ಎಲ್ಲಿ ನೋಡಲಲ್ಲಿ ಕಣ್ಣು ಕಾಣುತಿಹೆದು ಕೆಮ್ಮಣ್ಣು! ಸುತ್ತ ಮುತ್ತ ನೋಡು ಮಿತ್ರ ಪ್ರಕೃತಿಯಾ ಕೃತಿ ವಿಚಿತ್ರ! ತನ್ನ ರೂಪ ತಾನೆ ನೋಡಿ ಮೆಚ್ಚಿ ಮೋದದಿಂದ ಹಾಡಿ ಸುರಿಸುತಿಹಳೊ ಪ್ರಕೃತಿಮಾತೆ ಕಣ್ಣನೀರನೆಂಬೊಲೊರತೆ- ಯೊಂದು ನೋಡು ಬೀಳುತಿಹುದು! ನೊರೆಯ ನಗೆಯು ಏಳುತಿಹುದು! ಇದೋ! ನುಣುಪುಕಲ್ಲ ನಲ್ಲ ಮುತ್ತನಿಡಲು ...

ರಸ್ತೆ ಬದಿಯಲ್ಲಿ ಮುದುರಿ ಮಲಗಿರುವ ಮುದುಕನಿಗೆಷ್ಟು ಪ್ರಾಯ? ಅರಿತವರ್ಯಾರು? ಅರಿತರೂ ಹೇಳುವವರ್ಯಾರಿದ್ದಾರೆ ಹೇಳಿ? ಹಿಂದಿಲ್ಲ, ಮುಂದಿಲ್ಲ ಕೇಳುವವರಾರಿಲ್ಲ ಅವನ ವ್ಯಥೆ ಒಮ್ಮೊಮ್ಮೆ ಗೊಣಗುತ್ತಾನೆ ತನ್ನಷ್ಟಕ್ಕೆ ಅದ್ಯಾವ ಕಥೆಯೋ ಆತನದ್ದು? ನಗುತ್...

ಕ್ಷುಬ್ಧ ಸಾಗರದಂತೆ ಅಲ್ಲೋಲಕಲ್ಲೋಲ ನನ್ನಂತರಂಗದಲ್ಲಿ ಹೃದಯವಿಂದು ಕುದಿಯುತಿದೆ ಉಕ್ಕುತಿದೆ ಬತ್ತುತಿದೆ ಒಂದೊಂದು ನನ್ನಾತ್ಮ ಬಿಂದು ಯಾವ ತಪ್ಪಿಗೆ ಯಾವ ಶಿಕ್ಷೆಯಿದೊ ಕಾಣೆನು ಸರ್‍ವ ಕ್ಷಮೆ ಯಾಚಿಸಲು ನಾನಿಂದು ಸಿದ್ಧನು ಏನ ಮಾಡಲು ಹೊರಟು ಏನಾಯಿತ...

ಸ್ಫುರ್ಜದೂರ್ಜಸ್ವಿತೆಯ ಚೈತನ್ಯದೊಂದೆಳೆಗೆ ಜನ್ಮಲಯಲಯಗತಿಯೊಳುಳಿಯೇಟ ಹೊಡೆದು ಕಾಲ ಬಲುಹಿಂದಣದ ಅದನೆ ಆ ಜೀವವನೆ ಕಂಡರಿಸಿದೀ ತನುವು ಹೊಸದು ನನ್ನದಿದು; ಬಗೆಬಗೆಯ ಪರಿಸರದ ವಾಸ್ತವವ್ಯಾಘಾತ- ದೊಳಗಿರವ ನೆಲೆಗೊಳಿಸಿ ಹದುಳದೊಳು ನಡೆಸಿ ಜ್ಞಾನಾರ್ಜನೋಪ...

ಹಾಳುಬಿದ್ದ ಗೋಡೆಗಳ ಮೇಲೆ ಬೆಳೆದಿದ್ದ ಹುಲ್ಲುಗರಿಕೆ ಬಣ್ಣಗೆಟ್ಟ ಬಾಗಿಲು ಸರಳ ಚೌಕಟ್ಟು ಕುಸರಿಲ್ಲ ಕೆತ್ತನೆ ಕಲಾತ್ಮಕತೆಯಿಲ್ಲ ಬೋಳು ಬೋಳಾದ ಬಾಗಿಲು ಬಿಸಿಲು, ಮಳೆಗೆ ಕಪ್ಪಿಟ್ಟ ಕದಗಳು ಬಡಿದಿದ್ದ ಪಟ್ಟಿಗಳು ಈಗೋ ಆಗೋ ಉದುರುವ ತುಕ್ಕುಹಿಡಿದ ಮಳೆ...

ಬಹಳ ಹಿಂದೆ- ಭವ್ಯ ಭಾರತ ಕಂಡ ಅಪ್ರತಿಮ ಅಧ್ಯಾತ್ಮಿಕ ತತ್ವ ಸಿದ್ಧಾಂತಿ ಮಹಾ ಸಿದ್ಧಿ ಸಾಧಕರೊಬ್ಬರಿದ್ದರು. ಅವರ ಹೆಸರು- ರಮಣ ಮಹರ್ಷಿಗಳೆಂದು. ಅವರಿಗೆ ಬಹಳ ಜನ ಶಿಷ್ಯರಿದ್ದರು. ಅವರಲ್ಲಿ ಮರುಳ ಸಿದ್ದಯ್ಯ, ಬಸಪ್ಪಯ್ಯ ವಲಿಯ, ಸೀನ, ಮೃತ್ಯುಂಜಯ, ರ...

ಟಾಕಿಗೇನೊ ತೋಚಿತು ಮಸಿಯ ಗುಟಕ ಕುಡಿದು ಚುಟಕ- ಗಳನು ಅದೇ ಗೀಜಿತು ಅದರ ಮಾಟಕೆನ್ನ ನೋಟ ಒಲಿದು ಎದೆಗೆ ಬಾಚಿತು ಚುಟಕ ಬಹಳ ನಾಚಿತು! *****...

ಕೋಗಿಲೆ ಕೆಂಪಾಯ್ತು ಹಾಡು ರಂಗಾಯ್ತು ತಗ್ಗು ದಿಣ್ಣೆಗಳ ಹಲ ಕಾಲದ ಸೀಮೆ ಒಡೆದು ಚೂರಾಯ್ತು ಮೂಡಣದಲಿ ಸೂರ್ಯ ಹೊಸ ಬೆಳಕನು ತಂದ ಕತ್ತಲುಂಡ ಹಳೆ ಜಗದ ಮಂದಿಗೆ ಹೊಸ ಜಗವ ತೆರೆದ ಬೆಳದಿಂಗಳ ಚಂದ್ರ ಓಕುಳಿಯನು ಎರೆದ ಭ್ರಷ್ಟವಾದ ನೂರೊಂದು ಬಣ್ಣಕೆ ಹೊಸ ಭ...

ಪಾಪ! ದೊಂಗಣ್ಣಗೆ ಅರ್‍ಮಳ್ಳು ಕಣಾ! ಯಾರ ಅಂವನ ಕಡಿಗೆ ಬಂದ್ರು ಹೆದ್ರಕಂತಿನ ಕಣಾ! ಏನಾಯ್ತೇನಾ? ಬರೀ ಹುಳ.. ಹುಳ.. ಮೈಮ್ಯಾನೆ ಹುಳ ಹರಿದಾಡ್ತಿದು ಅಂತೇ ಕೆರಕಂತೆ ಇರುದೇ ಕಣಾ! ಏನೇನ ಆತೀದೇನ! ಈಗೀಗೆ. ಕಲಿಗಾಲ! ಎನ್ನುತ್ತಾ ರುಕ್ಕು ಹೆಂಡತಿ ಮಮ್ಮ...

ಕೊಬ್ಬರಿ ಬೆಲ್ಲ ಹಿಡಿದು ಪುಟ್ಟ ಚಪ್ಪರಿಸಿ ತಿಂದು ಕುಣಿದು ಕುಣಿದೆ ಬಿಟ್ಟ ನಕ್ಕು ನಲಿದು ತಿರುಗಿ ತಿರುಗಿ ಹಪ್ಪಾಳೆ ತಿಪ್ಪಾಳೆ ಆಡಿ ಆಡಿ ಆಟ ಆಡಿ ಚಂದಮಾಮನ ಹಿಡಿದೇ ಬಿಟ್ಟ *****...

ಮೂಲ: ಮಣೀಂದ್ರ ಗುಪ್ತ “ವಿಶ್ವಪ್ರಳಯದ ಬಳಿಕ ಹೊಸ ಜಗತ್ತಿನ ಸೃಷ್ಟಿ ಆಗಬೇಕಿದೆ ಅಂತ ಇಟ್ಟುಕೊ ಭಾರಿ ತೇಜೋಗೋಲ ಕಾಣಿಸುತ್ತಿದೆ ಅಗೋ ಆಕಾಶದಲ್ಲಿ ಹೇಳು ನೋಡೋಣ ಆ ಹೊಸಗೋಲದಲ್ಲಿ ಏನೇನಿರಬೇಕು ಅಂತ ಬಯಸುತ್ತೀಯೆ ನೀನು?” “ಸೂರ್ಯ, ಚಂದ್ರ, ಗಾಳಿ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...