“ಗುರುಗಳೇ! ನೀವು ಏಕೆ ಈ ಪರ್ವತ ಶಿಖರದಲ್ಲಿ ವಾಸವಾಗಿದ್ದೀರಿ? ಇಲ್ಲಿ ಒಬ್ಬರೆ ಇರಲು ನಿಮಗೆ ಆಸರೆ ಯಾರು?” ಎಂದು ಕಳಕಳಿಯಿಂದ ಕೇಳಿದ, ಅಲ್ಲಿ ಹಾದು ಬಂದ ಒಬ್ಬ ಸಾಧಕ.
“ಇಲ್ಲಿ ನನಗೆ ಸಾಕಷ್ಟು ಆಸರೆ ಇದೆ. ಬೆಳಗಿನಲ್ಲಿ ಸೂರ್ಯನ ಆಸರೆ, ರಾತ್ರಿಯಲ್ಲಿ ಚಂದಿರನ ಆಸರೆ, ಇನ್ನು ಹೇಳಬೇಕೆಂದರೆ ನಕ್ಷತ್ರಗಳ ಮಾತುಕತೆ ಇರುವಾಗ ನನಗೇನು ಕಮ್ಮಿ ಇಲ್ಲ. ಇಲ್ಲಿ ನಾನು ಇರುವುದು ಸೃಷ್ಟಿಯೊಡನೆ, ಒಬ್ಬನೇ ಅಲ್ಲ. ಪರ್ವತ ಶಿಖರಕ್ಕೆ ಸೂರ್ಯ, ಚಂದ್ರ, ನಕ್ಷತ್ರಗಳು ಅದೆಷ್ಟು ಹತ್ತಿರವಾಗಿವೆ. ಎಂದೇ ಇಲ್ಲಿ ಪರ್ವತ ಶಿಖರಕ್ಕೆ
ಬಂದೆ. ಬಂದ ಮೇಲೆ ಕೆಳಗೆ ಇಳಿಯುವ ಮೆಟ್ಟಲು ಪರ್ವತ ಗರ್ಭದಲ್ಲಿ ಹೂತು ಹೋಯಿತು. ಇಲ್ಲಿ ಸಿಂಹಾಸನವಿರುವಾಗ, ಅಲ್ಲಿ ಕೆಳಮುಖ ದಾರಿಯೇಕೆ?” ಎಂದರು.
ಸಾಧಕನು ಸಾಧನೆಯ ಗುರಿಯನ್ನು ಅರಿತುಕೊಂಡು, ಗುರುಗಳಿಗೆ ವಂದಿಸಿದ.
*****


















