ಕಾರಿರುಳ ಜೊತೆ ಸೇರಿ ಕಣ್ಗೆ ಮಂಕನು ತೂರಿ ಕಂಡಿತಹ ನನಗೊಂದು ಮಿಂಚುಹುಳುವು. ಕತ್ತಲಿನ ಕಡಲಿನೊಳು ತೇಲ್ವ ಕಿರುದೋಣಿಯೊಳು ಮಂಕಾಗಿ ಮಿನುಗುತಿಹ ಹಣತೆಯೇನೋ ಇರದು! ಎಂದಿಗುಮಿರದು! ನಿಶೆಯ ಜಡೆಯೊಳು ಮೆರೆದು ಹೊಳೆಯುತಿಹ ವಜ್ರದಾಭರಣವೇನೋ. ನಿಶೆಯು ಹಬ್...