ಗೋವಿಂದ ನಿನ್ನ ನೆನಪುಗಳು ನಿತ್ಯ
ನನ್ನ ಮನದಲಿ ಕಾಡಿರಲಿ
ಯಾವ ವಿಚಾರಕ್ಕೆ ಲಗ್ಗೆ ಹಾಕದಂತೆ
ನಿನ್ನ ಗುಣಗಾನ ಮಾಡಿರಲಿ
ಯಾರ ರೂಪ ಚಿತ್ರಿಸಿದಂತೆ
ನನ್ನ ಎದೆ ಖಾಲಿ ಇರಲಿ
ಈ ಹೃದಯದ ತುಂಬೆಲ್ಲ
ನಿನ್ನ ದರುಶನ ಖಯಾಲಿ ಇರಲಿ
ಯಾರ ನುಡಿಯು ಕೇಳದಂತೆ
ನನ್ನ ಕರ್ಣಂಗಳಾಗಿರಲಿ
ಆ ಕರ್ಣಗಳ ಬಾನ ತುಂಬೆಲ್ಲ
ನಿನ್ನ ಕಿರುತಿ ಕೇಳಿರಲಿ
ಯಾರ ಸ್ಪರ್ಶವಾಗದಂತೆ
ಎನ್ನ ತನು ತಟಸ್ಥವಿರಲಿ
ನಿನ್ನ ರಾಸಲೀಲೆಗೆ ಹಾಡುತ್ತ
ನಿಸ್ವಾರ್ಥ ಪ್ರೀತಿ ಬಯಸಿರಲಿ
ತನು ತನವಿನ ಇಂಚಿನಲ್ಲೂ
ನಿನ್ನ ತಂಗಾಳಿ ಹರಡಲಿ
ಮಾಣಿಕ್ಯ ವಿಠಲನ ಹೊರತು
ಮತ್ತೇನು ಬೇಡಾಗಿರಲಿ
*****
















