
ಧೂಳು ತುಂಬಿದ ಪುಸ್ತಕಗಳ ಮೇಲೆಲ್ಲಾ ಹಲ್ಲಿ ಹುಳ ಜಿರಲೆಗಳ ಕ್ರಿಕೆಟ್ ಆಟ ಪ್ರಾಕ್ಟಿಸ್ ಮಾಡಲು ಪ್ರಶಸ್ತ ಸ್ಥಳ ಹನ್ನೆರಡೂ ತಿಂಗಳು. *****...
ಮಣ್ಣ ಸೇರಿ ಮೊಳೆವ ಮೊದಲೆ ಕುಡಿ ಬೀಜವ ಹಿಂಡಿ ಹಿಪ್ಪೆ ಮಾಡಿ ಕೊಂದರು ಗಾಣ ದಾರಿ ದೀಪಗಳಲ್ಲಿ ಎಣ್ಣೆಯಾಗಿ ನೀಡುತ್ತದೆ ಬೆಳಕಿನ ಪ್ರಾಣ *****...
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ. ಏನಪ್ಪಾ, ಇವತ್ತು ಬೆಳಿಗ್ಗೇನೇ ಏನು ಗ್ರಹಚಾರ ಕಾದಿದೆಯೋ ಎಂದು ಮನದಲ್...
ಕುಡಿಯ ಬೇಡವೆಂದರೂ ಕೇಳಲಿಲ್ಲ ಹಿತನುಡಿ ಕುಡಿದು ಕುಡಿದು ತಂದುಕೊಂಡ ಸಾವಿನಗಡಿ ಆಮೇಲೆ ಬುದ್ಧಿ ಬಂದರೇನು? ಬಿಡಿ ವ್ಯರ್‍ಥವಾಯಿತು ಮಾನವಜನ್ಮ ನೋಡಿ *****...
ಇಲ್ಲ…. ನಾನು ಕಣದಲ್ಲಿಲ್ಲ ಚಪ್ಪರ ಹಾರ ತುರಾಯಿಗಳೆ ಚಪ್ಪಾಳೆ ಶಿಳ್ಳೆ ಕೇಕೆಗಳೆ ನಾನು ಕಣದಲ್ಲಿಲ್ಲ. ಹೊಗಳಿಕೆಯ ಹೊನ್ನ ಶೂಲಗಳೆ ಭರವಸೆಯ ಬಿರುಸು ಬಾಣಗಳೆ ನಾನು ಕಣದಲ್ಲಿಲ್ಲ. ಎದುರಾಳಿಯ ಇರಿಯಲು ಸಿದ್ದವಾಗಿರುವ ಕತ್ತಿಗಳೆ ನನ್ನನ್ನು ಕಾಪಾ...
ಇತ್ತಲಾ ವೇದವತೀ ನಗರದಲ್ಲಿ ರಾಜನು ತಪಸ್ಸಿಗೆ ಹೋದುದು ಮೊದಲಾಗಿ ಪರಮ ಪತಿವ್ರತೆಯಾದ ಶೀಲವತಿಯು ತನ್ನ ಪತಿಗೆ ಯಾವಾಗಲೂ ಶುಭವನ್ನೇ ಬಯಸುತ್ತ, ಆತನು ಯತ್ನಿಸಿದ್ದ ಕಾರ್ಯದಲ್ಲಿ ಜಯಶಾಲಿಯಾಗಿ ಇರುವಂತೆ ಅನುಗ್ರಹಿಸಲು ತ್ರಿಕಾಲದಲ್ಲಿಯೂ ಸರ್ವಮಂಗಳೆಯನ್...
ಗೋಡೆ ಗಟ್ಟಿಯಿದ್ದರೆ ಎಷ್ಟು ಬೇಕಾದರೂ ಯಾವಾಗ ಬೇಕಾದರೂ ಬಣ್ಣ ಬಳಿಯಬಹುದು ಅಮ್ಮನ ಬುದ್ದಿವಾದ. ಅದೇಕೋ ಅಕ್ಕ ಅಸಹಾಯಕಳಾಗಿ ಕುಸಿದು ಕೂತಿದ್ದಾಳೆ. ಚೊಚ್ಚಿಲ ಹೆರಿಗೆ ಶಿವನ ಪಾದ ಸೇರಿದೆ ಕಂದ. ಹಸಿಗೋಡೆಗೆ ಬಣ್ಣ ನಿಲ್ಲದು ಅಪ್ಪ ಆಗಾಗ ಉಚ್ಚರಿಸುತ್ತಿ...
ರಾ ಎಂಬುದಾಗಿತ್ತು ನಿನ್ನ ಹೆಸರು ಹಲವು ಕಾಲದ ತನಕ ನೈಲ್ ನದಿಯ ಆಚೀಚೆಗೆ ನೀನೊಬ್ಬನೇ ದೇವರು ಹೊಲಗದ್ದೆ ನಿನ್ನ ದಿನದಿನದ ಉದಯ ಅಸ್ತಮಾನಗಳಲ್ಲಿ ಅಗಿ ಫಲವತ್ತು ತುಂಬಿದ ಕಣಜ ನಿನ್ನ ಅಪಾರ ದಯ ನದಿನೀರು ಕೂಡ ಹಾಗೆಯೇ ಹರಿದಿತ್ತು ಅರಿತಿದ್ದೆವು ನಾವದರ...
ಕಿಡಿಕಿಯಿಂದ ಬೆಳಕು ತೂರಿಬಂದಿದೆ; ಬೆಳಗಾಗಿದೆ. ಆದರೆ ಸೂರ್ಯನು ಮೋಡದಲ್ಲಿ ಮರೆಯಾಗಿದ್ದಾನೆ. ಮಳೆಯೂ ಬಾರದು, ಬಿಸಿಲೂ ಬೀಳದು. ಪ್ರಕೃತಿ ಅಳುತ್ತಲೂ ಇಲ್ಲ, ನಗುತ್ತಲೂ ಇಲ್ಲ. ಹಾಸಿಗೆಯ ಮೇಲೆ ಇನ್ನೂ ಬಿದ್ದುಕೊಂಡಿದ್ದ ನಾನು ನಿದ್ದೆಯ ಮಂಪರಿನಲ್ಲಿದ...
ದುಡ್ಡಿದ್ದರೆ ಉಂಗುರ ತಗೋ ಇಲ್ಲದಿದ್ದರೆ ತುಟಿಯ ತುದಿಯ ಮುತ್ತುಕೊಡು. ಏನೂ ತೋಚದಿದ್ದರೆ ನನ್ನೊಡನೆ ಬಾ. ಆಮೇಲೆ ಯಾಕೆಬಂದೆನೋ ಅನ್ನಬಾರದು, ಅಷ್ಟೆ. ಬೆಳಗಿನಲ್ಲಿ ಸೌದೆ ಆರಿಸುತ್ತೀ. ನಿನ್ನ ಕೈಯಲ್ಲಿ ಅವು ಹೂಗಳಾಗುತ್ತವೆ. ದಳ ಎತ್ತಿಕೊಳ್ಳುತ್ತಿದ್...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
















