ದೇವನೆ ನಿನ್ನಲ್ಲಿ ನಾನೇನು ಬೇಡಲಿ
ನೋಡುವುದಕ್ಕೆ ನನಗೆ ಚಕ್ಷು ನೀಡಿದೆಯಾ
ಚಕ್ಷುಗಳಲಿ ನಿನ್ನ ಸ್ವರೂಪ ತೋರೋ
ಹಾಗಿಲ್ಲದೆ ಈ ಕಣ್ಣುಗಳೇಕೆ ನೀಡಿದೆಯಾ!
ದೇವನೆ ನಿನ್ನಲ್ಲಿ ನಾನೇನು ಬೇಡಲಿ
ನುಡಿಯಲು ಎನಗೆ ಜಿವ್ಹೆ ನೀಡಿದೆಯಾ
ನಾಲಿಗೆಯ ಮೇಲೆಲ್ಲ ನಿನ್ನ ನಾಮ ಹಾಡಲಿ
ಹಾಗಿಲ್ಲದೆ ಈ ನಾಲಿಗೆಯೇಕೆ! ನೀಡಿದಯಾ!
ದೇವನೆ ನಿನ್ನಲ್ಲಿ ನಾನೇನು ಬೇಡಲಿ
ಆಲಿಸಲು ಏನಗೆ ಕರ್ಣಂಗಳೇಕೆ ನೀಡಿದೆಯಾ
ನಿನ್ನ ಮಹಿಮೆ ನಾನು ಕೇಳುವಂತಾಗಲಿ
ಹಾಗಿಲ್ಲದೆ ಈ ಕರ್ಣಂಗಳೇಕೆ ನೀಡಿದೆಯೊ!
ದೇವನೆ ನಿನ್ನಲ್ಲಿ ನಾನೇನು ಬೇಡಲಿ
ಕಾರ್ಯವೆಸಗಲು ಉತ್ತಮ ಕರಗಳ ನೀಡಿದೆಯಾ
ನಿನ್ನ ಭಜನೆಯೇ ನಿತ್ಯ ಮಾಡುತ್ತಿರಲಿ
ಹಾಗಿಲ್ಲದೆ ಈ ಕೈಗಳೇಕೆ ನೀಡಿದೆಯಾ!
ದೇವನೆ ನಿನ್ನಲ್ಲಿ ನಾನೇನು ಬೇಡಲಿ
ಒಳಹೊರಗುಗಳ ಅರಿಯುವ ಮನವ ನೀಡಿದೆಯಾ
ಮಾಣಿಕ್ಯ ವಿಠಲನ ನೆನಯುತ್ತಿರಲಿ
ಹಾಗಿಲ್ಲದೆ ಈ ತನುಮನಗಳೇಕೆ ನೀಡಿದೆಯಾ!
*****