“ಮುದಿತನವನ್ನು ದೂರವಿರಿಸುವ ಗುಟ್ಟೇನು?” ಎಂದು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು.

ಗುರು ಹೇಳಿದರು- “ಹುಟ್ಟಿದ ಮಗುವಿನ ಬೆಳವಣಿಗೆ ಜೊತೆ ಜೊತೆಯಾಗಿ ಮುಗ್ಧತೆ ಮುಗುಳುನಗೆ ಬೆಳದು ಚಿರ ಯೌವನ ಉಳಿಯೆ ಮುದಿತನವೆಲ್ಲಿ?” ಎಂದರು.

“ಮುಗುಳು ನಗೆಯ ಕೊಲೆಯೆ ಮುದಿತನವೆಂದರು. ಮಗುವನ್ನು ಬೆಳಸುವಾಗ ಮಗುವನ್ನು ಉಳಿಸುವುದೇ ಬಾಳ ಸೂತ್ರವಾಗಬೇಕು.” ಎಂದರು.
*****