ಅರುಹೆ ಗುರುವು ಕುರುಹೆ ಲಿಂಗ
ಯಾಕೆ ಅಂತರಾ
ಆದಿ ಗುರುವು ನಾದ ಜ೦ಗಮ
ಬೇಡ ಬೆಂತರಾ
ಕನಸು ನೀನೆ ಮನಸು ನೀನೆ
ಚೈತ್ರ ಚಂದ್ರಮಾ
ಯೋಗ ಭೋಗ ಜೀವ ರಾಗ
ವಿಶ್ವ ಸ೦ಗಮಾ
ಸೋಲು ಗೆಲುವು ನೋವು ನಲಿವು
ಲಿಂಗ ಲೀಲೆಯು
ಜನನ ಮರಣ ಬಾಳ ಪಯಣ
ಹರನ ಕರುಣೆಯು
ಒಡಲ ಕಡಲ ಮನದ ಮಡಿಲ
ಗುರುವೆ ಅಂಬಿಗಾ
ಇರಳು ನೀನೆ ಬೆಳಕು ನೀನೆ
ಗುರುವೆ ನ೦ಬಿಗಾ
*****



















