ಸೋಲೇ ಇಲ್ಲ!

ಇಲ್ಲ…. ನಾನು ಕಣದಲ್ಲಿಲ್ಲ

ಚಪ್ಪರ ಹಾರ ತುರಾಯಿಗಳೆ
ಚಪ್ಪಾಳೆ ಶಿಳ್ಳೆ ಕೇಕೆಗಳೆ
ನಾನು ಕಣದಲ್ಲಿಲ್ಲ.

ಹೊಗಳಿಕೆಯ ಹೊನ್ನ ಶೂಲಗಳೆ
ಭರವಸೆಯ ಬಿರುಸು ಬಾಣಗಳೆ
ನಾನು ಕಣದಲ್ಲಿಲ್ಲ.

ಎದುರಾಳಿಯ ಇರಿಯಲು
ಸಿದ್ದವಾಗಿರುವ ಕತ್ತಿಗಳೆ
ನನ್ನನ್ನು ಕಾಪಾಡಲು
ಕಾದಿರುವ ಗುರಾಣಿಗಳೆ
ನಾನು ಕಣದಲ್ಲಿಲ್ಲ.

ಗೆಲುವಿನ ಗೌರಿಶಂಕರನೆ ಹೇಳು-
ನಿನ್ನ ಮೆಟ್ಟಿದವರು
ಮುಟ್ಟಿದರೇನು ಆಕಾಶ?

ಗೆಲುವಿನ ಗಾಳಿಪಟವೇ ಹೇಳು-
ಎಷ್ಟು ನಿಮಿಷ?
ಈ ಹರುಷ? ಈ ಹಾರಾಟ?

ಪಾತರಗಿತ್ತಿಯೇ ಪದ್ಮಪತ್ರವೇ
ಎಂಥಾ ಓಟ? ಎಂಥಾ ನೋಟ!
ಕಲಿಸಿದಿರಿ ಪಾಠ ನಮಸ್ಕಾರ.

ಇಲ್ಲ….
ಕಾಲುಗಳಿಗೆ ಬಲವಿಲ್ಲ
ಕೈಗಳು ಸಹಕರಿಸುತ್ತಿಲ್ಲ
ಕಣ್ಣು, ಮೂಗು, ಕಿವಿ, ತುಟಿ
ಯಾವುದೂ ಹಿಂದಿನಂತಿಲ್ಲ.

ಮಿದುಳ ಮರದೊಳಗೆ
ಮರದ ಮರೆಯೊಳಗೆ
ಮೂಡಿಹನು ಚಂದಿರ
ಬೆಳದಿಂಗಳು
ಬಯಲು ಮಾಡಿದೆ-
ಗೆಲ್ಲ ಬಯಸದವನಿಗೆ
ಸೋಲೆ ಇಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಜಯ ವಿಲಾಸ – ದ್ವಿತೀಯ ತರಂಗ
Next post ಹಿತನುಡಿ

ಸಣ್ಣ ಕತೆ

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…