
೧
ತನಸು ತಿರೆಯ ತೀಡಿಬರಲು
ಬನಪನಾಂತು ಮೂಡಿ ಬರುವ
ಮನಕೆ ಮಾಟಮಾಡಿ ಕಾ೦ಬ
ಅಣಬೆ ಚೆಲುವ ಕಳೆಯಕೀರಿ ಹೊಳೆಯುತಿರುವುದು
ತಳಿರಜೊಂಪನಳಿವಸೊ೦ಪ ತಿಳಿಸುತ್ತಿರುವುದು
೨
ಬಾನಮೇಲೆ ತೇಲಿಕಾಂಬ
ಬಾನಗೊಡೆಯ ಕೋಲ ಕಾಣೆ
ಕ್ಷೋಣಿಗದುವೆ ಮಾಣದೆಂದು
ಕ೦ಬದಿ೦ಬನೊ೦ದಿ ಬಾನಸೊಂಪನೀವೆಯ
ಕುಂದದಿರ್ದ ಚಂದ್ರಬಿ೦ಬದಿ೦ಪನೀವೆಯ
೩
ನೀರನೆಲೆಯ ತೆರೆಯ ಮೇಲೆ
ಸರಿದು ಸರಿದು ಸುಳಿಯುತಿರುವ
ಪರಮ ಸಿರಿಯ ತಿರೆಗೆ ತರುವ
ಬುರುಗಿನಿರವ ತೋರಿಯೆನ್ನ ಕುಣಿಸುತಿರುವೆಯ
ಪರಮಹರುಷವಿತ್ತು ಮನಕೆ ತಣಿಸುತಿರುವೆಯ
೪
ಚ೦ಚರೀಕತತಿಯಣಂಬೆ
ಮಿಂಚಿನಂಥ ಮೈಯಸಿರಿಗೆ
ಸಂಚರಿಸದ ಸಂಚನೋಡೆ
ಮೂಸದಿರ್ದ ಪುಷ್ಪವಾಗಿ ವಸುಧೆಗೆಸೆವುದು
ವಾಸನಾರುಚಿಯ ಜನವು ಮೂಸಿ ತಿಳಿಯದು
೫
ತಿಳಿಯದಂತೆ ತೆರಳಿ ಬಂದು
ಬಾಳ ಬಳಗ ಬಳಸಿ ತಾಳಿ
ಹಾಲುತಿವೆ ಹಾಲುಹೊಲದೆ
ಕಾಲಕಳೆವ ಕಳೆಯ ಕಂಡು ಹಿಗ್ಗುತಿರ್ದೆನು
ಕೀಳುಮೇಲು ಭಾವಗಳನು ಧೂಳಿಗೊಟ್ಟೆನು
೬
ದೇವಗಂಗೆ ತಂಪಿನ ಗಿರಿಯ
ಸೇವೆಯಿಂದ ಸಾಗಿ ಮೊರೆಯೆ
ಭಾವಗೀತೆಯಲ್ಲಿ ಏಳ್ವ
ನೊರೆಯ ಸಿರಿಯ ಪರಿಯ ತೋರಿ ಮರುಕವೀವೆಯ
ಪರಮಗಂಗ ತವರ ತೊರೆವ ಪರಿಯ ತೋರ್ಪೆಯ
೭
ಬಾಲತನದ ಲೀಲೆಯಲ್ಲಿ
ಕಾಲ ಕಳೆದ ಸಮಯದಲ್ಲಿ
ಅಣಬೆ ನಿಲಯದಲ್ಲಿ ಮೊಳೆಯೆ
ಲಗುನೆ ಜನಕ ಮನೆಯ ತಾನೆ ಬಿಡಿಸಿಬಿಟ್ಟನು
ಹೈಗನಾಡ ನಾಡನುಡಿಯ ನಡಿಸಿಬಿಟ್ಟನು
೮
ವಸುಧೆಯಲ್ಲಿ ಜನುಮ ಬರುವ
ಬಿಸಜಸುತನ ವಸ್ತುರಾಶಿ
ಬಸಗೆವರೆಯೆ ಮಸಗುತಿರಲು
ಕೀಳುಮೇಲು ಕೆಳಗೆ ಮೇಲೆಯೆಂಬುದರಿಯೆನು
ತುಲನೆಮಾಳ್ಪ ಕಳೆಯ ಕೊಳೆಯ ತಿಳಿಯದಿರುವೆನು
*****


















