ಮಣ್ಣ ಸೇರಿ
ಮೊಳೆವ ಮೊದಲೆ
ಕುಡಿ ಬೀಜವ
ಹಿಂಡಿ ಹಿಪ್ಪೆ ಮಾಡಿ
ಕೊಂದರು ಗಾಣ
ದಾರಿ ದೀಪಗಳಲ್ಲಿ
ಎಣ್ಣೆಯಾಗಿ ನೀಡುತ್ತದೆ
ಬೆಳಕಿನ ಪ್ರಾಣ
*****