ವಜ್ರದ ಗಣಿಗಳು ನಮ್ಮ ದೇಶದಲ್ಲಿ ಮಾತ್ರ ಇದ್ದುದು. ಮೊತ್ತ ಮೊದಲು ವಜ್ರವನ್ನು ಬಳಸಿದ ಹಾಗೂ ಪರಿಚಯಿಸಿದ ದೇಶ ಭಾರತ!
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಿದೆ. ಇದು ವಿಶ್ವಕ್ಕೇ ಮಾದರಿ. ಬಹು ದೊಡ್ಡ ಗಣಿಯಾಗಿದೆ. ಈ ಗಣಿಯಿಂದ ಕೊಹಿನೂರ್ ವಜ್ರವನ್ನು ಹೊರ ತೆಗೆದಿದ್ದು! ಇದು ಇಡೀ ವಿಶ್ವದಲ್ಲೇ ಅತಿ ದೊಡ್ಡ ವಜ್ರದ ಹರಳಾಗಿದ್ದು ಅದು ಸಾವಿರಾರು ಕೋಟಿ ಬೆಲೆ ಬಾಳುವುದು!
ಭವ್ಯ ಭಾರತವನ್ನು ಸುಮಾರು ೧೫೦ ವರ್ಷಗಳ ಕಾಲ ಬ್ರಿಟೀಶರು ಆಳಿದರು. ಆಗ ಬೆಲೆ ಬಾಳುವ ವಸ್ತು ಒಡವೆ ಮುತ್ತು ರತ್ನ ವಜ್ರ ವೈಡೂರ್ಯಗಳನ್ನು ಹಡಗಿನ ತುಂಬಾ ಬ್ರಿಟನ್‌ಗೆ ಸಾಗಿಸಿದರು! ಅದರಲ್ಲಿ ಕೊಹಿನೂರ್ ವಜ್ರನೂ ಸೇರಿದೆ.
ಜುಲೈ ೨೦೧೫ ರ ಆರಂಭ ದಿನಗಳಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ – “೨೦೦ ವರ್ಷಗಳ ಕಾಲ ಭಾರತವನ್ನು ಆಳಿ ಲೂಟಿ ಮಾಡಿದ್ದಕ್ಕೆ ಪ್ರತಿಯಾಗಿ ಭವ್ಯ ಭಾರತಕ್ಕೆ ಬ್ರಿಟನ್ ಸರ್ಕಾರ ಪೂರ್ಣನಷ್ಟ ಪರಿಹಾರವನ್ನು ತುಂಬಿ ಕೊಡಲೇಬೇಕು” ಎಂದು ವಾದಿಸಿದ್ದರು.
ಈಗ ಇದರ ಬೆನ್ನಲ್ಲೇ ದಿನಾಂಕ ೨೮-೦೭-೨೦೧೫ ರಂದು ಮಂಗಳವಾರದ ದಿನದಂದು “ಜಗತ್ ಪ್ರಸಿದ್ಧ ನಮ್ಮ ಕೊಹಿನೂರ್ ವಜ್ರವನ್ನು ಭವ್ಯ ಭಾರತಕ್ಕೆ ಈ ಕೂಡಲೇ ಹಿಂದಿರುಗಿಸತಕ್ಕದ್ದು” ಎಂದು ಭಾರತೀಯ ಮೂಲದ ಬ್ರಿಟನ್ ಸಂಸದ ಕೀತ್ ವಾಜ್ ಎಂಬುವರು ಧ್ವನಿಗೂಡಿಸಿರುವರು.
ಇದೇ ನವೆಂಬರ್ ೨೦೧೫ ರಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್ ದೇಶಕ್ಕೆ ಭೇಟಿ ನೀಡುತ್ತಿದ್ದು ಆ ವೇಳೆಯಲ್ಲಿ ಅವರ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸಿ ಎಂದು ಕೀತ್‌ವಾಜ್ ಸ್ಥಳೀಯ ಸರ್ಕಾರವನ್ನು ಗಟ್ಟಿಯಾಗಿ ಆಗ್ರಹಿಸಿರುವರು.
“ಶಶಿ ತರೂರ್ ಅವರ ಮಾತುಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಯನ್ನು ನಾನು ಸ್ವಾಗತಿಸುತ್ತೇನೆ. ಅವರ ನಿಲುವುಗಳನ್ನು ನಾನೂ ಕೂಡಾ ವ್ಯಕ್ತ ಪಡಿಸುತ್ತೇನೆ. ಅವರ ಅಗ್ರಹ ಅಪ್ಪಟವಾಗಿದ್ದು ಈ ಬಗ್ಗೆ ಎಲ್ಲರೂ ಯೋಚಿಸುವ ಅಗತ್ಯವಿದೆಯೆಂದು” ಕೀತ್ ವಾಜ್ ಮೇಲಿಂದ ಮೇಲೆ ವಾದಿಸಿದ್ದಾರೆ.
ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ, ಭಾರತಕ್ಕೆ ಸರ್ವ ಸ್ವಾತಂತ್ರ್ಯವನ್ನೇ ಕೊಟ್ಟ ಅಂದಿನ ಬ್ರಿಟನ್ ಸರ್ಕಾರ ಇಂದು ಕೊಹಿನೂರ್ ವಜ್ರವನ್ನು ಮರಳಿಸಿ ಬಿಡುವುದು… ಇಷ್ಟೆಲ್ಲ ಪ್ರತಿಧ್ವನಿ ಮೊಳಗಿದ ಮೇಲೆ ಅದನ್ನು ಅವರು ತಮ್ಮ ಬಳಿ ಇಟ್ಟುಕೊಂಡರೆ ಸರಿ ಕಾಣದು ಅಲ್ಲವೇ?!
*****