ಸೆರುಣೆಂದೆ ಸಿವನೀಗೂ
ಸೆರುಣೆಂದೇ ಗುರುವೀಗೂ
ಸರುಣೆಂದೇ ಸಿವನಾ ಪಾರವತಿಗೂ ಕೋಲೇ || ೧ ||
ಇನ್ಯಾ ದೇವರಾ ಬಲಗೊಂಡೇ ಕೋಲೇ
ಇನ್ಯಾ ದೇವರಾ ಬಲಗೊಂಡೇ…….. ಕೋಲೇ || ೨ ||
ಇನ್ಯಾ ದೇವರಾ ಬಲಗೊಂಡೇ | ಕೋಲೇ?
ತಳದಾ ಚೊಡ್ಯಮ್ಮನಾ ಬಲಗೊಂಡೇ | ಕೋಲೇ || ೩ ||
ಇನ್ಯಾ ದೇವರಾ ಬಲಗೊಂಡೇ | ಕೋಲೇ
ತಳದಾ ಮಂಜನಾ ಬಲಗೊಂಡೇ | ಕೋಲೇ? || ೪ ||
ಇನ್ಯಾ ದೇವರಾ ಬಲಗೊಂಡೇ | ಕೋಲೇ?
ತಳದಾ ಗಣಪತೀ ಬಲಗೊಂಡೇ | ಕೋಲೇ || ೫ ||
ಇನ್ಯಾ ದೇವರಾ ಬಲಗೊಂಡೇ ಕೋಲೇ?
ತಳದಾ ಈಸ್ವಾ ರಾನಾ ಬಲಗೊಂಡೇ ಕೋಲೇ || ೬ ||
ದೇಸ ದೇಸಾ ನಾ ತಿರಗೀನಾ
ಮೂರು ದಾಸಾಳಾ ಹೂವ ತಂದೇ || ೭ ||
ದಾಸಳಾ ಹೂವ ಮುಡಿಯೇ ಜಾಣೆ
ದಾಸರೀ ದಾಕಾಗಿ ಹೋದ || ೮ ||
*****
ಹೇಳಿದವರು: ಗಣಪ ಸುಬ್ಬಗೌಡ, ಮೊಳೇ ಸಾಲು
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.