
ನನ್ನ ರನ್ನಾ ಚೆನ್ನಾ! ನನ್ನ ಮಂಗಲಗೌರೀ! ನೋಡವ್ವಾ-ನೋಡು ನಿನ್ನ ಸೊಬಗಿನ ಕಣ್ಣಿನಿಂದೆ. ನನ್ನ ತಾಳಿಯ ಮಣಿಯೊಳಗಿನ ತೇಜವಲ್ಲವೆ ನೀನು? ನನ್ನ ಪ್ರಾಣದ ಪದಕವೆ! ನನ್ನ ಮಾಲಕ್ಷ್ಮೀ! ನೀಡವ್ವಾ-ನೀಡು ನಿನ್ನ ವರದಹಸ್ತದಿಂದೆ. ನನ್ನ ಬೇಳೆಯು ಮಣಿಯೊಳಗಿನ ಬ...
“ಗುರುಗಳೇ! ನೀವು ಏಕೆ ಈ ಪರ್ವತ ಶಿಖರದಲ್ಲಿ ವಾಸವಾಗಿದ್ದೀರಿ? ಇಲ್ಲಿ ಒಬ್ಬರೆ ಇರಲು ನಿಮಗೆ ಆಸರೆ ಯಾರು?” ಎಂದು ಕಳಕಳಿಯಿಂದ ಕೇಳಿದ, ಅಲ್ಲಿ ಹಾದು ಬಂದ ಒಬ್ಬ ಸಾಧಕ. “ಇಲ್ಲಿ ನನಗೆ ಸಾಕಷ್ಟು ಆಸರೆ ಇದೆ. ಬೆಳಗಿನಲ್ಲಿ ಸೂರ್ಯನ ಆಸರೆ, ರಾತ್ರಿಯಲ್ಲ...
ಎಮ್ಮ ತನು ಮನಕೊಗ್ಗದುದೇನಾನು ಮೊಂ ದೆಮ್ಮೊಳಗೆ ಸೇರಿದರದು ತಕ್ಷಣದ ಸೀನಾಗಿ ಕೆಮ್ಮಾಗಿ ಮೇಣ್ ಕೆರೆತ ಕೋಪಂಗಳಾಗಿ ಸುಮ್ಮನಳುವಾಗಿ ದೂರ ಸರಿವಂದದಲಿ ಎಮ್ಮಿರವು ಪ್ರಕೃತಿಗೊಗ್ಗದಿರಲೊಂದು ಸೀನಕ್ಕೂ – ವಿಜ್ಞಾನೇಶ್ವರಾ *****...
ಕತ್ತಲರಾಯನೇ ಚತ್ರೂಳ್ಳಾ ಬಿನುಮಣ್ಣಾ ಮುಪ್ಪಿನ ಕಾಲಕ್ವಂದೂ ಪಲವಿಲ್ಲಾ || ಕತ್ತಲರಾಯಾ ಸೂಲೀಸಕುರಮನಾ ಪುರೂಕೋದ ಸುವ್ವೆ ||೧|| “ಕೇಳ್ ಕೇಳಿ ಯಲುಸ್ವಾಮೀ, ನೀವ್ ಕೇಳೇ ಯಲುಸ್ವಾಮೀ ಮಕ್ಕಳ ಪಲವೇ ನನಗಿಲ್ಲಾ ಸುವ್ವೇ || ಮಕ್ಕಳ ಪಲವೇ ನನುಗೆ...
ಅಧ್ಯಾಯ ಮೂರು ಗೋಲ್ಕಂಡದಲ್ಲಿ ಸೆಟ್ಟರದೊಂದು ಸ್ಪಂತಮನೆ ಇದೆ. ಅಲ್ಲಿ ಸೆಟ್ಟರದು ಒಂದು ಸಂಸಾರ ಯಾವಾಗಲೂ ಇರುತ್ತದೆ. ಒಬ್ಬ ಮನೆವಾರ್ತೆ ಸಂಸಾರ ದೊಡನೆ ಅಲ್ಲಿ ಯಾವಾಗಲೂ ಇರುತ್ತಾನೆ. ಅಲ್ಲಿನ ವ್ಯಾಸಾರ ವಾಣಿಜ್ಯ ರಾಜಕೀಯ ಎಲ್ಲವನ್ನೂ ಸಂಗ್ರಹಿಸಿ ಸೆಟ...
ಬಣ್ಣದ ಬದುಕಲ್ಲ ಚಿನ್ನದ ಬದುಕಲ್ಲ ಇದು ಸುಣ್ಣದ ಬದುಕು ಬದುಕಿನಲಿ ಸುಖವೊ ಮರೀಚಿಕೆ ದುಃಖವೆಂಬುದ ಮುರುಕು ಆಸೆ ಆಸೆಗಳ ಮೇಲೆ ಅಂತಸ್ತುಕಟ್ಟಿ ಅದರ ಮೇಲೆ ಇನ್ನೊಂದು ಆಸೆ ಗಗನದ ಕನಸುಗಳಿಗೆ ಕೈಯೊಡ್ಡಿ ನಿತ್ಯವೂ ಯಾವುದಕ್ಕೊ ನಿರಾಸೆ ಪ್ರೀತಿವಿರದ ನಿರ...
ಮುಂಜಾವಿನ ಚುಮುಚುಮು ಚಳಿಗೆ ಸೂರ್ಯನ ಬೆಚ್ಚನೆಯ ಸ್ಪರ್ಶ ನೇಸರನ ಹಸಿಬಿಸಿ ಮುತ್ತಿಗೆ ಪಾಲುದಾರಳಾದ ಭೂಮಿಗೆ ಹರ್ಷ ಚಳಿಗಾಳಿಯ ಚಲನೆಗೆ ಜಡವಾಗಿದೆ ನಿಸರ್ಗ ಚಿಂವ್ ಚಿಂವ್ ಕೂಗುತ್ತಾ ಸ್ವಾಗತಿಸಿದೆ ಬೆಳಕನ್ನು ಪಕ್ಷಿ ವರ್ಗ ಕೆಂಪು ಗುಲಾಬಿ ಅರಳಿ ನಿಂತ...
ಎಷ್ಟೋ ನಾಡುಗಳಿವೆ ಎಷ್ಟೋ ಕಾಡುಗಳಿವೆ ಕಾಸರಗೋಡು ಒಂದೇ ಅದು ನಾ ಹುಟ್ಟಿ ಬೆಳೆದ ನಾಡು ಕಾಶ್ಮೀರವಲ್ಲ ಕುಲು ಮನಾಲಿಯಲ್ಲ ನೀಲಗಿರಿ ಊಟಿಯಲ್ಲ ಆದರೂ ಅದಕಿರುವುದು ಅದರದೇ ಆದ ಚಂದ ಪಡುಗಡಲ ತಡಿಯ ಒಂದು ತುಣುಕು ಸುಂದರ ಚಂದ್ರಗಿರಿ ನದಿಪಕ್ಕ ಚಂದ್ರಖಂಡದ...
ಹೊಂಗಳಸ ಮಿರುಗುವೆಡೆ ಮೊನೆಗೂಡುವಾಗಸದ ಮೊಳಕಾಲಿನೊಳು ಸರಿವ ಬಿಸಿಲಿನಂಗಳದ ಸದ್ದಿರದೆ ತುಟಿಬೆರಳಿನೊಳು ಸುಳಿವ ಮಾರುತದ ಪಾವಿತ್ರ್ಯದೊಸಗೆಯನು ತಳೆದು ಬಹ ನೆಲದ ನೆನೆದೊಡನೆ ನೆರೆಗೊಳುವ ನೇತ್ರಾಂಬು ತೀರ್ಥಗಳ ಹೊಗೆವೊಳಗನೇರೆ ಬಹ ದಿವ್ಯ ಭಾವಗಳ ಸಿರಿಯ...
ಎಷ್ಟೊಂದು ನಕ್ಷತ್ರಗಳು ಅಡ್ಡ ಬಂದವು ಸೂರ್ಯನ ಬೆಳಕಿಗೆ ಕತ್ತಲೆಯನ್ನು ಕತ್ತರಿಸುವ ಕೋಲ್ ಮಿಂಚನು ತುಂಡರಿಸಬಹುದೆ? ಎಷ್ಟೊಂದು ಶಬ್ದ ಕಂಪನಗಳಾಗಿವೆ ಕತ್ತಲೊಡಗಿನ ಭೂಮಿಯ ಗರ್ಭದಲಿ ಅಂತರಂಗದ ಕತ್ತಲೆಗೆ ಓಡಿಸಲು ನಿಶ್ಯಬ್ದದೊಳಗಣ ಶಬ್ದ ಚಿತ್ತಾರ ಶಬ್ದ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...














