ಬರೆದವರು: Thomas Hardy / Tess of the d’Urbervilles
ನಾಯಕನು ಏನೋ ಭಯದಿಂದ ಕಳನಳಿಸುತ್ತಿದ್ದಾನೆ. ಅವನಿಗೆ ಎಲ್ಲಿ ನೋಡಿದರೂ ಮುಸಿಮುಸಿ ನಗುತ್ತಾ ‘ ಅಪ್ಪಣೆಕೊಡಿ ಬುದ್ದಿ ‘ ಎಂದು ಕೈ ಮುಗಿದುಕೊಳ್ಳುತ್ತಾ ನಿಂತಿರುವ ಹೆಣ್ಣಿನ ರೂಪ ಕಾಣುತ್ತಿದೆ. ಅವನು ಬೇರೆ ಯೋಚನೆ ಮಾಡಬೇಕೆಂದು ಎಷ್ಟೋ ಪ್ರಯತ್ನ ಮಾಡು ತ್ತಾನೆ. ಸಾಧ್ಯವಿಲ್ಲ. ಅದೇ ಚಿಂತೆ. ಅದೇ ಯೋಚನೆ: ಅದೇ ಭ್ರಾಂತಿ. ಅದೇ ಕಳವಳ.
“ಏನು ಮಾಡಿದರೆ ಮಲ್ಲಿಯನ್ನು ನಿಲ್ಲಿಸಿಕೊಳ್ಳಬಹುದು?” ಎಂದು ಒಂದೇ ಸಮನಾಗಿ ಒಂದೇ ಚಿಂತೆ.
ಆ ಚಿಂತೆಯಲ್ಲಿ ನರಸಿಂಹಯ್ಯನನ್ನು ನೋಡಲು ಅನರ ಮನೆಗೆ ಹೋಗಿದ್ದನು. ಈ ಹತ್ತು ಹದಿನೈದು ವರ್ಷಗಳಲ್ಲಿ ನಾಯಕನು ಅವನ ಮನೆಗೆ ಹೋಗಿರಲಿಲ್ಲ. ಅವರ ತಾಯಿಯೇ ಬಂದು, ಬಾಗಿಲಮರೆ ಯಲ್ಲಿ ನಿಂತು,“ಅವನು ಇನ್ನೂ ಊರಿಗೆ ಬಂದಿಲ್ಲ. ಭಾನುವಾರ, ಸೋಮ ವಾರ ಬರಬಹುದು. ಏನು ಹೇಳಬೇಕೋ ಅಪ್ಪಣೆಯಾದರೆ ಹೇಳುತೀನಿ” ಎಂದರು.
ನಾಯಕನು ತನ್ನ ಅಸಮಾಧಾನವೆಲ್ಲ ನುಂಗಿಕೊಂಡು, “ಏನಿಲ್ಲ ತಾಯಿ, ನಾನು ಬಂದಿದ್ದೆ ಅನ್ನಿ. ಆದರೆ ನಮ್ಮ ಊರಿಗೆ ಬರಹೇಳಿ? ಎಂದು ಹೊರಟು ಬಂದನು.
ದಾರಿಯುದ್ದಕ್ಕೂ ಅದೇ ಯೋಚನೆ. ದಾರಿಗಿರಲೆಂದು ತಂದಿದ್ದ ಮಾದಕದ್ರವ್ಯದ ಶೀಷೆ ಎದುರಿಗೇ ಇದೆ. ಅದೂ ಬೇಡ ಅವನಿಗೆ.
ಅರಮನೆಗೆ ಬಂದವನೇ ಮಲ್ಲಿಯನ್ನು ಹುಡುಕಿಕೊಂಡು. ಹೋದನು. ಪುಟ್ಟ ಬುದ್ಧಿ ತೊಟ್ಟಿಲಲ್ಲಿ ಸುಖವಾಗಿ ಮಲಗಿದ್ದಾನೆ. ರಾಣಿ ಮಂಚದಮೇಲೆ ಮಲಗಿದ್ದಾಳೆ. ಎಲ್ಲಿ ನೋಡಿದರೂ ಮಲ್ಲಿಯಿಲ್ಲ.
“ಯಾರಮ್ಮೀ ಅಲ್ಲಿ?” ನಾಯಕನು ಕೂಗಿದನು.
“ಬುದ್ಧಿ? ಒಂದು ಹೆಣ್ಣುದನಿ ಬಂತು.
” ಚಿಕ್ಕಮ್ಮನೋರು ಎಲ್ಲಿ ??
“ಹಿಂದೆ ಕರೋಟೀಲಿ ಹುಲ್ಲಿನ ಮದೇಲಿ ಅವ್ರೆ!”
ನಾಯಕನಿಗೆ ಏನೋ ಕಸಿವಿಸಿಯಾಯಿತು: ಕರುಳು ಹಿಡಿದು. ಹಿಸುಕಿದಂತಾಯಿತು. ಹುಡುಕಿಕೊಂಡು ಹೊರಟನು.
ಅಲ್ಲೊಂದು ಕಡ್ಡಿಯನ್ನು ಕಚ್ಚಿ ಕೊಳ್ಳುತ್ತಾ ಮಲ್ಲಿ ಏನೋ ಗೊಣಗಿಕೂಳ್ಳುತ್ತಾ ಕುಳಿತಿದ್ದಾಳೆ. ನಾಯಕನು ಅವಳ ಕಣ್ಣಿಗೆ ಬೀಳದೆ ಬಳಸಿಕೊಂಡು ಹೋಗಿ ಅವಳು ಏನು ಗೊಣಗುತ್ತಿರುವಳೆಂದು. ಕೇಳಿದನು. ಅದೊಂದು ತತ್ವ.
ಹಂಸನೀ ಪರಮಾತ್ಮನೆಂದು ಭಾವನೆಮಾಡು ಸಂಸಾರಿ ನೀನಲ್ಲ ಹಂಸ ॥ ಸಂಶಯ ಮೊದಲಾದ ಅಜ್ಞಾನ ಕಾರ್ಯವ ಧ್ವಂಸನ ಮಾಡೆಲೇ ಹಂಸ ॥
ಶಂಕರಾಭರಣದಲ್ಲಿ ಸಣ್ಣಗೆ ತನ್ನ ಕಿವಿಗೆ ಮಾತ್ರ ಕೇಳಿಸುವಷ್ಟು ಸಣ್ಣಗೆ ಹಾಡಿಕೊಳ್ಳುತ್ತಾ ಅನ್ಯಮನಸ್ಕಳಾಗಿ ಕುಳಿತಿರುವ ಅವಳನ್ನು ಮಾತನಾಡಿಸಲಾರದೆ ನಾಯಕನೂ ಅಲ್ಲಿಯೇ ಹಾಗೆಯೇ ಆ ಮೆದೆ ಯನ್ನು ಒರಗಿಕೊಂಡು ನಿಂತನು.
ಸುಮಾರು ನಾಲ್ಕು ನಾಲ್ಕೂವರೆ ಗಂಟೆಯಾಗಿದೆ. ಸಂಜೆಯು ಸಮೀಪಿಸುತ್ತಿದೆ. ಸೂರ್ಯನ ಚಂಡಕಿರಣಗಳ ತೀಕ್ಷ್ಣತೆಯೆಲ್ಲ ಅಡಗಿ, ಬಿಸಿಲು ಹಿತವಾಗುತ್ತಿದೆ. ಅಲ್ಲೊಂದು ಇಲ್ಲೊಂದು ದನವು ಹಿಂತಿರುಗಿ ಬರುತ್ತಿರುವುದನ್ನು ಗಂಟೆಯ ಸದ್ದು ಸೂಚಿಸುತ್ತಿದೆ. ಆ ಸದ್ದು ಕೇಳಿ ಎಲ್ಲಿಂದಲೋ ಅಂಬಾ ಎಂದು ಸಣ್ಣ ಕರುಗಳು ಕೂಗುತ್ತಿವೆ. ಅದನ್ನು ಕೇಳಿ ನಾಯಕನು ‘ ಇವಳ ತೀವ್ರ ಸಂಕಲ್ಪವೂ ಹೀಗೆಯೇ ಶಾಂತವಾಗ ಬಾರದೇ ? ಇವಳೂ ಮನೆಗೆ ಬರುತ್ತಿರುವ ಈ ದನದಹಾಗೆ ನನ್ನ ಬಳಿಗೆ ಹಿಂತಿರುಗಬಾರದೆ ? ಈ ಕರುವಿನ ಹಾಗೆ ನನ್ನ ಕರೆಯನ್ನು ಕೇಳಿ ಮರುದನಿ ಕೊಡಬಾರದೆ ?’ ಎಂದು ಯೋಚಿಸಿಕೊಂಡು ತಲೆ ಯೆತ್ತಿ ನೋಡುತ್ತಾನೆ.
ಆಕಾಶದಲ್ಲಿ ಮೋಡಗಳು ಮೆಲ್ಲಗೆ ಜಾರುತ್ತಿವೆ. ಹಿಡಿದು ತಡೆದು ನಿಲ್ಲಿಸುವವರಿಲ್ಲವೆಂಬಂತೆ ಓಡಿಹೋಗುತ್ತಿವೆ. ಹೊರಟುಹೋಗುತ್ತಿವೆ. ನಾಯಕನಿಗೆ ದಿಗಿಲಾಯಿತು. ” ಮಲ್ಲಿಯೂ ಹೀಗೆಯೇ ಅರಮನೆ ಯನ್ನು ಬಿಟ್ಟು ಓಡಿಹೋಗುವಳೋ ? ತಡೆಯುವವರಿಲ್ಲದೆ ಹಿಡಿಯುವ ವರಿಲ್ಲದೆ ಹೊರಟೇಹೋಗುವಳೋ?’ ಅವನ ಎದೆಯು ಬಡಿದು ಕೊಂಡಿತು. ಆ ಬಡಿದುಕೊಂಡ ಸದ್ದೇ ಏನಾದರೂ ಕೇಳಿಸಿಕೋ? ಅಥವಾ ಸಂಜೆಯ ಬಿಸಿಲಿನಲ್ಲಿ ನೆರಳು ಕಾಣಿಸಿ ಬಗ್ಗಿ ನೋಡಿದಳೋ ಅಂತೂ ಮಲ್ಲಿಯು ನಾಯಕನನ್ನು ಕಂಡಳು. ಬಗ್ಗಿ ನೋಡಿದಳು. ” ಅವ್ವಯ್ಯಾ ! ಬುದ್ಧಿಯೋರು?” ಎಂದು ಥಟ್ಟನೆದ್ದು ಓಡಿ ಬಂದಳು.
“ನ್ಯಾಯವಾ ನನ್ನೊಡೆಯ, ನನ್ನ ಹಿಂಗೆ ಚಂಡಿಸಬಹುದಾ? ಕೂಗಬೇಡವಾ ?” ಎಂದು ವಿನಯದಿಂದ ಕೇಳಿದಳು.
“ನಿನ್ನ ಹುಡುಕಿಕೊಂಡು ಬಂದೆ ಮಲ್ಲಿ. ನೀಯೇನೋ ಹಾಡಿ
ಕೊಂತ ಕುಂತಿದ್ದೆ. ಅದಕ್ಕೆ ನಾನೂ ಹೆಂಗೇ ಕೇಳುತ್ತಾ ನಿಂತು. ಕೊಂಡೆ.”
“ಕಾಣಲಿಲ್ಲ. ಕೋಪಮಾಡಿಕೊಳ್ಳಬೇಡಿ ಬುದ್ಧಿ. ತಾವು ಬಂದು ನಿಂತುಕೊಂಡು: ಎಷ್ಟು ಹೊತ್ತಾಯಿತು ”
ನಾಯಕನಿಗೆ ಇಷ್ಟು ವಿನಯವಾಗಿರುವವಳು, ವಿಶ್ವಾಸವಾಗಿರು ನವಳು ತನ್ನನ್ನು ಬಿಟ್ಟುಹೋಗುವಳೇ ಎನ್ನಿಸಿತು. ಆ ಭಾವದಲ್ಲಿ ಅವಳ ಮಾತಿಗೆ ಉತ್ತರ ಕೊಡದೆ, ಏನೋ ಯೋಚನೆಯಲ್ಲಿ, ಎತ್ತಲೋ ಮನಸ್ಸಿರುವಾಗ “ಆಯಿತು. ಹೊರಟುಹೋಗುತೀನಿ ಅಂತೀಯಲ್ಲ ನಿನ್ನ ಹಣ ಏನು ಮಾಡೋದು ” ಎಂದು ಕೇಳಿದನು.
” ನನ್ನೊಡೆಯಾ! ನನ್ನ ಹಣವೆಲ್ಲ ಇರೋದು ಇಲ್ಲಿ ಈ ಪಾದದಿಂದ ಬಂತು: ಈ ಪಾದಕ್ಕೆ ಕೊಟ್ಟು ಬುಟ್ಟಿದ್ದೀನಿ. ಇನ್ನು ನಂದೆಲ್ಲಿ?”
“ಉಂಟಾ ಮಲ್ಲಿ? ನಿನಗೆ ಕೊಟ್ಟಿರೋದೆಲ್ಲ ನಿನ್ನ ಹಣ. ಅದು ಹೆಣ್ಣಿನಹಣ, ಅದು ನಾನು ತಕೊಳ್ಳಲಾ ? ನಿನಗೆ ಬೇಡ ಅಂದರೆ ಕಾವೇರಮ್ಮನ ಮಡೂಗೆ ಸುರಿದುಹೋಗು. ನನಗೆ ಬೇಡ. ಹಂಗಿಲ್ಲ ಅಂದ್ರೆ ಏನು ಮಾಡಬೇಕು ಹೇಳು.”
“ಗುರುಗಳನ್ನು ಕೇಳಿ : ಅವರು ಹೇಳಿದಂಗೆ ಮಾಡಿ.
“ಹೋಗಿದ್ದೆ. ಅವರು ಊರಲ್ಲಿಲ್ಲ.?
” ಹಂಗಾದ್ರೆ….ಬುದ್ಧಿ… ಹೇಳ್ಲಾ ?
“ಹೇಳು ಮಲ್ಲಿ.”
“ಕುಂತುಕೊಳ್ಳಿ. ನೋಡಿ. ನಮ್ಮೋರಿಗೆ ಓದೋಕೆ ಒಂದು ಕಾಲೇಜು ಕಟ್ಟಿಸಿ ಬುಡಿ. ಕಾವೇರಮ್ಮನ ಮಡೂಗೆ ಸುರಿದು ಹೋಗು ಅಂದಿರಿ. ಕಾವೇರಮ್ಮನ ಮಗ್ಗುಲಲ್ಲಿ ಒಂದು ಕಾಲೇಜು ಕಟ್ಟಿ.”
“ಹಂಗಾದರೆ ಒಂದು ಮಾತು?”
” ಏನು?”
” ನೀನು ಹೇಳಿದಂಗೆ ಸೊಗಸಾದ ಕಾಲೇಜು, ಮ… ಕಾಲೇಜಿನಂತಾ ಕಾಲೇಜು ಕಟ್ಟಿಸುತೀನಿ. ನೀನು ಇದ್ದು ಬಿಡು.
“ನನ್ನೊಡೆಯಾ, ನಾನು ಹೋಗುವುದು ನಿಜ. ಆದರೆ ತಮ್ಮ ಅಪ್ಪಣೆಯಾಯಿತು. ಆ ಕಾಲೇ, ಆಗೋತಂಕ ಇರುತೀನಿ ಆಯಿತಾ ??
” ನರಸಿಂಹಯ್ಯನೋರು ಭಾನುವಾರ ಸೋಮವಾರ ಬರುತ್ತಾ ರಂತೆ. ಅವರ್ನ ಕೇಳಿ ಎಲ್ಲಾ ಮಾಡೋಣ.”
“ಅಗಲಿ ಬುದ್ಧಿ ”
*****
ಮುಗಿಯಿತು


















