ವೃಕ್ಷವನ್ನು ನೋಡುತ್ತಾ ಅದರ ಭೂಗತ ನೆಲೆಯನ್ನು ಕಂಡುಕೊಂಡಿರುವೆ. ಆಗಸದಲೆಲ್ಲಾ ರೆಕ್ಕೆ ಬಡಿದು ಅಳೆಯುವ ಪಕ್ಷಿಯು ನೆಲೆ ಗೂಡೆಂದು ಕಂಡು ಕೊಂಡಿರವೆ. “ಶಿಷ್ಯನೆ! ಈಗ ನಿನ್ನ ಸರದಿ, ನೀನು ನಿನ್ನ ನೆಲೆ ಇರುವುದು ಎಲ್ಲಿ ಎಂದು ಹೇಳಬಲ್ಲೆಯಾ?” ಎಂದರು ಗುರುಗಳು.
“ಗುರುಗಳೇ! ಅದು ಬಹಳ ಕಷ್ಟ, ನಮಗೆ ಕ್ಷಣಕ್ಕೊಂದು ನೆಲೆ ಮನದಲ್ಲಿ ನೆಲೆಸಿರುವ ನನಗೆ ಮನವು ಓಡುವೆಡೆ ಕ್ಷಣಕ್ಕೊಂದು ನೆಲೆ” ಎಂದ ಶಿಷ್ಯ.
“ಅದೇನು ಎಂಬುದನ್ನು ತಿಳಿಯ ಹೇಳು” ಎಂದರು ಗುರುಗಳು.
“ಮನದಲ್ಲಿ ನೆಲೆಸಿರುವೆನೆಂದು ತಿಳಿಯುವಾಗ ಮನೆಯಲ್ಲಿ ನೆಲೆಸಿರುವೆ. ಚಿಂತನೆಯಲ್ಲಿ ತೇಲಿರುವೆ ಎನ್ನುವಾಗ ಚಿಂತೆಯಲ್ಲಿ ಕಾಲ ನೂಕಿರುವೆ. ನಕ್ಷತ್ರ ನೋಡುವಾಗ ಆಗಸದಲ್ಲಿ ನೆಲೆ ಇರುವೆ. ಗುಡುಗನ್ನು ಆಲಿಸುವಾಗ ಮೋಡದಲ್ಲಿ ನೆಲೆಸಿರುವೆ. ಬೆಳದಿಂಗಳನ್ನು ಸವಿಯುವಾಗ ಚಂದ್ರಮನಲ್ಲಿ ನೆಲಸಿರುವೆ, ನಾವೆಯಲ್ಲಿ ತೇಲುವಾಗ ನದಿಯಲ್ಲಿ ನೆಲೆಸಿರುವೆ. ಹೂವನ್ನು ನೋಡುವಾಗ ವನದಲ್ಲಿ ನೆಲಸಿರುವೆ. ಭಾವದಲ್ಲಿರುವಾಗ ಭಕ್ತಿಯಲ್ಲಿ, ಬೆಳಕಿನಲ್ಲಿರುವಾಗ ಜ್ಞಾನದಲ್ಲಿ, ಕರ್ಮದಲ್ಲಿರುವಾಗ ಕ್ರಿಯೆಯಲ್ಲಿ, ಸತೃಕತಿಯಲ್ಲಿರುವಾಗ ಸಂಸ್ಕೃತಿಯಲ್ಲಿ, ಕಾಮನೆಯಲ್ಲಿರುವಾಗ ಕಾಮನಬಿಲ್ಲಿನಲ್ಲಿ, ಧೃತಿಯಲ್ಲಿರುವಾಗ ಕೃತಿಯಲ್ಲಿ, ಗೀತದಲ್ಲಿರುವಾಗ ಸಂಗೀತದಲ್ಲಿ, ಶ್ವಾಸದಲ್ಲಿರುವಾಗ ವಿಶ್ವಾಸದಲ್ಲಿ, ಮಾತಿನಲ್ಲಿರುವಾಗ ಮೌನದಲ್ಲಿ, ಬೇಸರದಲ್ಲಿರುವಾಗ ಆಸರದಲ್ಲಿ, ಆಶೆಯಲ್ಲಿರುವಾಗ ಬಯಕೆಯಲ್ಲಿ, ಸಂಗದಲ್ಲಿರುವಾಗ ಏಕಾಂತದಲ್ಲಿ, ಜಗದಲ್ಲಿರುವಾಗ ಅಂತರಂಗದಲ್ಲಿ, ಪ್ರಾಣನಲ್ಲಿರುವಾಗ ಪ್ರಜ್ಞೆಯಲ್ಲಿ, ಹಾದಿಯಲ್ಲಿರುವಾಗ ಆದಿ ಅಂತ್ಯದಲ್ಲಿ, ರಾಗದಲ್ಲಿರುವಾಗ ಅನುರಾಗ ವಿರಾಗದಲ್ಲಿ, ತಾಳದಲ್ಲಿರುವಾಗ ನರ್ತನದಲ್ಲಿ, ವಿಚಾರದಲ್ಲಿರುವಾಗ ಆಚಾರ ಪ್ರಚಾರದಲ್ಲಿ, ನಿಲುವಿನಲ್ಲಿರುವಾಗ ನಿರ್ಣಯದಲ್ಲಿ, ಗುರುವೊಡನೆ ಇರುವಾಗ ಗುರುತರದಲ್ಲಿ, ದಿಗಂತದಲ್ಲಿರುವಾಗ ಅನಂತದಲ್ಲಿ, ಸಂತ ರೋಡರಿರುವಾಗ ಭಗವಂತನಲ್ಲಿ, ಆತ್ಮನಲ್ಲಿರುವಾಗ ಪರಮಾತ್ಮನಲ್ಲಿ ನೆಲೆಗೊಂಡಿರುವೆ. ನೋಡಿದಿರಾ! ಗುರುಗಳೇ! ಕ್ಷಣಕ್ಕೊಂದು ನೆಲೆ ಈ ಮನಕ್ಕೆ”- ಎಂದ ಶಿಷ್ಯ.
“ಆತ್ಮವು ಪರಮಾತ್ಮನಲ್ಲಿ ನೆಲೆಗೊಂಡಿರುವುದು ಎಂಬುದು ತಿಳಿಯಲು ನಿನ್ನ ಮನವು ನಡೆದು ಬಂದು ಕೊನೆ ಮುಟ್ಟುವ ಘಟ್ಟ ಅದೇ ಸತ್ಯದ ಹುಟ್ಟು, ಅದೇ ಎಲ್ಲರ ನೆಲೆ ಎಂದಾಗ ಗುರು ಶಿಷ್ಯರ ಹೃದಯ ನೆಲೆ ಒಂದಾಯಿತು.
*****

















