ತೊರೆ ಹಾಡುತಿರೆ ಚುಕ್ಕಿ ಸೂಜಿವೆಳಗಿಂ ಚುಚ್ಚಿ
ಮನಕೆ ಬಗೆಬಗೆ ಭಾವಗಳ ಹಚ್ಚೆಯೊತ್ತೆ
ಸೌಂದರ್ಯವಿಹ್ವಲಸ್ವಾಂತನೆನ್ನಾದರಿಸೆ
ಸೆಳೆದೆಲ್ಲದೆಸೆಗಳನು ನೆಲದುಸಿರು ಮುತ್ತೆ
ಅಪ್ ತೇಜಗಳು ಬೆರೆದ ತಿಳಿವೊನಲನನುಕರಿಸಿ
ನನ್ನೊಳಗು ಬಾಹ್ಯಾ೦ತರ್ಯಭೇದವಳಿಯೆ
ಅರಿವರಿವುಗಳ ಹರಳಿನೊಡವೆಗಳ ಹೊಳೆಸುತ್ತ
ಆಗಸದ ಬಾಗಿನಡಿ ಮಾಗುಟ್ಟು ಮೆರೆಯೆ
ಭೂಮಾನುಭೂತಿಯದ ಮರುಕೊಳಿಸುತಿರುವುದೀ ಶ್ರೀವಿಮಾನಂ
ಭೂತರಂಗದಿ ಜೀವ ಪಡುವೆಲ್ಲ ಪಾಡುಗಳ ರಸನಿಧಾನಂ.
*****


















