ವೈಫೈ ಉಪಯೋಗಗಳು : ಮನೆಯಲ್ಲಿಯ ಹಿರಿಯರ ಆರೋಗ್ಯವನ್ನು ಆಗಿಂದಾಗ್ಗೆ ಎಲ್ಲಿದ್ದರೂ ವಿಚಾರಿಸಿ ಕೊಳ್ಳಬಹುದು. ಇಂಟೆಲ್ ಮೂಲಕ ಅವರ ಸ್ವಭಾವಗಳನ್ನು ಅಧ್ಯಯನ ಮಾಡಬಹುದು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಈ ವೈಪೈ ಸಂಕೇತಗಳನ್ನು ನೀಡುತ್ತದೆ. ರೇಡಿಯೋ ತರಂಗಗಳನ್ನು ಪತ್ತೆ ಹಚ್ಚುವ ಚಿಪ್‌ನಲ್ಲಿ ನಿಮ್ಮ ವೈದ್ಯಕೀಯ ಇತಿಹಾಸವನ್ನು ಸಂಗ್ರಹಿಸಬಹುದು. ಅದನ್ನು ನಿಮ್ಮಗಡಿಯಾರದೊಳಗೋ, ಆಭರಣ ದೊಳಗೋ ಬಚ್ಚಿಟ್ಟು ಕೊಳ್ಳಬಹುದು. ಮಕ್ಕಳ ವಿಚಾರದಲ್ಲಿ ಇದು ತುಂಬ ಅನುಕೂಲ. ಶಾಲೆಯಲ್ಲಿರುವ ಆಯಾಕೂಡ ಇವನ್ನು ಕಂಪ್ಯೂಟರನಲ್ಲಿಹಾಕಿ ನೋಡಬಹುದು. ಮನೆಯಾಚೆ ಹೋದ ಮಕ್ಕಳು ಹೇಗಿದ್ದಾರಪ್ಪ ಎಂದು ತಲೆಕೆಡಿಸಿಕೊಳ್ಳುವ ಅಮ್ಮಂದಿರರಿಗೆ ವೈಪೈ ಇದ್ದರೆ ನಿಶ್ಚಿಂತೆ. ರೇಡಿಯೋ ತರಂಗ ಪತ್ತೆ ಹಚ್ಚುವ ಚಿಪ್‌ನಲ್ಲಿ ಮಕ್ಕಳ ಹೆಸರನ್ನು ಸಂಗ್ರಹಿಸಿಟ್ಟುಕೊಂಡರೆ ಸಾಕು. ಆ ಮೂಲಕ ಅವರೆಲ್ಲಿದ್ದರೂ ಅವರ ಜತೆ ಸಂಪರ್ಕ ಸಾಧಿಸಬಹುದು. ಕಾರು ಓಡಿಸುತ್ತಿರುವ ಮಗನನ್ನು ಹದ್ದುಬಸ್ತಿನಲ್ಲಿಡಬಹುದು. ವೈಫೈಯಲ್ಲಿ ಟಿ.ವಿ ಕಾರ್ಯಕ್ರಮಗಳನ್ನು ನೋಡಬಹುದು. ನಿಮಗಿಷ್ಟವಿರುವ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಿಕೊಳ್ಳಬಹುದು. ಅಷ್ಟೇಕೆ ನಿಮ್ಮ ಮನೆಯಲ್ಲೇನಾದರೂ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದರೆ, ಅದರ ನೇರ ಪ್ರಸಾರವನ್ನು ಸಂಬಂಧಿಕರಿಗೆ ತಲುಪಿಸಬಹುದು. ಅವರ ಹೆಸರಲ್ಲೊಂದು ವೆಬ್‌ಸೈಟ್ ಇದ್ದರೆ ಸಾಕಷ್ಟೆ. ನಿಮ್ಮಲ್ಲಿರುವ ಬೆಲೆಬಾಳುವ ವಸ್ತುಗಳ ಬಗ್ಗೆ ಪಕ್ಕದ ಅಂಗಡಿಗೆ ಮಾಹಿತಿ ಕೊಟ್ಟರೆ ಸಾಕು. ಅದಕ್ಕೆ ಯಾರಾದರೂ ಬೇಡಿಕೆ ಸಲ್ಲಿಸಿದರೆ ತಕ್ಷಣ ಅಂಗಡಿಯಾತ ನಿಮಗೆ ಮಾಹಿತಿ ತಲುಪಿಸಬಹುದು. ಹಾದು ಹೋಗುವ ದಾರಿಯಲ್ಲಿ ಟ್ರಾಫಿಕ್‌ಜಾಮ್ ಆಗಿದ್ದರೆ ತಕ್ಷಣ ಈ ಕಂಪ್ಯೂಟರ್ ನಿಮ್ಮನ್ನು ಎಚ್ಚರಿಸುತ್ತದೆ. ನೀವು ಪ್ರಯಾಣ ಮಾಡುತ್ತಿದ್ದರೆ ವಿಡಿಯೋ ಕಾನ್ಫರೇನ್ಸ್ ಮೂಲಕ ಮನೆಯವರ ಯೋಗ ಕ್ಷೇಮ ವಿಚಾರಿಸಬಹುದು. ಬೆನ್ನು ಮುರಿಯುವಂತಹ ಪುಸ್ತಕಗಳನ್ನು ಹೊತ್ತುತಿರುಗುವ ಮಕ್ಕಳಿಗೂ ಇದು ಅನುಕೂಲ. ನಮ್ಮೆಲ ಪಠ್ಯಗಳನು ಕಂಪ್ಯೂಟರ್ ಒಳಗೆ ಹಾಕಿ ಆರಾಮವಾಗಿ ಓಡಾಡಬಹುದು.
ಅಮೇರಿಕಾ ದೇಶದಲ್ಲಿ ಇನ್ನೊಂದು ವಿಶಿಷ್ಟವಾದ ಕಂಪ್ಯೂಟರ್ ಮೊಬೈಲ್ Phone ನನ್ನು ಕಂಡು ಹಿಡಿಯಲಾಗಿದೆ. ಇಲ್ಲಿಯ ಹಾಕಿನ್ಸ್ ಕಂಪನಿ ಹೊರತಂದಿರುವ ಹೊಸ ಮೊಬೈಲ್‌ಗೊಂದು ಕಂಪ್ಯೂಟರ್ ಕೀ ಬೋರ್‍ಡ್ ಕೂಡ ಅಟ್ಯಾಚ್ ಆಗಿದೆ. ಮತ್ತೊಂದು Phone ಮುಚ್ಚಿಕೊಂಡಿದ್ದರೆ ಸೆಲ್ Phone ಬಿಚ್ಚಿದರೆ ಕಂಪ್ಯುಟರ್ ಕಾಣುತ್ತದೆ. ಇನ್ನು ಕೆಲವು ವರ್ಷಗಳ ನಂತರ ಯಾರೂ ಕಂಪ್ಯೂಟರನ್ನೇ ಕೊಂಡುವಂತಿಲ್ಲ. ಏಕೆಂದರೆ ಈ ಪ್ರತಿ ಮೊಬೈಲ್ Phone ರಲ್ಲಿಯೇ ಎಲವೂ ಇದೆ; ಎಂದು ನಿರ್ಮಾಪಕರು ಹೇಳುತ್ತಾರೆ. ಈ ಫೋನ್‌ನಲಿ ಮಾತಾಡಿದ್ದು ಸೊಗಸಾದ ಭಾಷೆಯಲ್ಲಿ ರೀಕಾರ್ಡ್ ಆಗುತ್ತದೆ. ಅದನ್ನೇ ದಾಖಲೆಯಾಗಿ ಸೆವ್ ಮಾಡಿಕೊಳ್ಳಬಹುದು. ಬಾಯಿಮಾತು ಎಂದು ತಳ್ಳಿಹಾಕುವಂತಿಲ್ಲ ಮಾತಾಡಿದ್ದೆಲ್ಲ ಅಲ್ಲಿ ಸಂಗ್ರಹವಾಗಿ ಬಿಡುತ್ತದೆ. ಆಗ ಮಾತಿಗೆ ನಿಜಕ್ಕೂ ಬೆಲೆ ಬರುತ್ತದೆ. ಹತ್ತು ವಾರಗಳ ಹಿಂದೆ ಹೇಳಿದ್ದನ್ನು ಈವೊತ್ತು ಆಡಿದ ಮಾತಿಗೆ ತಾಳೆ ಹಾಕಬಹುದು. ಸ್ಯಾಮ್ಸಂಗ್ ಸಂಸ್ಥೆ ಉಪಗ್ರಹ ಚಾನಲ್‌ಗಳ ಸಂಕೇತಗಳನ್ನು ಸ್ವೀಕರಿಸುವಂತಹ ಫೋನನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇಡೀ ಜಗತ್ತು ನಿಮ್ಮ ಮುಷ್ಟಿಯಲ್ಲಿರುತ್ತದೆ. ನೀವು ಎಲ್ಲಿಗೆ ಹೋಗುತ್ತೀರಿ? ಏನು ಮಾಡುತ್ತೀರಿ? ಅನ್ನುವುದನ್ನು ನಿಮ್ಮ ಪೋಲಿಸರಿಂದ ಹಿಡಿದು ನಿಮ್ಮ ಹೆಂಡತಿಯ ತನಕ ಯಾರಿಗೆ ಬೇಕಾದರೂ ತಿಳಿಸಬಹುದು.
*****



















