ಎಲ್ಲಿ ನೋಡಲಲ್ಲಿ ಕಣ್ಣು ಕಾಣುತಿಹೆದು ಕೆಮ್ಮಣ್ಣು! ಸುತ್ತ ಮುತ್ತ ನೋಡು ಮಿತ್ರ ಪ್ರಕೃತಿಯಾ ಕೃತಿ ವಿಚಿತ್ರ! ತನ್ನ ರೂಪ ತಾನೆ ನೋಡಿ ಮೆಚ್ಚಿ ಮೋದದಿಂದ ಹಾಡಿ ಸುರಿಸುತಿಹಳೊ ಪ್ರಕೃತಿಮಾತೆ ಕಣ್ಣನೀರನೆಂಬೊಲೊರತೆ- ಯೊಂದು ನೋಡು ಬೀಳುತಿಹುದು! ನೊರೆಯ ನಗೆಯು ಏಳುತಿಹುದು! ಇದೋ! ನುಣುಪುಕಲ್ಲ ನಲ್ಲ ಮುತ್ತನಿಡಲು ...

ಅಪ್ಪನೂ ಕುರುಡಾ ಅವ್ವೀನೂ ಕುರುಡ ಗೋಂಡೀ ನೆಟ್ಟವ್ರೇ ಗೊಂಡೀಗ ನೀರ ಯೆರುದವ್ರೇ ತಂಗೀ ಕೊಟ್ಟವ್ರೇ ತಂಗಳರಾಜ್ಯ ||೧|| ‘ಕೇಳಲ್ಲೋ ಕೇಳೋ ನನ್ನಲು ಮಗುನೇ ತಂಗೀ ನಾರೂ ಕರುಕಂಡೀ ಬಾರೋ’ ಲಟ್ಟೋಂದು ಮಾತಾ ಕೇಳಿದ ಮಗುನೇ ||೨|| ಮಾಳುಗೀ ವಳುಗೇ ನಡುದಿದ ಮ...

ಬರೆದವರು: Thomas Hardy / Tess of the d’Urbervilles ನಾಯಕನು ಏನೋ ಭಯದಿಂದ ಕಳನಳಿಸುತ್ತಿದ್ದಾನೆ. ಅವನಿಗೆ ಎಲ್ಲಿ ನೋಡಿದರೂ ಮುಸಿಮುಸಿ ನಗುತ್ತಾ ‘ ಅಪ್ಪಣೆಕೊಡಿ ಬುದ್ದಿ ‘ ಎಂದು ಕೈ ಮುಗಿದುಕೊಳ್ಳುತ್ತಾ ನಿಂತಿರುವ ಹೆಣ್ಣಿನ...

ಪರಮಾತ್ಮ ನಿನ್ನೆದುರಿನಲಿ ನಾನಿಂದಿರುವೆ ನನ್ನ ಕರಗಳ ಜೋಡಿರುವುದು ಕಂಡಿರುವೆ ಈಗ ನನ್ನ ಮನ ನಿನ್ನಲ್ಲಿ ಹರಡುವೆ ಶಾಂತಿ ನೀಡುವಂತೆ ನಿನ್ನಲ್ಲಿ ಕೋರುವೆ ದುಕ್ಕ ದಮ್ಮಾನದಿ ನೊಂದಿದೆ ಮನ ಕಾಮಕ್ರೋಧದಿ ಕರಗಿದೆ ಮನ ಲೋಭ ಮೋಹದಿ ಹುಳಕಾಗಿದೆ ಮನ ಜರ್ಜರಿ...

ನಾನೊಮ್ಮೆ ಕನಸಿನಲ್ಲಿ ರಾಜನಾಗಿದ್ದೆ ಭೂ ಲೋಕದ ಒಡೆಯನಾಗಿ ಮೆರೆದಿದ್ದೆ ನನ್ನದೇ ಮಾತು, ನನ್ನದೇ ರೀತಿ ಪ್ರಶ್ನಿಸುವವರಿಲ್ಲದ ಪ್ರಪಂಚ ಖಜಾನೆಯಲಿ ಕೊಳೆತು ಬಿದ್ದಿರುವ ಸಂಪತ್ತು ಇಷ್ಟಿದ್ದರೂ ಇಲ್ಲದವರಿಗೆ ನೀಡಲೊಪ್ಪದ ಮನಸ್ಸು ಕಾರಣವಿಲ್ಲದೆ ಹೊಗಳಿ ...

ಅಪ್ಪಮ್ಮ ಕಾಯ್ತಾರೆ ಮನೆಯೊಳಗೆ ಗೆಳತಿಯರಿದ್ದಾರೆ ಮರೆಯೊಳಗೆ ಹೊರೆಯಷ್ಟು ಕೆಲಸ ಬಿದ್ದಿದೆಯೊ ಸರಸಕ್ಕೆ ಸಮಯ ಈಗಿಲ್ಲವೊ ಗೋವುಗಳ ಕರಕೊಂಡು ಹೊಳೆಗೊಯ್ಯಬೇಕೊ ಅವುಗಳ ಮೈತಿಕ್ಕಿ ತೊಳೆಯಬೇಕೊ ಪಾತ್ರೆ ಪಗಡೆ ಉಜ್ಜಿ ಬೆಳಗಿಡಬೇಕೊ ನೆಲ ಸಾರಿಸಿ ಒರೆಸಿ ಹೊಳ...

ತೊರೆ ಹಾಡುತಿರೆ ಚುಕ್ಕಿ ಸೂಜಿವೆಳಗಿಂ ಚುಚ್ಚಿ ಮನಕೆ ಬಗೆಬಗೆ ಭಾವಗಳ ಹಚ್ಚೆಯೊತ್ತೆ ಸೌಂದರ್ಯವಿಹ್ವಲಸ್ವಾಂತನೆನ್ನಾದರಿಸೆ ಸೆಳೆದೆಲ್ಲದೆಸೆಗಳನು ನೆಲದುಸಿರು ಮುತ್ತೆ ಅಪ್ ತೇಜಗಳು ಬೆರೆದ ತಿಳಿವೊನಲನನುಕರಿಸಿ ನನ್ನೊಳಗು ಬಾಹ್ಯಾ೦ತರ್ಯಭೇದವಳಿಯೆ ಅರ...

ಹೌದು! ಅಲ್ಲೀಗ ಸಾವಿನದೇ ಸುದ್ದಿ ಸ್ತಬ್ಧವಾಗಿದೆ ಬದುಕು ಮಳೆಯ ಅಬ್ಬರದ್ದೇ ಸದ್ದು ಸಿಡಿಲು ಮಳೆಗೆ ಬಿದ್ದ ಗೋಡೆ ಕೆಳಗೆ ಸಿಲುಕಿದವರೆಷ್ಟು? ಸತ್ತವರ ಸಂಖ್ಯೆ ಲೆಕ್ಕವಿಟ್ಟವರಾರು? ಕಡಲ ತಟದ ಅಲೆಗಳು ಮುನಿದು ರೊಚ್ಚಿನಿಂದ ಅಪ್ಪಳಿಸಿ ಕೊಚ್ಚಿಹೋದ ಮನೆ...

ಇಂದು ಜಗತ್ತಿನಾದ್ಯಂತ ೧೫೦ ಕೋಟಿ ಮೊಬೈಲ್ ಫೋನುಗಳಿವೆ. ಇವೆಲ್ಲವುಗಳನ್ನು ಮೀರಿ ಇಂದು ವೈಫೈ ಮೊಬೈಲ್ ಸಾಧನ ಬಂದಿದೆ. ಇದನ್ನು ಮೀರಿಸುವ ಇನ್ನೊಂದು ಸಾಧನ ಬಂದಿಲ್ಲವೆಂದು ಹೇಳುವುದರೊಳಗಾಗಿ ಇನ್ನೊಂದು ಕಂಪನಿ ಇದಕ್ಕಿಂತಲೂ ವಿಭಿನ್ನವಾದುದನ್ನು ಪ್ರಪ...

            ೧ ತನಸು ತಿರೆಯ ತೀಡಿಬರಲು ಬನಪನಾಂತು ಮೂಡಿ ಬರುವ ಮನಕೆ ಮಾಟಮಾಡಿ ಕಾ೦ಬ ಅಣಬೆ ಚೆಲುವ ಕಳೆಯಕೀರಿ ಹೊಳೆಯುತಿರುವುದು ತಳಿರಜೊಂಪನಳಿವಸೊ೦ಪ ತಿಳಿಸುತ್ತಿರುವುದು ೨ ಬಾನಮೇಲೆ ತೇಲಿಕಾಂಬ ಬಾನಗೊಡೆಯ ಕೋಲ ಕಾಣೆ ಕ್ಷೋಣಿಗದುವೆ ಮಾಣದೆಂದು ಕ೦...

ಕಲೆಯಲಿ ಅರಳಿದ ಶಿಲೆಗಳು ಉಸುರಿವೆ ತಮ್ಮೊಳಗಿನ ದನಿಯ ಬಂಡಾಯದ ಈ ಬೆಳಕಲಿ ಮೂಡಿದೆ ಚರಿತೆಯ ಹೊಸ ಅಧ್ಯಾಯ || ಬೆವರನು ಸುರಿಸಿ ರಕ್ತವ ಹರಿಸಿ ಕಣ್ಣಲಿ ಕಣ್ಣನು ಕೂಡಿಸುತ ಶಿಲೆಯಲಿ ಶಿಲ್ಪವ ಬಿಡಿಸಿದ ಶಿಲ್ಪಿಯು ತಳ ಸೇರಿದ ನಿಜ ಕಥೆಯ ಹಾಡಿವೆ ಮೌನದಿ ಶ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...