯೆ
ಸುರುಮಳೆಯೆ ಸುರಿಮಳೆಯೆ.
ಆಯಗಾರಣ್ಣ ಆಯ ಬೇಡೊ
ಕದರ ಸಾಲಿ ಕಂಬಾರ ಕಂಬಾರ.
ಬಿದರಸಾಲಿ ಮಾದಾರ ಮ್ಯಾದಾರ
ಆಯಗಾರನ್ ಹೆಂಡತಿ ಗಂಡ ಹಡೆದಾಳ
ನೆತ್ತಿಗೆ ಎರಿಯಾಕ ನೀರಿಲ್ಲ ನೀರಿಲ್ಲ.
ಕರಿಗಂಬಳೆಯ ಗುರುಸಿದ್ದ ಗುರುಸಿದ್ದ
ಕಂಬಳಿ ಬೀಸಲು ಸುರಿಮಳೆಯ ಸುರಿಮಳೆಯೆ.
ಕಾರ ಮಳೆಯೆ ಕಪ್ಪತ ಮಳೆಯೆ
ಹಳ್ಳ ಕೊಳ್ಳ ತುಂಬಿಸು ಮಳೆಯೆ
ಸುಣ್ಣ ಕೊಡತಿನಿ ಸುರಿಯಲೆ ಮಳೆಯೆ
ಬಣ್ಣ ಕೊಡತಿನಿ ಬಾರೆಲೆ ಮಳೆಯೆ
ಸುರುಮಳೆಯ ಸುರಿಮಳೆಯೆ.
*****

















