ರೂವಾರಿ ರೂವಿಟ್ಟ ಕಲ್ಲಲ್ಲ, ಮೂರ್ತಿಯಿದು,
ಎಂತೆಂದರಂತಾಗಬಲ್ಲ ಬಯಲಲ್ಲ,
ಮನುಜನಳಲಿಂ ಮೂಡಿದೊಲುಮೆಮಾತ್ರವಿದಲ್ಲ,
ನ್ಯಾಯನಡೆಸುವ ನಿಷ್ಠುರದ ನಿಯತಿಯಲ್ಲ.
ಜಡದಿಂದ ಜೀವಕ್ಕೆ ಜೀವದಿಂದಾತ್ಮಕ್ಕೆ
ಆತ್ಮದಿಂ ರಸಪದಕೆ ಇರವನಿದ ಸೆಳೆವ
ಚೇತನಾಯಸ್ಕಾಂತ ಜಾನಪದ ಹೃಚ್ಛಕ್ತಿ;
ಮಾನುಷ್ಯವಿಲ್ಲಿ ಪಡೆವುದು ತನ್ನ ಬಿಡುವ.

ವಿಷಯಲಗ್ನಾನಂದವಂ ಬೇರ್ಪಡಿಸಲಾದ ತಂತ್ರಾಲಯ
ತೀರ್ಣಭವಯತಿಸಿದ್ಧ ಸಂಸೃಷ್ಟ ದೇವಾಲಯ.
*****