ತಾಂ ತೂರಿ ಬರುತಿರುವ ಮನಮನದ ಮಾಧ್ಯಮದ
ಚಿತ್ರಚಿತ್ರಾಕೃತಿಯ ತಳೆದೆಸೆವ ಬೆಳಕೋ
ಅವಿಭಾಜ್ಯವಾಗಿಯೂ ನೆನೆವವರ ಹಿತವರಿತು
ರೂಪಿನುಪದೆಯ ಭೂಮೆ ಪತಿಕರಿಪ ತಳಕೋ
ಧ್ಯಾನಗಹ್ವರಮುಖದಿ ಕಣ್ಣು ಕಪ್ಪಲುಬೀಳೆ
ಅಂಗಾಂಗದೊಳು ಚೆಲುವ ಹೊಳೆಸುತಿಹ ಕಳೆಯೋ
ರೂಪಮಿದಮಾನುಷಂ ಭಾವನಮಿದಮರ್ತ್ಯಂ
ಕಲ್ಪನೆಯಿದಾನಂದ ಕಲ್ಪವೆನೆ ಕಲೆಯೋ!-
ಬೆಳಕಲ್ಲ ತಳಕಲ್ಲ ಕಳೆಯಲ್ಲಿ ಕಲೆಯಲ್ಲ-ನಷ್ಟವಹುದೂಹೆಯಿಲ್ಲಿ
ಪ್ರಕೃತಿಯಿಂ ಪುರುಷನಿನ ತನ್ನ ತಾಂ ಪಿರಿದಿಡುವ ಶ್ರೀಮೂರ್ತಿ ತಂತ್ರದಲ್ಲಿ.
*****


















