ನಾನು ಕವಿಯಲ್ಲ; ಆದರೆ
ಕವನಗಳನ್ನು ಬರೆಯಬಲ್ಲೆ
ಒಂದಿಷ್ಟು ಕುತೂಹಲದಿಂದ,
ನನ್ನ ಮನದ ಸಂತೋಷಕ್ಕಾಗಿ
ಪದಪುಂಜವ ಜೋಡಿಸಿ
ಭಾವನೆಯೆಳೆಯನ್ನು ಬಿಡಿಸಿ
ಪದಗಳಿಗೆ ಭಾವನೆಯೆಂಬ ವಸ್ತ್ರವನ್ನು
ತೊಡಿಸುತ್ತೇನೆ ಕವನದ ರೂಪದಲ್ಲಿ
ಮನದ ಮೂಲೆಯಲ್ಲೆಲ್ಲೋ ಅಡಗಿದ
ಕಾವ್ಯಪ್ರಪಂಚವನ್ನು ಕೆದಕಿ
ಹುದುಗಿಹೋದ ಸುಪ್ತ ವಿಚಾರಗಳಿಗೆ
ಕೊಡುತ್ತೇನೆ ಮರುಜೀವವನ್ನು
ಭಾವಜಗತ್ತಿನ ಮೂಲೆಮೂಲೆಯನ್ನೂ
ಎಗ್ಗಿಲ್ಲದೆ ದೋಚಿ
ಎರಡೂ ಕೈಯಿಂದ ಬಾಚಿ
ಕವನದ ರೂಪಕೊಟ್ಟು ಗೀಚುತ್ತೇನೆ.
*****