ಆಶ್ರಮದಲ್ಲಿ ಕೆಲವು ಶಿಷ್ಯರು ಸೇರಿ ಗಾಳಿಪಟ ಹಾರಿಸುತ್ತಿದ್ದರು.
ಒಬ್ಬ ಶಿಷ್ಯ ಹೇಳಿದ- “ಗಾಳಿಪಟ ಮೇಲಕ್ಕೆ ಹಾರುತ್ತಿದೆ” ಎಂದು.
ಮತ್ತೊಬ್ಬ ಹೇಳಿದ- “ಗಾಳಿಪಟ ಕೆಳಕ್ಕೆ ಇಳಿಯುತ್ತಿದೆ” ಎಂದು.
“ಗಾಳಿಪಟ ಮೇಲಕ್ಕೆ, ಕೆಳಕ್ಕೆ ಹೋಗುತ್ತಿದೆ” ಎಂದ ಮತ್ತೊಬ್ಬ.
ಶಿಷ್ಯರ ಮಾತನ್ನು ಕೇಳಿಸಿಕೊಂಡ ಗುರುಗಳು ಹೇಳಿದರು- “ಗಾಳಿಪಟ ತೇಲುತ್ತಾ ಹಾರುವುದು, ಕುಂಟುತ್ತಾ ಕೆಳಕ್ಕೆ ಬರುವುದು ಇಲ್ಲ, ಮೇಲಕ್ಕೆ, ಕೆಳಕ್ಕೆ ಹಾರುವುದು, ಎಲ್ಲಾ ನಿಮ್ಮ ಕೈ ಚಲನೆ ಇಂದ. ನಿಮ್ಮ ಚಿತ್ತದ ಚಲನೆಯಿಂದ ನಿಮ್ಮ ಕೈ ತಪ್ಪಿದರೆ, ಗಾಳಿಪಟ ತೇಲುತ್ತಾ ಹಾರುವುದೇ?” ಎಂದಾಗ ಗುರುಗಳ ಮಾತಿನ ಮರ್ಮವರಿತರು ಶಿಷ್ಯಂದಿರು.
*****


















