ಮಜ್ಜನಕ್ಕಾಗಿ ನಡೆದಿದೆ
ಸೂರ್ಯನ ಪಡುವಣದ ಪಯಣ
ಹಾಸಿಚೆಲ್ಲಿದೆ ಕೆಂಪನೆಯ ಜಮಖಾನ
ಸೂರ್ಯನ ರಾತ್ರಿಯ ನಿದಿರೆಗಾಗಿ
ಹಾರುತಿರುವ ಹಕ್ಕಿಗಳ ಆತುರ
ಗೂಡು ಸೇರುವ ಕಾತುರ
ಒಂದಿಷ್ಟು ಚಿಲಿಪಿಲಿಯ ಸದ್ದು
ರಂಗಿನ ಸಂಜೆಗೆ ಮತ್ತಷ್ಟು ಸೊಬಗು
ಕಡಲ ಮರಳಿನಲ್ಲಿ ಮನೆಕಟ್ಟುತ್ತಿದ್ದಾರೆ
ಪುಟ್ಟ ಪುಟಾಣಿಗಳು
ಮರಳಿನ ಮನೆಯ ಮರಳಿ ಮರಳಿ
ಕೆಡವುತ್ತಿರುವ ತೆರೆಗಳು
ಬೀಸುತ್ತಿರುವ ತಂಗಾಳಿಯು ಹೊರಡಿಸಿದೆ
ತಿಳಿತಂಪು ಗಾಯನ
ಸೆಟೆದುನಿಂತ ಚಿಗುರು ಯೌವ್ವನ
ಮೈಯಲ್ಲಿ ರೋಮಾಂಚನದ ಹರಿವು
ನಭದಿಂದೆದ್ದು ಬರುತ್ತಿರುವ ಚಂದ್ರಮ
ಪೌರ್ಣಮಿಯ ಪೂರ್ಣ ಕಾಂತಿಯೊಂದಿಗೆ
ಕಡಲ ಎದೆಯಲ್ಲಿ ಏರಿಳಿತದ ಆರಂಭ
ನಲ್ಲನ ಎದುರುಗೊಂಬ ನಲ್ಲೆಯಂತೆ
*****


















