ನನ್ನ ರನ್ನಾ ಚೆನ್ನಾ! ನನ್ನ ಮಂಗಲಗೌರೀ!
ನೋಡವ್ವಾ-ನೋಡು ನಿನ್ನ ಸೊಬಗಿನ ಕಣ್ಣಿನಿಂದೆ.
ನನ್ನ ತಾಳಿಯ ಮಣಿಯೊಳಗಿನ ತೇಜವಲ್ಲವೆ ನೀನು?
ನನ್ನ ಪ್ರಾಣದ ಪದಕವೆ! ನನ್ನ ಮಾಲಕ್ಷ್ಮೀ!
ನೀಡವ್ವಾ-ನೀಡು ನಿನ್ನ ವರದಹಸ್ತದಿಂದೆ.
ನನ್ನ ಬೇಳೆಯು ಮಣಿಯೊಳಗಿನ ಬಂಗಾರವಲ್ಲವೆ ನೀನು?
ನನ್ನ ಜೀವದ ಜ್ಯೋತಿಯೆ! ನನ್ನ ಸರಸತೀ!
ಆಡವ್ವಾ ಆಡು-ನಿನ್ನ ಸವಿನಾಲಗೆಯಿಂದೆ,
ನನ್ನ ಕೈಯ ಕಂಕಣಗಳ ಕಣಕಣವಲ್ಲವೆ ನೀನು?
ನಮ್ಮ ಬನದ ಶಂಕರಿ! ನಮ್ಮ ಭುವನೇಶ್ವರಿ.
ಗುಡ್ಡದ ಎಲ್ಲಮ್ಮ! ಬೆಟ್ಟದ ಚಾಮುಂಡಿ!
ನನ್ನ ಬಾಲಮೋಹನ ನಮ್ಮ ನಾಡ ದೇವತೆ!
*****


















