ಎಲ್ಲಿ ನೋಡಲಲ್ಲಿ ಕಣ್ಣು ಕಾಣುತಿಹೆದು ಕೆಮ್ಮಣ್ಣು! ಸುತ್ತ ಮುತ್ತ ನೋಡು ಮಿತ್ರ ಪ್ರಕೃತಿಯಾ ಕೃತಿ ವಿಚಿತ್ರ! ತನ್ನ ರೂಪ ತಾನೆ ನೋಡಿ ಮೆಚ್ಚಿ ಮೋದದಿಂದ ಹಾಡಿ ಸುರಿಸುತಿಹಳೊ ಪ್ರಕೃತಿಮಾತೆ ಕಣ್ಣನೀರನೆಂಬೊಲೊರತೆ- ಯೊಂದು ನೋಡು ಬೀಳುತಿಹುದು! ನೊರೆಯ ನಗೆಯು ಏಳುತಿಹುದು! ಇದೋ! ನುಣುಪುಕಲ್ಲ ನಲ್ಲ ಮುತ್ತನಿಡಲು ...

ಗೋವಿಂದ ನಿನ್ನ ನೆನಪುಗಳು ನಿತ್ಯ ನನ್ನ ಮನದಲಿ ಕಾಡಿರಲಿ ಯಾವ ವಿಚಾರಕ್ಕೆ ಲಗ್ಗೆ ಹಾಕದಂತೆ ನಿನ್ನ ಗುಣಗಾನ ಮಾಡಿರಲಿ ಯಾರ ರೂಪ ಚಿತ್ರಿಸಿದಂತೆ ನನ್ನ ಎದೆ ಖಾಲಿ ಇರಲಿ ಈ ಹೃದಯದ ತುಂಬೆಲ್ಲ ನಿನ್ನ ದರುಶನ ಖಯಾಲಿ ಇರಲಿ ಯಾರ ನುಡಿಯು ಕೇಳದಂತೆ ನನ್ನ ...

ಮಜ್ಜನಕ್ಕಾಗಿ ನಡೆದಿದೆ ಸೂರ್ಯನ ಪಡುವಣದ ಪಯಣ ಹಾಸಿಚೆಲ್ಲಿದೆ ಕೆಂಪನೆಯ ಜಮಖಾನ ಸೂರ್ಯನ ರಾತ್ರಿಯ ನಿದಿರೆಗಾಗಿ ಹಾರುತಿರುವ ಹಕ್ಕಿಗಳ ಆತುರ ಗೂಡು ಸೇರುವ ಕಾತುರ ಒಂದಿಷ್ಟು ಚಿಲಿಪಿಲಿಯ ಸದ್ದು ರಂಗಿನ ಸಂಜೆಗೆ ಮತ್ತಷ್ಟು ಸೊಬಗು ಕಡಲ ಮರಳಿನಲ್ಲಿ ಮನ...

ದೋಣಿಯೊಂದು ಹುಟ್ಟು ನಿನಗೆ ದೋಣಿಯೊಂದು ಹುಟ್ಟು ನನಗೆ ದೋಣಿಯೊಂದೆ ಯಾನವೊಂದೆ ಜೀವ ನದಿಯು ಒಂದೆಯೆ ಎಲ್ಲಿ ಯಾಕೆ ಸಾಗುತ್ತಿದೆ ತಿಳಿಯದು ನದಿ ನೀರಿಗೂ ಇರುವತನಕ ಹರಿವುದೊಂದೆ ಇರುವ ಗತಿಯು ಜೀವಿಗೂ ಹಕ್ಕಿ ನೀನು ಹಕ್ಕಿ ನಾನು ಗೂಡು ನಮ್ಮದೊಂದೆಯೆ ಎಲ...

ತಾಂ ತೂರಿ ಬರುತಿರುವ ಮನಮನದ ಮಾಧ್ಯಮದ ಚಿತ್ರಚಿತ್ರಾಕೃತಿಯ ತಳೆದೆಸೆವ ಬೆಳಕೋ ಅವಿಭಾಜ್ಯವಾಗಿಯೂ ನೆನೆವವರ ಹಿತವರಿತು ರೂಪಿನುಪದೆಯ ಭೂಮೆ ಪತಿಕರಿಪ ತಳಕೋ ಧ್ಯಾನಗಹ್ವರಮುಖದಿ ಕಣ್ಣು ಕಪ್ಪಲುಬೀಳೆ ಅಂಗಾಂಗದೊಳು ಚೆಲುವ ಹೊಳೆಸುತಿಹ ಕಳೆಯೋ ರೂಪಮಿದಮಾನ...

ಎಂದೋ-ಯಾರೋ ಉರುಳಿಸಿದ ಖಂಡಿತ ಮಂದಿರ, ಮಸೀದಿಗಳ ಅಡಿಪಾಯದಡಿಯಲ್ಲಿ ನನ್ನನ್ನೇಕೆ ಸಿಕ್ಕಿಸುವಿರಿ ಯಾರೋ ಉರುಳಿಸಿದ ಮಂದಿರಗಳ ಭಾರ ನನ್ನ ಹೆಗಲಿಗೇಕೆ ಹೊರಿಸುವಿರಿ? ಯಾರೋ ಮಾಡಿದ ತಪ್ಪಿಗೆ ನನಗೇಕೆ ಬರೆ? ಛಿದ್ರಗೊಂಡ ಮಂದಿರದ ಕಲ್ಲುಗಳನ್ನೆತ್ತಿ ನನ್ನ...

ವೈಫೈ ಉಪಯೋಗಗಳು : ಮನೆಯಲ್ಲಿಯ ಹಿರಿಯರ ಆರೋಗ್ಯವನ್ನು ಆಗಿಂದಾಗ್ಗೆ ಎಲ್ಲಿದ್ದರೂ ವಿಚಾರಿಸಿ ಕೊಳ್ಳಬಹುದು. ಇಂಟೆಲ್‌ ಮೂಲಕ ಅವರ ಸ್ವಭಾವಗಳನ್ನು ಅಧ್ಯಯನ ಮಾಡಬಹುದು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಈ ವೈಪೈ ಸಂಕೇತಗಳನ್ನು ನೀಡುತ್ತದೆ. ರ...

ನಾಡಿನ ಹಿರಿ ಕಿರಿ ಮಕ್ಕಳಿಗೀ ಮರಿ- ಪುಸ್ತಕವನು ನಾ ನೀಡುವೆನು ಚಿಕ್ಕವರೆಲ್ಲಾ ದೊಡ್ಡವರಾಗಿ ದೊಡ್ಡವರೆಲ್ಲಾ ಚಿಕ್ಕವರಾಗಿ ಬೆಳೆಯುವುದನು ನಾ ನೋಡುವೆನು *****...

ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್ಮ ಪುರುಷನಿಗ್ಯಾವುದು ಧರ್ಮ ಧರ್ಮವ ಹೇರಿದ ತಪ್ಪಿಗೆ ಕಾವಲು ಇವನ ಕರ್ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ ಬಾಯಿಂದ ಈ ಮಾತ...

ಮಂಗಳೂರು ವಿಮಾನ ನಿಲ್ದಾಣ. ಆಗ ತಾನೇ ನೆಲದಲ್ಲಿ ನೆಲೆನಿಂತ ವಿಮಾನದಿಂದ ಇಳಿದ ಯುವಕನೊಬ್ಬ ಜಾತ್ರೆಯ ತೇರನ್ನು ಕೈಯಲ್ಲಿ ಎಳೆದು ತರುವಂತೆ, ತನ್ನ ದಪ್ಪನೆಯ ಸೂಟ್‌ಕೇಸನ್ನು ಎಳೆದುಕೊಂಡು ಬರುತ್ತಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯೆಲ್ಲಾ ಮುಗ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...