ಒಂದಾನೊಂದು ಕಾಡಿನಲ್ಲಿ ಸಿಂಹ ದಂಪತಿಗಳು ಇದ್ದವು. ಸಿಂಹಿಯು ಒಂದು ಸಲ “ಎರಡು ಮರಿಗಳನ್ನು ಈದಿತು. ಸಿಂಹವು ದಿನವೂ ಹೋಗಿ ಬೇಟೆಯಾಡಿ ಆ ತಾಯಿ ಮಕ್ಕಳಿಗೆ ಮಾಂಸವನ್ನು ತಂದುಕೊಡುತ್ತಿತ್ತು. ಒಂದು ದಿನ ಬೇಟೆಯಿಂದ ಬರುವಾಗ ಒಂದು ನರಿಯ ಎಳೆಯ ಮರಿಯು ಸಿಕ್ಕಲು, ಸಿಂಹವು ಅದನ್ನು ತಂದು ಹೆಂಡತಿಗೆ ಕೊಟ್ಟಿತು....

ಶ್ರೀರಂಗಪಟ್ಟಣವು ಕೈಸೇರಿದ ಮೇಲೆ ಒಡೆಯರ ರಾಜ್ಯವು ಕ್ರಮವಾಗಿ ಬಳೆಯಿತು; ರಾಜ್ಯವು ಹೆಚ್ಚಿದಂತೆ ವೆಚ್ಚವೂ ಹೆಚ್ಚಿತು. ರಾಜಒಡೆಯರು ಉಪಾಯದಿಂದ ನಿರ್ವಹಿಸುತ್ತಿದ್ದರು. ಕಂಠೀರವ ಒಡೆಯರು ಹಣದ ತೊಂದರೆ ಬಂದಾಗ ಒಂದು ಉಪಾಯವನ್ನು ಮಾಡಿದರು; ಧನಿಕರೆಂದು...

ಅರ್ಧ ತಂದೊಡ್ಡಿರುವ ಹಿರಿ ಸಮಸ್ಯೆಗೆ ಸೋತು ಕಾಮ ಹರವಿರುವಿಂದ್ರಜಾಲದೆಳೆಯಲಿ ಸಿಲುಕಿ ಧರ್‍ಮ ಕಲೆಹಾಕಿರುವ ಸಂಕಟಗಳಿಗೆ ಜೋತು ಬಿದ್ದ ಪರಿಹಾರವನ್ನು ನಿಲುಕಲಾರದೆ ನಿಲುಕಿ,- ಮೋಕ್ಷದಾ ದಾರಿಯನು ಹೊನ್ನಿ ಹುಳಗಳ ತೆರದಿ ಕಲ್ಪನೆಗಳಲೆದಾಡಿ, ಚಲಿಸಲಾರದೆ...

ಅರುಹೆ ಗುರುವು ಕುರುಹೆ ಲಿಂಗ ಯಾಕೆ ಅಂತರಾ ಆದಿ ಗುರುವು ನಾದ ಜ೦ಗಮ ಬೇಡ ಬೆಂತರಾ ಕನಸು ನೀನೆ ಮನಸು ನೀನೆ ಚೈತ್ರ ಚಂದ್ರಮಾ ಯೋಗ ಭೋಗ ಜೀವ ರಾಗ ವಿಶ್ವ ಸ೦ಗಮಾ ಸೋಲು ಗೆಲುವು ನೋವು ನಲಿವು ಲಿಂಗ ಲೀಲೆಯು ಜನನ ಮರಣ ಬಾಳ ಪಯಣ ಹರನ ಕರುಣೆಯು ಒಡಲ ಕಡಲ ...

ಅಧ್ಯಾಯ ಆರು ಕನ್ನಡದ ನಾಟಕಗಳ ಕಂಪನ್ನು ದಕ್ಷಿಣ ಭಾರತದಾದ್ಯಂತ ಮತ್ತು ದೂರದ ಮುಂಬೈವರೆಗೆ ಹರಡಿದ ಕೀರ್ತಿ ಗುಬ್ಬಿ ಕಂಪನಿಗೆ ಸಲ್ಲಬೇಕು. ಕನ್ನಡದ ಮನರಂಜನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಸಂಸ್ಥೆಗಳಲ್ಲಿ ಗುಬ್ಬಿ ಕಂಪನಿಗೆ ಅಗ್ರಸ್ಥಾನ ಸಲ್ಲಲೇಬ...

ಬಾ ಬಾರೆ ರಾಧಿಕೆ ಶೂನ್ಯವಾದ, ದೀನವಾದ ನನ್ನ ಹೃದಯಕೆ! ಗರುವದ ಶಿಲೆ ಕತ್ತರಿಸಿದೆ ವಿನಯದ ಶೆಲೆ ಹೊರ ಹೊಮ್ಮಿದೆ ಬಾರೆಲೆ ತಡವೇಕೆ ಬಾ ಬಾರೆ ರಾಧಿಕೆ! ವನವನದಲಿ ಸಂಚರಿಸಿದೆ ನಿನ್ನ ಹೆಸರನುಚ್ಚರಿಸಿದೆ ಕರೆದೆ ಸಖಿಯೆ ಸನಿಹಕೆ ಬಾ ಬಾರೆ ರಾಧಿಕೆ! ಬೇರೆ...

ಹಂಗ ಹಿಂಗಿಸಲು ಬಂದೆಯೊ? ಭವವ ಭಂಗಿಸಲು ಬಂದೆಯೊ? ಜಗದಿ ಏತಕ್ಕೆ ಬಂದೆನ್ನ ರಂಗನಾಥಾ! ಮಂಗಲಕೆ ಮಂಗಲವೆ! ತಂಗಲು ಬಂದೆಯೊ-ನನ್ನ ತೊಡೆಯ ಮೇಲೆ? ನನ್ನುಡಿಯ ತೊಟ್ಟಿಲಲ್ಲಿ ಕಾಲಿಟ್ಟ ಕಾರಣವೇನು? ನನ್ನ ಕನಸಿನ ನನೆಯೇ! ನನ್ನ ಕನಸಿನ ಕೆನೆಯೆ! ಹಣ್ಣಾಗುವೆ...

ಆಶ್ರಮದಲ್ಲಿ ಕೆಲವು ಶಿಷ್ಯರು ಸೇರಿ ಗಾಳಿಪಟ ಹಾರಿಸುತ್ತಿದ್ದರು. ಒಬ್ಬ ಶಿಷ್ಯ ಹೇಳಿದ- “ಗಾಳಿಪಟ ಮೇಲಕ್ಕೆ ಹಾರುತ್ತಿದೆ” ಎಂದು. ಮತ್ತೊಬ್ಬ ಹೇಳಿದ- “ಗಾಳಿಪಟ ಕೆಳಕ್ಕೆ ಇಳಿಯುತ್ತಿದೆ” ಎಂದು. “ಗಾಳಿಪಟ ಮೇಲಕ್ಕೆ, ಕೆಳಕ್ಕೆ ...

ಹೃಸ್ವವಾಗುತಿದೆ ವಿಶ್ವದಿನದರ್‍ಥ ದಿನದಿನವು ವಿಶ್ವ ಶ್ವಾಸವನವಗಣಿಸಿದಭಿವೃದ್ಧಿ ಪಥ ಪಂಥ ಹೊಸ ಹೊಸತು ಹೊಸಕುತಿರೆ ಹಸುರ ಹಂದರ ಕಸು ಕಳೆದು ಧೂಳಾಗುತಿದೆ ದಮ್ಮಿಗಾಸ್ಪದವಾಗಿ ವರ್‍ಷದೆಲ್ಲ ದಿನ ಮುಗಿದಿಹುದೆಮ್ಮ ದೌಷ್ಟ್ಯದ ನೆನಪಾಗಿ – ವಿಜ್ಞಾ...

(ಅತ್ತೆ ನಾಗಮ್ಮ, ಸೊಸೆ ಹೊನ್ನಮ್ಮ) (ಪ್ರತಿ ಸಾಲಿನ ಕೊನೆಗೆ ‘ಲೇಗಿಣಿ ಯೇಗಿಣಿಯೇ’ ಎನ್ನಬೇಕು) ಅತ್ತೆ ನಾಗಮ್ಮ, ಸೊಸೆ ಹೂನ್ನಮ್ಮ ಲೇಗಿಣಿ ಯೇಗೆಣಿಯೇ ಮಗುಗೆ ಆದಾರೆ ದಂಡಿನ ಕರಿಯ ಲೇಗಿಣಿ ಯೇಗಿಣಿಯೇ ||೧|| “ಕೇಳಲೆ ಕೇಳಲ್ಲೇ ನನ್ನಲು ತಾಯೆ ...

ಮಾರನೇ ದಿನ ಹುಸೇನ್ ಊರಿಗೆ ಬಾರ್ವಾಗ ಖುಷಿಯಾಗಿದ್ದ. ನಾನಾದ್ರೂ ಶಾಲೆ ಹತ್ರಾನೇ ಠಳಾಯಿಸ್ತಿದ್ದೆ. ಆತ ಏನೇ ಖುಷಿ ಇದ್ರೂ ಮೊದ್ಲು ಹೇಳೋದು ಟೀಚರಮ್ಮಂಗೆ ಅಂತ ನಂಗೊತ್ತಿತ್ತು. ಒಂದೊಂದ್ಸಾರಿ ನಂಗನ್ನುಸ್ತಿತ್ತು : ಇವರಿಬ್ಬರ ಸಂಬಂಧ ಎಂಥಾದ್ದು? ಯಾಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...