ಇಂದು ಜಗತ್ತಿನಾದ್ಯಂತ ೧೫೦ ಕೋಟಿ ಮೊಬೈಲ್ ಫೋನುಗಳಿವೆ. ಇವೆಲ್ಲವುಗಳನ್ನು ಮೀರಿ ಇಂದು ವೈಫೈ ಮೊಬೈಲ್ ಸಾಧನ ಬಂದಿದೆ. ಇದನ್ನು ಮೀರಿಸುವ ಇನ್ನೊಂದು ಸಾಧನ ಬಂದಿಲ್ಲವೆಂದು ಹೇಳುವುದರೊಳಗಾಗಿ ಇನ್ನೊಂದು ಕಂಪನಿ ಇದಕ್ಕಿಂತಲೂ ವಿಭಿನ್ನವಾದುದನ್ನು ಪ್ರಪಂಚಕ್ಕೆ ನೀಡುತ್ತದೆ. ಇರಲಿ ಈ ವೈ-ಫೈ ಯು ಒಂದು ಕಂಪ್ಯುಟರ್ ಮಾಡುವ ಕೆಲಸಗಳನ್ನೆಲ್ಲ ಮಾಡುತ್ತದೆ. (ಪುಟ್ಟ ಫೋನ್) ಈ Phone ಗೆ ಒಂದು ಇಂಟರ್ ನೆಟ್ ಸಂಪರ್ಕ ಪಡೆದು ಕೊಂಡು ಕಾಲೇಜಿಗೆ ಬರಿಗೈಯಲ್ಲಿ ಹೋಗುವ ವಿದ್ಯಾರ್ಥಿಗಳಿದ್ದಾರೆ. ಯಾವ ಪಾಠವನ್ನು ಬೇಕಾದರೂ ಅವರು ತಕ್ಷಣ ತಮ್ಮ ಪರಸನಲ್ ವೆಬ್‌ಸೈಟಿನಿಂದ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಮನೆಮುಂದಿದ್ದ ಉದ್ಯಾನವನದಲ್ಲಿ ಕುಳಿತಕೊಂಡು ಕೈಯಲ್ಲಿರುವ ಪುಟ್ಟ ಫೋನಿನ ಪರದೆಯಲ್ಲೇ ಟಿ.ವಿ. ನೋಡಬಹುದು. ಪುಸ್ತಕ ಓದಬಹುದು. ಅಂದಿನ ಪತ್ರಿಕೆ ಓದಬಹುದು. ಇದ್ದಕ್ಕಿದ್ದಂತೆ ಮೊಬೈಲ್ ಪರದೆಯಲ್ಲೊಂದು ಪುಟ್ಟ ಸಂದೇಶ ಪ್ರತ್ಯಕ್ಷವಾಗುತ್ತದೆ. ಇಂದಿನಿಂದ ಸಿಗರೇಟು ಸೇದುವುದು\ಬಿಡಿ ಎಂದು ಹೇಳಿಬಿಡುತ್ತದೆ. ಕೈಯಲ್ಲಿರುವ ಮೊಬೈಲ್ Phone ಮೂಲಕ ಆಫೀಸಿನ ಕಂಪ್ಯೂಟರ್ ಜೊತೆ ಸಂಪರ್ಕ ಪಡೆದುಕೊಳ್ಳಬಹುದು. ಆಫೀಸಿನಲ್ಲಿ ಮಾಡುವ ಕೆಲಸಗಳನ್ನು ಅಲ್ಲೆಕೂತು ಎಲ್ಲಿಯೂ ಕೂತುಮಾಡಬಹುದು. ಪಶ್ಚಿಮ ಯೂರೂಪು ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಇಂಥಹ ಮೊಬೈಲಗಳು ಎಲ್ಲೆಂದರಲ್ಲಿವೆ ೫ ಪೌಂಡ್ ನೀಡಿ ಸಿಂಬಿಯನ್ ಡೇಟವನ್ನು ಮೊಬೈಲಗೆ ಹಾಕಿಸಿಕೊಳ್ಳಬೇಕಷ್ಟೆ.
*****



















