ಅರ್ಧ ತಂದೊಡ್ಡಿರುವ ಹಿರಿ ಸಮಸ್ಯೆಗೆ ಸೋತು
ಕಾಮ ಹರವಿರುವಿಂದ್ರಜಾಲದೆಳೆಯಲಿ ಸಿಲುಕಿ
ಧರ್‍ಮ ಕಲೆಹಾಕಿರುವ ಸಂಕಟಗಳಿಗೆ ಜೋತು
ಬಿದ್ದ ಪರಿಹಾರವನ್ನು ನಿಲುಕಲಾರದೆ ನಿಲುಕಿ,-
ಮೋಕ್ಷದಾ ದಾರಿಯನು ಹೊನ್ನಿ ಹುಳಗಳ ತೆರದಿ
ಕಲ್ಪನೆಗಳಲೆದಾಡಿ, ಚಲಿಸಲಾರದೆ ನಿರೆಯ,
ಘೋರತರವಾಗಿಸಲು, ಕಡುನೊಂದು ಸಂಗರದಿ
ಜೀವವಾಲ್ಪರಿಯುತಿದೆ, ನೋಡುತಿದ ದಶದಿಶೆಯ.
ಎಲ್ಲಿಂದಲೋ ಬಂದ ಶಾಂತಿದೂತನು, ನೋಡು !
ಅಂದು ದೈವೀ ಕರುಣೆ ನಿನ್ನ ರಕ್ಷಿಸಿದಂತೆ
ಮತ್ತ ಸಲಹುವದೆಂಬ ಭರವಸೆಯ ಪಡೆ! ಓಡು!
ಬಾಳಿರದು ಪ್ರತಿ ಕ್ಷಣವು ನೀ ಪ್ರತೀಕ್ಷಿಸಿದಂತೆ.
ತಮದ ವರ್‍ತುಲವಹುದು ಬಾಳುವೆಯು ಅಂದು, ಇಂದು;
ಜ್ಯೋತಿಮಯವಾಗುವುದು ದ್ಯೋತಿಸಲು ಪ್ರಾಣಬಿಂದು.
*****



















