ಬಾಲ್ಯದಲ್ಲಿ ತಪ್ಪು ಮಾಡಿದರೆ, ಇನ್ನೂ ವಯಸ್ಸು ಮಾಗದ ಪ್ರಾಯ ಯೌವ್ವನದಲ್ಲಿ ತಪ್ಪು ಮಾಡಿದರೆ, ಅದು ವಯಸ್ಸಿನ ಪ್ರಭಾವ ವೃದ್ಧಾಪ್ಯದಲ್ಲಿ ತಪ್ಪು ಮಾಡಿದರೆ, ಅದು ವಯಸ್ಸಾದ ಪರಿಣಾಮ ಮತ್ತೆ ತಿದ್ದಿಕೊಳ್ಳುವುದು ಯಾವಾಗ? *****...

ಇದು ನಮ್ಮ ಸಮೀಪದೂರಿನ ಒಂದು ಘಟನೆ. ಅದೊಂದು ಸಣ್ಣ ಕೆರೆ. ತಾಯಿ ತನ್ನ ಮೂರುವರ್ಷದ ಕಂದನೊಂದಿಗೆ ಬಟ್ಟೆ ಒಗೆಯಲು ಬಂದವಳು ತನ್ನ ಕೆಲಸದಲ್ಲಿ ತಲ್ಲೀನಳಾಗಿದ್ದಳು. ಮಗು ತನ್ನಷ್ಟಕ್ಕೆ ಪಕ್ಕದಲ್ಲಿ ಆಡುತ್ತ ಆಡುತ್ತ ಸ್ವಲ್ಪ ದೂರ ಸರಿದಿತ್ತಷ್ಟೇ! ಆಗಲೇ...

ತ್ರುಪ್ತಿ ಕಂಡ್ಕೊಂಡವರೀಗ್ ಮಾತ್ರ ಯಿಡಿದ್ ರವಾನ್ಸಿ ಬೂಮೀಗ್ ಅತ್ರ ಮಿಕ್ಕೋರ್‍ಗ್ ಇಲ್ಲಿ ತಾವ್ ಇಲ್ಲಾಂತ ಬಂದಂಗ್ ಯಿಂದಕ್ ಅಟ್ತಿದ್ದೆ- ನಂಗೆ ದೇವರ್ ಪಟ್ಟಿದ್ರೆ! ೧ ಊರಾಗೆಲ್ಲ ರಾಗಿ ಬಿತ್ಸಿ ಕಾಲಿ ಜಾಗದಾಗ್ ಗುಡಿಸಿಲ್ ಎತ್ಸಿ ಬಡವರ್ ಬದಿಕಿನ್ ಒ...

ಬೆರಳು ಬೆರಳುಗಳಲ್ಲಿ, ಕೊರಳು ಕೊರಳಿನಲಿರಿಸಿ, ಸುರುಳುರುಳಿ, ಸುತ್ತಿರುವ ಬಳ್ಳಿಗಳ ಹಾಗಾಗಿ, ಅರಳಿಸುತಲೊಂದೊಂದೆ ಅವಳಿ ಹೂ, ದಿವ್ಯತರ ದೃಷ್ಟಿಯನು ಪಡೆಯುವಂತೆ, ಭರದಿ ಮೈಮೇಲೆಲ್ಲ ಕಣ್ಣಾಗೆ, ಆಗ ಮೈ- ಮರೆತು ನೋಡುತ್ತ ನಿಲ್ಲೋಣ ಸ್ವರ್‍ಲೋಕವನು, ಹರ...

“ಮುದಿತನವನ್ನು ದೂರವಿರಿಸುವ ಗುಟ್ಟೇನು?” ಎಂದು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು. ಗುರು ಹೇಳಿದರು- “ಹುಟ್ಟಿದ ಮಗುವಿನ ಬೆಳವಣಿಗೆ ಜೊತೆ ಜೊತೆಯಾಗಿ ಮುಗ್ಧತೆ ಮುಗುಳುನಗೆ ಬೆಳದು ಚಿರ ಯೌವನ ಉಳಿಯೆ ಮುದಿತನವೆಲ್ಲಿ?” ಎಂದರು. “ಮುಗುಳ...

ಬಾಳ್ ಪಿಡಿವ ಬಂಡಾರಿಗೆಂತೋ ಅಂತೆಮ್ಮ ಬಾಳಿಗಿರಲೊಂದಷ್ಟು ಸಂಯಮ ನಿಯಮ ಬಾಳ ಲೋಚನನ ಒಲಿಸುವ ನೇಮ ಬಾನ ಬೆಳಕನೆ ಬಾಳಾಗಿಸುವ ಹಸುರು ಭಾಗ್ಯವ ಕೆರೆದು ಬೋಳಿಪ ಮುನ್ನ – ವಿಜ್ಞಾನೇಶ್ವರಾ *****...

ಸೆರುಣೆಂದೆ ಸಿವನೀಗೂ ಸೆರುಣೆಂದೇ ಗುರುವೀಗೂ ಸರುಣೆಂದೇ ಸಿವನಾ ಪಾರವತಿಗೂ ಕೋಲೇ || ೧ || ಇನ್ಯಾ ದೇವರಾ ಬಲಗೊಂಡೇ ಕೋಲೇ ಇನ್ಯಾ ದೇವರಾ ಬಲಗೊಂಡೇ…….. ಕೋಲೇ || ೨ || ಇನ್ಯಾ ದೇವರಾ ಬಲಗೊಂಡೇ | ಕೋಲೇ? ತಳದಾ ಚೊಡ್ಯಮ್ಮನಾ ಬಲಗೊಂಡೇ ...

ಬರೆದವರು: Thomas Hardy / Tess of the d’Urbervilles ಮಲ್ಲಿಯು ಏನು ಮಾಡಿದರೂ ಪುಂಸವನವನ್ನು ಒಪ್ಪಳು. ” ಆಗಲ್ಲಿ ಪುಂಸವನಮಾಡಿ, ಆಮೇಲೆ ನನ್ನ ಗರ್ಭದಲ್ಲಿ ರುವ ಮಗು ಗಂಡಾಗಿಹೋಗಲಿ. ಅದೆಲ್ಲಾ ಕೂಡದು. ನನಗೆ ಹೆಣ್ಣೇ ಆಗಬೇಕು.”...

ದೇವನೆ ನಿನ್ನಲ್ಲಿ ನಾನೇನು ಬೇಡಲಿ ನೋಡುವುದಕ್ಕೆ ನನಗೆ ಚಕ್ಷು ನೀಡಿದೆಯಾ ಚಕ್ಷುಗಳಲಿ ನಿನ್ನ ಸ್ವರೂಪ ತೋರೋ ಹಾಗಿಲ್ಲದೆ ಈ ಕಣ್ಣುಗಳೇಕೆ ನೀಡಿದೆಯಾ! ದೇವನೆ ನಿನ್ನಲ್ಲಿ ನಾನೇನು ಬೇಡಲಿ ನುಡಿಯಲು ಎನಗೆ ಜಿವ್ಹೆ ನೀಡಿದೆಯಾ ನಾಲಿಗೆಯ ಮೇಲೆಲ್ಲ ನಿನ್...

ನಾನೂ ಕನಸು ಕಾಣುತ್ತೇನೆ ನನಸು ಮಾಡಿಕೊಳ್ಳುವ ಆಸೆಯಿಂದ ಆದರೆ, ನನ್ನದು ಹಗಲುಗನಸಲ್ಲ ರಾತ್ರಿಯ ಸುಂದರ, ಸುಮಧುರ ಸ್ವಪ್ನ ದಿನಾ ಒಂದೊಂದು ಕನಸು ಆಶಾಗೋಪುರವ ಹತ್ತಿ, ವಾಸ್ತವ ಲೋಕದಿಂದ ಮೇಲೇರಿ ವಿಹರಿಸಿದ ಅನುಭವ ಮುಚ್ಚಿದ ಕಣ್ಣುಗಳೊಳಗೆ ಕಾಣುವ ನಿಜ...

ಅಂಗಳದಲ್ಲೊಂದು ಗುಳ್ಳಿತ್ತು ಅಕ್ಕ ಈಗೆಲ್ಲಿ ಅದು ಮಾಯ್ವಾಯ್ತೊ ಅಕ್ಕ ಯಾರ್‍ಯಾರ ಕಟ್ಕೊಂಡು ಯಾರ್‍ಯಾರ ಬಿಟ್ಕೊಂಡು ಯಾರ್‍ಯಾರ ಮುಟ್ಕೊಂಡು ಹೋಯಿತು ಅಕ್ಕ ಗೋಳ ಗುಂಬಜದಂತೆ ಕೂತಿತ್ತು ಅಕ್ಕ ಒಳ್ಳೆ ಜಂಬದ ಕೋಳಿಯಂತೆ ಬೆಳೆದಿತ್ತು ಅಕ್ಕ ಬೆಳ್ಳಿಯ ಹಡಗ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...