ಬಣ್ಣದ ಬದುಕಲ್ಲ ಚಿನ್ನದ ಬದುಕಲ್ಲ
ಇದು ಸುಣ್ಣದ ಬದುಕು
ಬದುಕಿನಲಿ ಸುಖವೊ ಮರೀಚಿಕೆ
ದುಃಖವೆಂಬುದ ಮುರುಕು
ಆಸೆ ಆಸೆಗಳ ಮೇಲೆ ಅಂತಸ್ತುಕಟ್ಟಿ
ಅದರ ಮೇಲೆ ಇನ್ನೊಂದು ಆಸೆ
ಗಗನದ ಕನಸುಗಳಿಗೆ ಕೈಯೊಡ್ಡಿ
ನಿತ್ಯವೂ ಯಾವುದಕ್ಕೊ ನಿರಾಸೆ
ಪ್ರೀತಿವಿರದ ನಿರಾಸೆ ಸಂಪತ್ತಿಲ್ಲದ ನಿರಾಸೆ
ನಿರಾಸೆಗಳೇ ಇಲ್ಲಿ ಭರಪೂರ
ಅವುಗಳೇ ಹೊಡೆದು ಹಾಸಿಕೊಂಡು
ಅದರಲಿ ಆಸೆಗಳ ಮಹಾಪುರ
ಅಪೇಕ್ಷೆ ಆಕಾಂಕ್ಷೆ ಆಯುಷ್ಯದೊಂದಿಗೆ
ಸರಿ ಜೋಡಿಸಿ ಯೋಗಿಸಿಕೊಂಡು
ಲಗಾಮು ಸಡಿಲಿಸಿದ ಕುದುರೆಯಂತೆ
ಮಾಣಿಕ್ಯ ವಿಠಲನ ಮರೆತುನೊಂದು
*****
















