ಯುಗ ಯುಗದಿಂದ ಕಾತರಿಸಿವೆ
ಈ ಕಂಗಳು ನಿನಗಾಗಿ
ಬಣ್ಣದ ಆಟಿಗೆಗಳು ನನಗೆ ತೋರಿ
ನೋಡುತ್ತಿರುವ ಕೃಷ್ಣ ಮರೆಯಾಗಿ

ನೀ ನಿಲ್ಲದ ನನಗೇಕೆ ಈ ಜಗವು
ಮತ್ತೆ ಮಾಯೆ ಮೋಜುಗಳೇತಕೆ!
ನನ್ನವನಿಗೆ ನಾನು ಕಳಕೊಂಡು
ಏನು ಪಡೆದರೂ ಏತಕೆ!

ಎದೆಯ ಗರ್ಭದಲಿ ನಿನ್ನ ರೂಪ
ನಿತ್ಯ ಮನೆ ಮಾಡಿನಿಂದಿದೆ
ನಿನ್ನ ಕಾಣದೆ ಈ ಮನವು
ಸತ್ಯ ಹೇಳಲಾಗದೆ ನೊಂದಿದೆ

ಹೇಳಲಿ ಯಾರ ಮುಂದೆ ಈ ವಿರಹ!
ತಾಳೇನು ಈ ಸರಸನೋವ
ಅಕ್ಕರಗಳಿಗೆ ಸಾಧ್ಯವಾಗದು ಈ ಬರಹ
ಅರತು ಬರಬಾರದೆ ದೇವ

ಮುರಕುಗಿದರಿ ನೀ ನಿಲ್ಲದೆ
ಆಗದು ಈ ಜೀವ ಸಾರ್ಥಕ
ಮಾಣಿಕ್ಯ ವಿಠಲನ ಕೃಪೆ ಇಲ್ಲದೆ
ಎನ್ನ ಈ ಜನ್ಮ ನಿರರ್ಥಕ
*****