Home / ಕವನ / ನೀಳ್ಗವಿತೆ / ದುಡುಕಿದ ಕೆಡುಕು

ದುಡುಕಿದ ಕೆಡುಕು

(ಅತ್ತೆ ನಾಗಮ್ಮ, ಸೊಸೆ ಹೊನ್ನಮ್ಮ)

(ಪ್ರತಿ ಸಾಲಿನ ಕೊನೆಗೆ ‘ಲೇಗಿಣಿ ಯೇಗಿಣಿಯೇ’ ಎನ್ನಬೇಕು)

ಅತ್ತೆ ನಾಗಮ್ಮ, ಸೊಸೆ ಹೂನ್ನಮ್ಮ ಲೇಗಿಣಿ ಯೇಗೆಣಿಯೇ
ಮಗುಗೆ ಆದಾರೆ ದಂಡಿನ ಕರಿಯ ಲೇಗಿಣಿ ಯೇಗಿಣಿಯೇ ||೧||

“ಕೇಳಲೆ ಕೇಳಲ್ಲೇ ನನ್ನಲು ತಾಯೆ ಲೇಗಿಣಿ ಯೇಗಿಣಿಯೇ
ನನ್ಗಲಾದಾರೂ ದಂಡಿನ ಕರಿಯ ಲೇಗಿಣಿ ಯೇಗಿಣಯೇ ||೨||

ಸೊಸಿಯನಾದಾರೂ ಬೆಂಕಿಗೆ ಕಳ್ಳ ಬೇಡಾ ಲೇಗಿಣಿ ಯೇಗಿಣಿಯೇ
ಸೊಸಿಯ ನಾದಾರೂ ನೀರಿಗೆ ಕಳ್ಗ ಬೇಡಾ” ಲೇಗಿಣಿ ಯೇಗಿಣಿಯೇ ||೩||

ಅಟ್ಟಂಬೂ ಮಾತಾ ಹೇಳನೆ ಲರ್‍ಸೂ ಲೇಗಿಣಿ ಯೇಗಿಣಿಯೇ
ಅವಾರುಲಿನ್ನೇ ದಂಡೀಗೆ ಹೋಗವ್ನೇ ಲೇಗಿಣಿ ಯೇಗಿಣಿಯೇ ||೪||

ಬಳುಗಾರಾ ಇನ್ನೇ ಬಳಿಯ ತಂದವ್ನೆ ಲೇಗಿಣಿ ಯೇಗಿಣಿಯೇ
“ಕೇಳಲೆ ಕೇಳಲ್ಲೇ ನನ್ನಲು ಸೊಸಿಯೇ ಲೇಗಿಣಿ ಯೇಗಿಣಿಯೇ ||೫||

ಬಳುಗಾರಾ ಬಂದವ್ನೇ ಬಳಿನಾರು ಲಾಕವ್ವ ಲೇಗಿಣಿ ಯೇಗಿಣಿಯೇ
ದಣಿಯ ಇರ್‍ಸವಲ್ಲಿ ತುಸುನಾರು ಇರಸೂ” ಲೇಗಿಣಿ ಯೇಗಿಣಿಯೇ ||೬||

ಬಳಿನಾರೂ ಹಾಕ್ದಮೇನೇ ಸಪ್ನಾರೂ ಬಿದ್ದೀ ಲೇಗಿಣಿ ಯೇಗಿಣಿಯೇ
ದಂಡೀಗೆ ಲೋಗೀ ಬಂದನೇ ಲರಸು ಲೇಗಿಣಿ ಯೇಗಿಣಿಯೇ ||೭||

ದಂಡಿಗೋದ ಗಂಡ ಬಂದನೆ ಲಂದೀ ಲೇಗಿಣಿ ಯೇಗಿಣಿಯೇ
ಮಡುದೀಲಾದಾರೂ ಲಾರುತಿ ತಂತೂ ಲೇಗಿಣಿ ಯೇಗಿಣಿಯೇ ||೮||

ತಂದ ಲಾರುತಿಯ ಮುಟ್ಟಲುಲಿಲ್ಲ ಲೇಗಿಣಿ ಯೇಗಿಣಿಯೇ
ಹತ್ತೀದ ಜೇಜೀ ಇಳಿದೀದರಸಗೋಳು ಲೇಗಿಣಿ ಯೇಗಿಣಿಯೇ ||೯||

ಜಗ್ಲಿ ಮೇನೆ ಹೋಗೀ ಕುಂತಲರ್ಸ ಗೋಳು ಲೇಗಿಣಿ ಯೇಗಿಣಿಯೇ
“ಕೇಳಲ್‌ ಕೇಳೆಲ್ಲೊ ನನ್ನಲು ಮಗನೇ ಲೇಗಿಣಿ ಯೇಗಿಣಿಯೇ ||೧೦||

ತಂದ ಲಾರುತಿಯ ಮುಟ್ಟಲುಲಿಲ್ಲ ಲೇಗಿಣ ಯೇಗಿಣಿಯೇ
ಹೋಗಿ ಇನ್ನಾರೇ ಕುಂತೀ ಬಿಟ್ಟಿದೇ ಲೇಗಿಣಿ ಯೇಗಿಣಿಯೇ ||೧೧||

ಅದ ಕಾರಣವಾ ನಮಗೇಳು ಮಗನೇ” ಲೇಗಿಣಿ ಯೇಗಿಣಿಯೇ
ಲಟ್ಟಂಬೂ ಮಾತಾ ಕೇಳದೆ ತಾಯಿ ಲೇಗಿಣಿ ಯೇಗಿಣಿಯೇ ||೧೨||

ಬಚ್ಚಲಕೆ ಕಿಚ್ಚ ಮಗುದದೆ ನೋಡು ಲೇಗಿಣಿ ಯೇಗಿಣಿಯೇ
ಬಚ್ಚಲಕೆ ಕಿಚ್ಚ ಯರದಳು ನೋಡು ಲೇಗಿಣಿ ಯೇಗಿಣಿಯೇ ||೧೩||

ಗಾಡದಿಂದಡಗೀ ಅನುಮಾಡ್ತು ತಾಯೀ ಲೇಗಿಣಿ ಯೇಗಿಣಿಯೇ
“ಕೇಳಲೆ ಕೇಳಲ್ಲೋ ನನ್ನಲು ಮಗುನೇ ಲೇಗಿಣಿ ಯೇಗಿಣಿಯೇ ||೧೪||

ಕೇಳಲ್‌ ಕೇಳಲ್ಲೋ ನನ್ನಲು ಮಗುನೇ ಲೇಗಿಣಿ ಯೇಗಿಣಿಯೇ
ಲೂಟಕಾದಾರೂ ಹೋಗುಬಹುದೊ” ಲೇಗಿಣಿ ಯೇಗಿಣಿಯೇ ||೧೫||

ಅಟ್ಟಂಬೂ ಮಾತಾ ಕೇಳವ್ನೇ ಮಗ ಲೇಗಿಣಿ ಯೇಗಿಣಿಯೇ
ವೂಟಕಾರೂವಾ ಯೆದ್ದಿ ಹೋಗವ್ನೇ ಲೇಗಿಣಿ ಯೇಗಿಣಿಯೇ ||೧೬||

ಆರ್‌ ತುತ್ತುಂಬಲ್ಲೀ ಮೂರ್‌ ತುತ್ತ ಉಂಡನೇ ಲೇಗಿಣಿ ಯೇಗಿಣಿಯೇ
“ಕೇಳಲೆ ಕೇಳಲ್ಲೇ ನನ್ನಲು ಸೊಸಿಯೇ ಲೇಗಿಣಿ ಯೇಗಿಣಿಯೇ ||೧೭||

ಲೂಟಕಾದಾರೂ ಬರಬಹುದು ಸೊಸಿಯೇ” ಲೇಗಿಣಿ ಯೇಗಿಣಿಯೇ
“ನಿನ್‌ ವೋಟ ಆದಾರೇ ನನಗೇನು ಬೇಡ ಲೇಗಿಣಿ ಯೇಗಿಣಿಯೇ ||೧೮||

ನಿನ ಬಳಿಯ ಇಟ್ಟದ್ದು ನನಗದೆ ಮೋಸಾ?” ಲೇಗಿಣಿ ಯೇಗಿಣಿಯೇ
ಪಟ್ಟಿಮಂಚಕೇ ನಡೆದಳು ಮಡದೀ ಲೇಗಿಣಿ ಯೇಗಿಣಿಯೇ ||೧೯||

ಮದ್ದುದಾತುರಿಯೇ ಆಗಿತು ನೋಡು ಲೇಗಿಣಿ ಯೇಗಿಣಿಯೇ
ಒಳಗಿನ್ನ ಹೋಗೀ ಬಿದ್ದೀದಲರಸೂ ಲೇಗಿಣಿ ಯೇಗಿಣಿಯೇ ||೨೦||

ಪಟವ ಆದಾರೇ ತಡದನೆ ನೋಡು ಲೇಗಿಣಿ ಯೇಗಿಣಿಯೇ
ಕೊಚ್ಚಿ ಕೊಚ್ಚಿನ್ನೇ ಸಂವ್ರಣಿ ಮಾಡೀದ ಲೇಗಿಣಿ ಯೇಗಿಣಿಯೇ ||೨೧||

ಕೊಚ್ಚಿ ಕೊಚ್ಚನ್ನೇ ಮುಟ್ಟಿಯ ತುಂಬಿ ಲೇಗಿಣಿ ಯೇಗಿಣಿಯೇ
ಗದೀದ ಹೆರಗೆ ಬಂದೀದ ಲೇಗಿಣಿ ಯೇಗಿಣಿಯೇ ||೨೨||

ಯೆಳ್ಳಿಯ ಮರವಾ ಹತ್ತೀದ ಹೋಗೀ ಲೇಗಿಣಿ ಯೇಗಿಣಿಯೇ
ಯೆಳ್ಳಿಯ ಮರನಾ ಮೇಲೆ ಕೂತವ್ನ ನೋಡು ಲೇಗೆಣಿ ಯೇಗಿಣಿಯೇ ||೨೩||

ಹಪ್ಗಿಡ್ನ ಲೇಸ ತಾಳವ್ನೆ ನೋಡು ಲೇಗಿಣಿ ಯೇಗಿಣಿಯೇ
ಯೆಳ್ಳಿಯ ಮರನಾ ಮೇಲೆ ಹೋಗಿ ಕುಂತವ್ನೇ ಲೇಗಿಣಿ ಯೇಗಿಣಿಯೇ ||೨೪||

ಬೆಳ್ಗೆ ಆದಾರೂ ಯೇಳೂಲಿಲ್ಲ ಲೇಗಿಣಿ ಯೇಗಿಣಿಯೇ
ಆಚಿ ಮನ್ಯವ್ರಾ, ಇಚೇ ಮನ್ಯವ್ರಾ ಲೇಗಿಣಿ ಯೇಗಿಣಿಯೇ ||೨೫||

ಆಚಿ ಮನಿ ಅಕ್ಕೂದೀರು ಈಚಿ ಮನಿ ತಂಗುದೀರು ಲೇಗಿಣಿ ಯೇಗಿಣಿಯೇ
“ಸೊಸಿಯು ಹೊನ್ನಮ್ಮ ಯೆಲ್ಲೀಗ್‌ ಹೋಗೀತು?” ಲೇಗಿಣಿ ಯೇಗಿಣಿಯೇ ||೨೬||

ಅಟ್ಟಂಬೂ ಮಾತಾ ಕೇಳದೆ ನಾಗಮ್ಮ ಲೇಗಿಣಿ ಯೇಗಿಣಿಯೇ
“ಕೇಳಲ್‌ ಕೇಳಲ್ಲೇ ಹೊನ್ನಮ್ಮ ಸೊಸಿಯೆ” ಲೇಗಿಣಿ ಯೇಗಿಣಿಯೇ ||೨೭||

ಕದಮೀಡ ತೆಗದೀ ವಳುಗೆ ಹೋಗದಿಯೆ ಲೇಗಿಣಿ ಯೇಗಿಣಿಯೇ
‘ಹರಹರ’ ನಂತು ‘ಸಿವಸಿವ’ ನಂತು ಲೇಗಿಣಿ ಯೇಗಿಣಿಯೇ ||೨೮||

ಲಟ್ಟಂಬೂ ಮಾತಾ ಕೇಳದೆ ನಾಗಮ್ಮ ಲೇಗಿಣಿ ಯೇಗಿಣಿಯೇ
ತನ್ನ ತೌರೀಗೇ ಹೋಗದೆ ನೋಡು ಲೇಗಿಣಿ ಯೇಗಿಣಿಯೇ ||೨೯||

ಅಟದೂರ ಬರು ಬರವಾ ಇಟ್ಟದೂರೆ ನೋಡವ್ರೇ ಲೇಗಿಣಿ ಯೇಗಿಣಿಯೇ
“ಎನ ಬಂದೇ ಲತ್ತೇ, ಯಂತ ಬಂದೆ ಲತ್ತೇ ಲೇಗಿಣಿ ಯೇಗಿಣಿಯೇ ||೩೦||

ಬಂದ ಕಾರಣವಾ ವದಗ ಹೇಳೆ ಲತ್ತೇ” ಲೇಗಿಣಿ ಯೇಗಿಣಿಯೇ
“ಕೇಳಲೆ ಕೇಳಲ್ಲೊ ನನ್ನ ಅಳಿದೀರ ಲೇಗಿಣಿ ಯೇಗಿಣಿಯೇ ||೩೧||

ನಮ್ಮನಿ ತನ್ನೆ ಬಗಿಲೆ ಬರುಬೇಕು ಲೇಗಿಣಿ ಯೇಗಿಣಿಯೇ
ನಮ್ಮನಿ ತನ್ನೆ ಬರಬೇಕೂ ಲೇಗಿಣಿ ಯೇಗಿಣಿಯೇ ||೩೨||

“ಕೇಳಲ್ ಕೇಳಲ್ಲೊ ನನ್ನಲು ಅಳದೀರ” ಲೇಗಿಣಿ ಯೇಗಿಣಿಯೇ
ಏಳ ಜನ ಅಳಿದೀರು ಏಳ ಕೊದ್ರಿ ಹತ್ತವ್ರೆ ಲೇಗಿಣಿ ಯೇಗಿಣಿಯೇ ||೩೩||

ತಂಗಿಯ ಮನಿಗೂ ಬಂದವ್ರೆ ನೋಡ ಲೇಗಿಣಿ ಯೇಗಿಣಿಯೇ
ಮುತ್ತೀನ ಗಿಂಡೀಲಿ ಹಣಯಲು ಲುದುಕ ಲೇಗಿಣಿ ಯೇಗಿಣಿಯೇ ||೩೪||

ಪಟ್ಟಿ ಮಂಚವ ಕುಡ್ಗ್‌ ಹಾಸದಿಯೇ ಲೇಗಿಣಿ ಯೇಗಿಣಿಯೇ
“ಕೇಳಲೆ ಕೇಳಲ್ಲೊ ನನ್ನಲು ಅಳದೀರ ಲೇಗಿಣಿ ಯೇಗಿಣಿಯೇ ||೩೫||

ಆಸರ ಕಾದರೇ ಕುಡಿ ಬನ್ನಿ ಈಗೇ” ಲೇಗಿಣಿ ಯೇಗೆಣಿಯೇ
ಗಿಂಡೀಲಿ ನೊರಿ ಹಾಲ ತಂದೀಲಿಟ್ಟನೇ ಲೇಗಿಣಿ ಯೇಗಿಣಿಯೇ ||೩೬||

“ನಿನ್ನಾಸರೆ ಹಾಳಾಲೀ, ಆಸರ್‌ ತೊಳಿಲೀ ಲೇಗಿಣಿ ಯೇಗಿಣಿಯೇ
ತಂಗೀ ಹೊನ್ನಮ್ಮ ತಂದಿ ತೋರೀಸು” ಲೇಗಿಣಿ ಯೇಗಿಣಿಯೇ ||೩೭||

ಅಂದೇಳಿ ಯೇಳ ಜನ ಅಣದೀರು ಹೇಳವ್ರೇ ಲೇಗಿಣಿ ಯೇಗಿಣಿಯೇ
“ಹೊನ್ನಮ್ಮನ ಸುದ್ದೀ ನಾಯೇನ ಹೇಳಲೀ? ಲೇಗಿಣಿ ಯೇಗಿಣಿಯೇ ||೩೮||

ನಿಮ್ಮಲು ಬಾವ್ಗೇ ದಂಡೀನ ಕರ್ಯಾ ಲೇಗಿಣಿ ಯೇಗಿಣಿಯೇ
ಬಳಗರ ಬೊಬ್ಬಣ್ಣ ಬಳಿಯ ತಂದೀದ ಲೇಗಿಣಿ ಯೇಗಿಣಿಯೇ ||೩೯||

‘ಬಳ್ಯನಾದರೂ ಲಿಡವ್ವ’ಲಂದೇ ಲೇಗಿಣಿ ಯೇಗಿಣಿಯೇ
ನನ್ನಲು ಸೊಸ್ಯೂ ಬಳ್ಳಲಿಟ್ಟೀತು ಲೇಗಿಣಿ ಯೇಗಿಣಿಯೇ ||೪೦||

ದಂಡೀಗೊದ ಮಗನೂ ಬಂದೀದ ನೋಡು ಲೇಗಿಣಿ ಯೇಗಿಣಿಯೇ
ಕೊಟ್ಟಲಾರುತಿಯ ಮುಟ್ಟಲು ಇಲ್ಲ ಲೇಗಿಣಿ ಯೇಗಿಣಿಯೇ ||೪೧||

ಹಿಂಡೂತಿ ಕೈಲಿ ಮಾತಾಡೂಲೆಲ್ಲ” ಲೇಗಿಣಿ ಯೇಗಿಣಿಯೇ
ಏಳ ಜನ ಅಣದೀರು ವಳಗೆ ಹೋಗವ್ರೇ ಲೇಗಿಣಿ ಯೇಗಿಣಿಯೇ ||೪೨||

ಏಳ ಜನ ಅಣದೀರು ಏಳ್‌ ತುಂಡ ತಾವೂ ಲೇಗಿಣಿ ಯೇಗಿಣಿಯೇ
ಅಂಗೈಯ ಮೇನಿನ್ನೆ ಬಸ್ಮ ಮಾಡವ್ರೇ ಲೇಗಿಣಿ ಯೇಗಿಣಿಯೇ ||೪೩||

ಕೆರೀಗಾದಾರೂ ಕೈತೋಳೂಕೆ ಹೋದ್ರೂ ಲೇಗಿಣಿ ಯೇಗಿಣಿಯೇ
ಮಿವ ಕಾದಾರೆ ಹೋಗಿ ನಿತ್ತರೆ ಲೇಗಿಣಿ ಯೇಗಿಣಿಯೇ ||೪೪||

ತಾಂಬರ ಹೋಗಾಗೀ ಅಲುದದೆ ನೋಡು ಲೇಗಿಣಿ ಯೇಗಿಣಿಯೇ
ಕೈಗೆ ಬತ್ತದೇ ಹಿಂದೇ ಹೋತದೇ ಲೇಗಿಣಿ ಯೇಗಿಣಿಯೇ ||೪೫||

“ಕೇಳಲ್‌ ಕೇಳಲ್ಲೋ ಹೇ ನನ್ನ ತಮ್ಮ, ಲೇಗಿಣಿ ಯೇಗಿಣಿಯೇ
ಇದುವು ಆದಾರೂ ವಿಚಿತ್ರ ಕೆಲಸ ಲೇಗಿಣಿ ಯೇಗಿಣಿಯೇ ||೪೬||

ತಾಂಬರೆಳ್ಳಿ ಹೂಗೂ ಅಲುದೀತು ನೋಡು ಲೇಗಿಣಿ ಯೇಗಿಣಿಯೇ
ನಮುಗೆ ಕೈಗಾದ್ರೇ ಸಿಕ್ಕಿತು ನೋಡು” ಲೇಗಿಣಿ ಯೇಗಿಣಿಯೇ ||೪೭||

ಮನೆಗೆ ಆದವ್ರೆ ಬಂದವ್ರೆ, ನೋಡು ಲೇಗಿಣಿ ಯೇಗಿಣಿಯೇ
ಬಟ್ಟರ ಮನಿಗೇ ನೆಡುದವ್ರೆ ಲೇಗಿಣ ಯೇಗೆಣಿಯೇ ||೪೮||

ಜೋಯಿಸ್ರ ಇನ್ನೇ ಕೇಳವ್ರೆ ನೋಡು ಲೇಗಿಣಿ ಯೇಗಿಣಿಯೇ
“ನಮಗೇ ಆದಾರೇ ತಾಂಬರೆಳ್ಳಿ ಹೂಗೂ ಲೇಗಿಣಿ ಯೇಗಿಣಿಯೇ ||೪೯||

ಯೆಳ್ಳಿಲೂಗಾಗೀ ಲಲುದೀತು ನೋಡು ಲೇಗಿಣಿ ಯೇಗಿಣಿಯೇ
ಯೇನೇನ ಮಾಡಿದ್ರೂ ಕೈಗೆ ಸಿಕುದೆಲ್ಲ ಲೇಗಿಣಿ ಯೇಗಿಣಿಯೇ ||೫೦||

ಕೇಳಲೆ ಕೇಳಲ್ಲೋ ಲುಕ್ಸಾನೋ ಯೇನು?” ಲೇಗಿಣಿ ಯೇಗಿಣಿಯೇ
“ಅತ್ತಿ ಕೂಡ ಹೋಗೀ ಲೇಳಪ್ಪ ನೀನು ಲೇಗಿಣಿ ಯೇಗಿಣಿಯೇ ||೫೧||

ನಿನ್ನಲು ಸೊಸಿಯೂ ಸಿಕತಾಳೆ ನಿಮಗೇ” ಲೇಗಿಣಿ ಯೇಗಿಣಿಯೇ
ಲಂದೇ ಬಟ್ಟರು ನುಡಿದವ್ರೆ ನೋಡು ಲೇಗಿಣಿ ಯೇಗಿಣಿಯೇ ||೫೨||

“ನಿನ್ನಲು ಮಗನೂ ಲೆಳ್ಳಿಮರನ ಮೇನವ್ನೆ ಲೇಗಿಣಿ ಯೇಗಿಣಿಯೇ
ಅವ್ನಲಾದಾರೂ ಕರುಕೊಂಡಿ ಹೋಗು” ಲೇಗಿಣಿ ಯೇಗಿಣಿಯೇ ||೫೩||

ಅಟ್ಟಂಬೂ ಮಾತಾ ಕೇಳೀತು ತಾಯೀ ಲೇಗಿಣಿ ಯೇಗಿಣಿಯೇ
ಯಳ್ಳಿಮರ ನಡುಗೇ ನಡೆದಳು ತಾಯೀ ಲೇಗಿಣಿ ಯೇಗಿಣಿಯೇ ||೫೪||

“ಕೇಳಲ್‌ ಕೇಳಲ್ಲೋ ನನ್ನಲು ಮಗುನೇ ಲೇಗಿಣಿ ಯೇಗಿಣಿಯೇ
ಆಗುವ ಕೆಲುಸಾಲಾಗಿತು ಮಗುನೇ ಲೇಗಿಣಿ ಯೇಗಿಣಿಯೇ ||೫೫||

ಕೆಳಗಾರು ಲಿನ್ನೇ ಇಳಿದಿ ಬಾರಪ್ಪ” ಲೇಗಿಣಿ ಯೇಗಿಣಿಯೇ
ಏನೇನ್ಹೇಳಿದರೂ ಕೇಳೂದೆಲ್ಲ ಮಗ ಲೇಗಿಣಿ ಯೇಗಿಣಿಯೇ ||೫೬||

ಕೆಳಗೇಲಾದರೂ ಇಳುದೆಲ್ಲ ಮಗ ಲೇಗಿಣಿ ಯೇಗಿಣಿಯೇ
ಅಟ್ಟೊತ್ತುಲಾಯ್ತೂ ಲಿಟ್ಟೂತ್ತಾಯ್ತು ಲೇಗಿಣಿ ಯೇಗಿಣಿಯೇ ||೫೭||

ತಾಯಲಿನ್ನಾರು ಮರಗೂತದೆಯೆ ಲೇಗಿಣಿ ಯೇಗಿಣಿಯೇ
ಆಗೆಲಾದಾರೂ ಕೆಳಗೆಲಿಳುದೀದ ಲೇಗಿಣಿ ಯೇಗಿಣಿಯೇ ||೫೮||

ಕೆರಿಗೇ ಲಾದಾರೂ ಬಂದೀದಲೇಗೇ ಲೇಗಿಣಿ ಯೇಗಿಣಿಯೇ
ಕೈಕಾಲು ಸಿರಿ ಮೊಕವಾ ತೊಳುದನೆ ನೋಡು ಲೇಗಿಣಿ ಯೇಗಿಣಿಯೇ ||೫೯||

ತಾಂಬರೆಳ್ಳಿ ಹೂಗೂ ಲೇನ ಮಾಡುದೆ? ಲೇಗಿಣಿ ಯೇಗಿಣಿಯೇ
ಕೈಯಿ ಕೈಯಿ ಮೇಗೇ ಬರುತದೆ ನೋಡು ಲೇಗಿಣಿ ಯೇಗಿಣಿಯೇ ||೬೦||

‘ಇವಗೊಲಿನ್ನೆ ನಮಗು ಲೆಂತಕ್ಕೆ?’ ಲೇಗಿಣಿ ಯೇಗಿಣಿಯೇ
ಅಂದೇಳೀ ಲವನೇ ಲೆರುಗು ನೋಡವ್ನೇ ಲೇಗಿಣಿ ಯೇಗಿಣಯೇ ||೬೧||

ಏನೇನ ಮಾಡಿದ್ರೂ ಕೇಲೂವದೆಲ್ಲ ಲೇಗಿಣಿ ಯೇಗಿಣಿಯೇ
ಕೈಯಿನ ಮೇನೇ ಬರುತದೆ ಹೂಗೂ ಲೇಗಿಣಿ ಯೇಗಿಣಿಯೇ ||೬೨||

ಇನ್ನೆಲಾದಾರೆ ಏನ ಮಾಡಬೇಕು? ಲೇಗಿಣಿ ಯೇಗಿಣಿಯೇ
ಆ ಹೂಗ ಮುರುದೀ ಅಂಗೀಲಾಕೀದ ಲೇಗಿಣಿ ಯೇಗಿಣಿಯೇ ||೬೩||

ಕೈಕಾಲ್‌ ಸಿರಿಮೊಕವಾ ತೊಳುದೀವ ಲರಸೂ ಲೇಗಿಣಿ ಯೇಗಿಣಿಯೇ
ಹಿಂತಿರುಗಿ ಮನಿಗೇ ಬಂದೀದ ಲರಸೂ ಲೇಗಿಣಿ ಯೇಗಿಣಿಯೇ ||೬೪||

ತನ್ನಲರಮನಿಗೇ ಬಂದೀದ ಲಾಗೇ ಲೇಗಿಣಿ ಯೇಗಿಣಿಯೇ
ಏಳ ಜನ ಬಾವದೀರು ಬರುವರು ನೋಡು ಲೇಗಿಣಿ ಯೇಗಿಣಿಯೇ ||೬೫||

ಆ ಹೂಗ ತೆಗುದೀ ಕೈಯಲ್ಲಾಕವ್ನೇ ಲೇಗಿಣಿ ಯೇಗಿಣಿಯೇ
ಬಾವದಿರ ಬೊಡುದಲ್ಲಿ ಕುಂತವ್ನೆ ನೋಡು ಲೇಗಿಣಿ ಯೇಗಿಣಿಯೇ ||೬೬||

ಹೋಗೀ ಕೈಯ ಲಾಕವ್ನೇ ನೋಡು ಲೇಗಿಣಿ ಯೇಗಿಣಿಯೇ
ಹನ್ನೈಡ್‌ ವರ್‍ಸನ ಹುಡ್ಗಿಲಾಗದೆಯೆ ಲೇಗಿಣಿ ಯೇಗಿಣಿಯೇ ||೬೭||

“ತನ್ನಲು ಮಡುದೀ ಇಲ್ಲೇ ಮೂಡದಯೋ ಲೇಗಿಣಿ ಯೇಗಿಣಿಯೇ
ಕೇಳಲ್‌ ಕೇಳಲ್ಲೋ ಬಾವಲುದೀರ ಲೇಗಿಣಿ ಯೇಗಿಣಿಯೇ ||೬೮||

ನಿನ್ನಲು ತಂಗೀ ಕರುಕಂಡ್‌ ಹೋಗೀ” ಲೇಗಿಣಿ ಯೇಗಿಣಿಯೇ
ಏಳ ಜನ ಲಣದೀರು ತಂಗೀನೂ ಬಾವಾ ಲೇಗಿಣಿ ಯೇಗಿಣಿಯೇ
ಕುದುರೆ ಯೇರಕಂಡೀ ಮನಿಗೆ ಬಂದವ್ರೆ ಲೇಗಿಣಿ ಯೇಗಿಣಿಯೇ ||೬೯||
*****
ಕಲವು ಪದಗಳ ವಿವರಣ:

ದಣಿಯ = ಬಹಳ
ಅನುಮಾಡ್ತು = ತಯಾರ್‌ ಮಾಡ್ತು
ತಾಂಬರ ಹೂಗು = ತಾವರೆ / ಕಮಲದ ಹೂ

ಹೇಳಿದವರು : ತಿಮ್ಮಕ್ಕ ಕಂಚು ನಾಯ್ಕ, ಹೆಗಡೆ ಊರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...