ಎಲ್ಲಿ ನೋಡಲಲ್ಲಿ ಕಣ್ಣು ಕಾಣುತಿಹೆದು ಕೆಮ್ಮಣ್ಣು! ಸುತ್ತ ಮುತ್ತ ನೋಡು ಮಿತ್ರ ಪ್ರಕೃತಿಯಾ ಕೃತಿ ವಿಚಿತ್ರ! ತನ್ನ ರೂಪ ತಾನೆ ನೋಡಿ ಮೆಚ್ಚಿ ಮೋದದಿಂದ ಹಾಡಿ ಸುರಿಸುತಿಹಳೊ ಪ್ರಕೃತಿಮಾತೆ ಕಣ್ಣನೀರನೆಂಬೊಲೊರತೆ- ಯೊಂದು ನೋಡು ಬೀಳುತಿಹುದು! ನೊರೆಯ ನಗೆಯು ಏಳುತಿಹುದು! ಇದೋ! ನುಣುಪುಕಲ್ಲ ನಲ್ಲ ಮುತ್ತನಿಡಲು ...

ನಾನೀಗ ಹೇಳಹೊರಟಿರುವುದು ನಮ್ಮೂರಿನ ಹುಸೇನ್ ಕತೆಯನ್ನು. ಇದು ಹುಸೇನ್ ಒಬ್ಬನ ಕತೆಯಲ್ಲ. ಹಾಗಂತ ನಮ್ಮೂರ ಕತೆಯೂ ಅಲ್ಲ, ಹುಸೇನ್ ಆಚೆಗೂ ಇದು ಚಾಚಿಕೊಳ್ಳಬಹುದು; ನಮ್ಮೂರ ಆಚೆಗೂ ವಿಸ್ತರಿಸಿಕೊಳ್ಳಬಹುದು. ಹುಸೇನ್ ಮೂಲಕ ಊರು, ಊರಿನ ಮೂಲಕ ದೇಶ &#82...

ಯುಗ ಯುಗದಿಂದ ಕಾತರಿಸಿವೆ ಈ ಕಂಗಳು ನಿನಗಾಗಿ ಬಣ್ಣದ ಆಟಿಗೆಗಳು ನನಗೆ ತೋರಿ ನೋಡುತ್ತಿರುವ ಕೃಷ್ಣ ಮರೆಯಾಗಿ ನೀ ನಿಲ್ಲದ ನನಗೇಕೆ ಈ ಜಗವು ಮತ್ತೆ ಮಾಯೆ ಮೋಜುಗಳೇತಕೆ! ನನ್ನವನಿಗೆ ನಾನು ಕಳಕೊಂಡು ಏನು ಪಡೆದರೂ ಏತಕೆ! ಎದೆಯ ಗರ್ಭದಲಿ ನಿನ್ನ ರೂಪ ನ...

ನಾನು ಕವಿಯಲ್ಲ; ಆದರೆ ಕವನಗಳನ್ನು ಬರೆಯಬಲ್ಲೆ ಒಂದಿಷ್ಟು ಕುತೂಹಲದಿಂದ, ನನ್ನ ಮನದ ಸಂತೋಷಕ್ಕಾಗಿ ಪದಪುಂಜವ ಜೋಡಿಸಿ ಭಾವನೆಯೆಳೆಯನ್ನು ಬಿಡಿಸಿ ಪದಗಳಿಗೆ ಭಾವನೆಯೆಂಬ ವಸ್ತ್ರವನ್ನು ತೊಡಿಸುತ್ತೇನೆ ಕವನದ ರೂಪದಲ್ಲಿ ಮನದ ಮೂಲೆಯಲ್ಲೆಲ್ಲೋ ಅಡಗಿದ ಕ...

ಯಾರು ಏನು ಯಾಕೆ ಎಂದು ಹೇಳುವವರು ಯಾರು ಇಲ್ಲ ಕೇಳುವವರೆ ಎಲ್ಲರು ಮರವು ತಾನೆ ಏರದು ದಾರಿ ತಾನೆ ನಡೆಯದು ಕತೆಯು ತಾನೆ ಹೇಳದು ಕವಿತೆ ತಾನೆ ಹಾಡದು ಎಲ್ಲಿ ಕಾರ್‍ಯ ಕಾರಣ ಮಳೆಯು ತಾನೆ ಸುರಿಯದು ನದಿಯು ತಾನೆ ಹರಿಯದು ಕಡಲು ತಾನೆ ಉಕ್ಕದು ನೌಕೆ ತಾನ...

ರೂವಾರಿ ರೂವಿಟ್ಟ ಕಲ್ಲಲ್ಲ, ಮೂರ್ತಿಯಿದು, ಎಂತೆಂದರಂತಾಗಬಲ್ಲ ಬಯಲಲ್ಲ, ಮನುಜನಳಲಿಂ ಮೂಡಿದೊಲುಮೆಮಾತ್ರವಿದಲ್ಲ, ನ್ಯಾಯನಡೆಸುವ ನಿಷ್ಠುರದ ನಿಯತಿಯಲ್ಲ. ಜಡದಿಂದ ಜೀವಕ್ಕೆ ಜೀವದಿಂದಾತ್ಮಕ್ಕೆ ಆತ್ಮದಿಂ ರಸಪದಕೆ ಇರವನಿದ ಸೆಳೆವ ಚೇತನಾಯಸ್ಕಾಂತ ಜಾನ...

ಖುರಪುಟದ ಹೆಜ್ಜೆ ಬಡಿತದ ಶಬ್ದ, ಭಗ್ನ ಅವಶೇಷಗಳಡಿ ಕಾಲನ ಉಸಿರು ಮುರಿದು ಬಿದ್ದಚಕ್ರದ ಗಾಲಿ, ಗಡಿಯಾರ ಮುಳ್ಳಿನ ರಿಂಗಣ ಕಾಮನ ಬಿಲ್ಲಿನ ನೆರಳು ಸಿಗದು. ಆಗಸದಲಿ ಹರಡಿದ ಬಟ್ಟೆಯಲ್ಲಿ ತೆಗೆದಿಟ್ಟ ಚುಕ್ಕಿಗಳ ಮೂಟೆ ಮೌನ ಬಿಕ್ಕುವ ಮಾತುಗಳನ್ನು ಕೊಳೆಹ...

ವಜ್ರದ ಗಣಿಗಳು ನಮ್ಮ ದೇಶದಲ್ಲಿ ಮಾತ್ರ ಇದ್ದುದು. ಮೊತ್ತ ಮೊದಲು ವಜ್ರವನ್ನು ಬಳಸಿದ ಹಾಗೂ ಪರಿಚಯಿಸಿದ ದೇಶ ಭಾರತ! ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಿದೆ. ಇದು ವಿಶ್ವಕ್ಕೇ ಮಾದರಿ. ಬಹು ದೊಡ್ಡ ಗಣಿಯಾಗಿದೆ. ಈ ಗಣಿಯಿಂದ ಕೊಹಿನ...

೧ ಏನಿದೇನಿದು ಬಾನಧುನಿಯಲಿ ಘೋರಗರ್ಜನೆ ಗೆಯ್ವುದು ಪೊನಲ ನೆಗಸವು ನೆಗೆದು ಬಂದಿರೆ ಘೂರ್ಣಿಸುವ ಸೌಂರಂಭಮೊ ವನಧಿ ಮೇರೆಯ ಘನರವಂಗಳ ಮಿಕ್ಕಿ ಮೀರುವ ಮೊಳಗಿದೊ ೨ ಕಾಲಪುರುಷನ ಕಡಕಡಾಟದ ಸಂಚರಿಪ ಸಂಚಾಲಮೊ ಇಳೆಯನೆಲ್ಲವ ಬಳಸಿಯುಲಿಯುವ ವಿಲಯ ಕಾಲದ ಕಹಳೆಯ...

ಕಾಣುವ ಕಣ್ಣಿಗೆ ಇರುವಳು ರುಕ್ಮಿಣಿ ಕೃಷ್ಣನ ಬದಿಯಲ್ಲಿ; ರಾಧೆಯು ಎದೆಯಲ್ಲಿ. ಬಲ್ಲವರಾರು ಇರುವವರೆಂದು ರುಕ್ಮಿಣಿ ಎದೆಯಲ್ಲಿ; ಕೃಷ್ಣನ ಸಹವಾಸದಲಿ! ತುಟಿಯಲಿ ರಾಮ ಮನದಲಿ ಕೃಷ್ಣ ಇದು ಗಂಡಿಗೆ ಪ್ರೀತಿ; ನಾವೊಪ್ಪಿದ ರೀತಿ. ನುಡಿಯದೆ ಹೋದ ಮಾತುಗಳಿರ...

ಎಂದಿನಂತೆ ಹೂವಯ್ಯ ಸಮಯಕ್ಕ ಸರಿಯಾಗಿ ತಮ್ಮ ಮನೀಂದ ಹೊರಗ ಬಿದ್ದರು. ಬರತಾ ದಾರಾಗ ದಣೀ ಮನಿ ಹೊಸ್ತಿಲಾ ಮುಟ್ಟಿ ಸಣ್ ಮಾಡೀನಽ ದಿನಾ ಕಚೇರಿಗೆ ಎಡತಾಕೋದು. ಹಂಗಂತ ಸ್ವಾತಂತ್ರ್ಯ ಸಿಕ್ಕು ಏಸ್ ವರ್‍ಷಾಗಿರಬಹುದು ಅನ್ನಾ ಲೆಕ್ಕಾ ಹಾಕಾಂಗಿಲ್ಲ. ಮುಂಜಾನ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...