ಪರಮಾತ್ಮ ನಿನ್ನೆದುರಿನಲಿ ನಾನಿಂದಿರುವೆ
ನನ್ನ ಕರಗಳ ಜೋಡಿರುವುದು ಕಂಡಿರುವೆ
ಈಗ ನನ್ನ ಮನ ನಿನ್ನಲ್ಲಿ ಹರಡುವೆ
ಶಾಂತಿ ನೀಡುವಂತೆ ನಿನ್ನಲ್ಲಿ ಕೋರುವೆ
ದುಕ್ಕ ದಮ್ಮಾನದಿ ನೊಂದಿದೆ ಮನ
ಕಾಮಕ್ರೋಧದಿ ಕರಗಿದೆ ಮನ
ಲೋಭ ಮೋಹದಿ ಹುಳಕಾಗಿದೆ ಮನ
ಜರ್ಜರಿತಗೊಂಡು ಪತನಸಿದೆ ಮನ
ನಾನು ನನ್ನದರಲ್ಲಿ ಮುಳುಗಿದೆ ಮನ
ಇಂದ್ರಿಗಳಿಗೆ ತನ್ನಂತೆ ಮಾಡಿದೆ ಮನ
ತನುವಿಗೆ ನಿತ್ಯಶೋಷಿಸಿದೆ ಮನ
ಜರ್ಜರಿತಗೊಂಡು ಪತನಿಸಿದೆ ತನ
ಆನಂದ ಸುಖಕ್ಕೆ ಹಪ ಹಪಿಸಿದೆ ಮನ
ಗರ್ವ ಬಿಮ್ಮಗಳಿಂದ ನೊಂದಿದೆ ಮನ
ಆತ್ಮದೊಂದಿಗೆ ಕಾದಾಟಕ್ಕೆ ಇಳಿದಿದೆ ಮನ
ದೇವನನ್ನು ಮರೆತು ಪತನಿಸಿದೆ ಮನ
ನಾನೆಂಬ ಈ ಮನ ದಿಕ್ಕರಿಸುವಂತೆ ಮಾಡು
ಅದರಾಸೆಗಳ ಮೇಲೆ ತೀಲೋದಕ ಬಿಡು
ನನ್ನೊಂದಿಗೆ ಸಹಕರಿಸುವ ಆಸಕ್ತಿ ನೀಡು
ಮಾಣಿಕ್ಯ ವಿಠಲನ ಆಗಲಿ ಹಾಡು
*****
















