Home / ಕವನ / ನೀಳ್ಗವಿತೆ / ಕಾಳಿಂಗರಾಯ

ಕಾಳಿಂಗರಾಯ

ಕತ್ತಲರಾಯನೇ ಚತ್ರೂಳ್ಳಾ ಬಿನುಮಣ್ಣಾ
ಮುಪ್ಪಿನ ಕಾಲಕ್ವಂದೂ ಪಲವಿಲ್ಲಾ || ಕತ್ತಲರಾಯಾ
ಸೂಲೀಸಕುರಮನಾ ಪುರೂಕೋದ ಸುವ್ವೆ ||೧||

“ಕೇಳ್‌ ಕೇಳಿ ಯಲುಸ್ವಾಮೀ, ನೀವ್‌ ಕೇಳೇ ಯಲುಸ್ವಾಮೀ
ಮಕ್ಕಳ ಪಲವೇ ನನಗಿಲ್ಲಾ ಸುವ್ವೇ ||
ಮಕ್ಕಳ ಪಲವೇ ನನುಗೆಲ್ಲಾ ಯಲು ಸ್ವಾಮೀ ||೨||

ಮಕ್ಕಳ್‌ ಪಲವಾ ಕೊಡು ಸ್ವಾಮೀ ಸುವ್ವೇ,
ಕೊಡುಬೇಕು” ಲಂದೇಳೀ ||
ಕತ್ತಲರಾಯಾ ನುಡ್ದನೇ ಸುವ್ವೇ ||೩||

ಅಟ್ಟಂಬೂ ಮಾತಾ ಕೇಳೀದಾ ಯಲುಸ್ವಾಮೀ
ಮಾವೀನ ಹಣ್ಣಾ ಕೊಡೂವನೆ ಸುವ್ವೇ
“ಕೇಳ್‌ ಕೇಳೋ ಕತ್ತಲರಾಯಾ ನೀ ಕೇಳೋ ಕತ್ತಲ ರಾಯಾ
ಮಡುದೀ ಮಾಲಕ್ಷ್ಮೀಗೆ ಕೊಡುಬೇಕೋ ಸುವ್ವೆ ||೪||

ಅಟ್ಟಂಬೂ ಮಾತಾ ಕೇಳಿದ ಕತ್ತಲರಾಯಾ
ಹಿಂತಿರುಗೀ ಮನಿಗೇ ಬರೂವನೇ ಸುವ್ವೇ || ಬರುವ ಕತ್ತಲರಾಯಾ
ಮಡುದಿ ಮಾಲಕ್ಷ್ಮೀ ಕರೂದನೆ ಸುವ್ವೇ || ಕರುದ ಕತ್ತಲರಾಯಾ
ಮಡದೀ ಮಾಲಕ್ಷ್ಮೀಗೆ ಕೂಡುವನೇ ಸುವ್ವೇ ||೫||

ವಂದಂಬು ತಿಂಗಳಾ ಲಾಗಿತ್‌ ಮಾಲಕ್ಷ್ಮೀಗೇ
ವಂದೆಲೇ ಗೊಂಡಾ ರಸಬಾಳೀ ಸುವ್ವೇ
ವಂದಲೇ ಗೊಂಡಾ ರಸಬಾಳಿ ಹಣ್ಣಿನ್ನೇ
ತಿನ್ನಬೇಕಂಬೂ ಬಯಕಿಯೇ ಸುವ್ವೆ ||೬||

ಯಯ್ಡಂಬ್‌ ತಿಂಗಳಾಽ ಲಾಗಿತ್‌ ಮಾಲಕ್ಷ್ಮೀಗೇ
ಯೆಯ್ದೆಲೇ ಗೊಂಡಾ ರಸಬೊಕ್ಕೆ ಸುವ್ವೆ || ರಸಬೊಕ್ಕೆ ಹಣ್ಣಾನೇ
ತಿನ್ನ ಬೇಕಂಬೂ ಬಯತಕೀಯೇ ಸುವ್ವೇ ||೭||

ಮೂರಂಬು ಅಂಗಳಾ ಲಾಗಿತು ಮಾಲಕ್ಷ್ಮೀಗೇ
ಮೂರ್‌ ಹಣವಿಗೆ ಕೊಂಡಾ ಹರಿಯಳಾ ಸುವ್ವೇ
ಮೂರ್‌ ಹೊನ್ನಿಗೆ ಕೊಂಡಾ, ಹರಿಯಳಾದೊಳಗಿನ್ನೇ
ತಾ ಉಣ್ಣುವೆಲೆಂಬಾ ಬಯಾಕಿಯೇ ಸುವ್ವೇ ||೮||

ನಾಕಂಬ್‌ ತಿಂಗಳಾ ಲಾಗಿತ್‌ ಮಾಲಕ್ಷ್ಮೀಗೇ
ನಾಕ್‌ ಹಣವಿಗೆ ಕೊಂಡ ಹೊಸಪಟ್ಟೀ ಸುವ್ವೇ || ಹೊಸಪಟ್ಟೀ ಸೇರೀಯ
ತಾ ಉಡ್ವೇನೆಂಬಾ ಬಯಕೀಯೇ ಸುವ್ವೇ ||೯||

ಐದಂಬು ತಿಂಗಳಾ, ಲಾಗಿತು ಮಾಲಕ್ಷ್ಮೀಗೇ
ಐದ್‌ ಹಣವಿಗೆ ಕೊಂಡಾ ಹೊಸಚಿನ್ನ ಸುವ್ವೇ || ಲೇಗಿನ್ನೆ
ತಾ ನಿಡ್ವೆನಂಬಾ ಬಯಾಕೀಯೇ ಸುವ್ವೇ ||೧೦||

ಆರಂಬು ತಿಂಗಳಾ ಲಾಗಿತು ಮಾಲಕ್ಷ್ಮೀಗೇ
ಹಾಲು ಚಣ್ಣಕ್ಕೀ ಉಣಬೇಕೋ ಸುವ್ವೇ
ಹಾಲು ಸಣ್ಣಕ್ಕೀ ಉಣಬೇಕುಲಂದೇಳೀ
ಮತ್ತೆ ಮಾಲಕ್ಷ್ಮೀ ಬಯಕಿಯೇ ಸುವ್ವೇ ||೧೧||

ಯೇಳಂಬು ತಿಂಗಳಾ ಲಾಗಿತು ಮಾಲಕ್ಷ್ಮೀಗೇ
ಯೇಳೆಲೆಗೊಂಡಾ ರಸಬಾಳೀ ಸುವ್ವೇ || ಯೆಲಿಮೇನ್ನ
ಉಣ್ಣಬೀಕಂಬೂ ಬಯಕಿಯೇ ಸುವ್ವೇ ||೧೨||

ಯೆಂಟಂಬು ತಿಂಗಳಾ ಲಾಗಿತು ಮಾಲಕ್ಷ್ಮೀಗೇ
ಯೆಂಟಹಣವಿಗೆ ಕೊಂಡಾ ರಸಮಲುಗೀ ಸುವ್ವೇ || ಹೂಗನ್ನೇ
ತಾಮುಡ್ವೆನಂದೀ ಬಯಕಿಯೇ ಸುವ್ವೇ ||೧೩||

ವಂಬತ್‌ ತಿಂಗಳಾ ತುಂಬಿತೆ ಮಾಲಕ್ಷ್ಮೀಗೇ
ಬೇಸರಕೀ ಬಾಳೂ ದಣೂಬಾಳೂ ಸುವ್ವೇ || ಮಾಲಕ್ಷ್ಮೀಗೇ
ಗಂಡು ಸಂತನವಾ ಹಡಿದಳೇ ಸುವ್ವೇ || ಹಡುದಳೇ ಕತ್ತಲರಾಯಾ
ಜೋಯಿಸರ ಮನಿಗೇ ನೆಡೆದನು ಸುವ್ವೇ || ಕತ್ತಲರಾಯ ||೧೪||

“ಬಾಲೆ ಹುಟ್ಟಿದ ಗುಳುಗೀ ನನಗೇಳೀ” ಸುವ್ವೇ
“ದೆನವೂ ವಳ್ಳದೋ ಗಳಗೀನೂ ವಳ್ಳದೋ
ಕಾಳಿಂಗನಂಬೂ ಹೆಸುರಲ್ಲೋ ಸುವ್ವೀ || ಕತ್ತಲರಾಯಾ
ಹನೈಡ್‌ ವರಸೀನಾ ದಿನದಲ್ಲಿ ಸುವ್ವೇ || ಕತ್ತಲರಾಯಾ ||೧೫||

ಹುಲಿರೂಪಾ ಕಂಡೀ ಮಡುದೋತ” ಸುವ್ವೇ
ಅಟ್ಟಂಬೂ ಮಾತ ಕೇಳಿದ ಕತ್ತಲರಾಯಾ
ಹಿಂತಿರುಗೀ ಮನಿಗೇ ಬರೂವನೆ ಸುವ್ವೇ || ಬರುವ ಕತ್ತಲರಾಯಾ
ಮಡುದಿ ಕೂಡ್ಯೇನಾ ನುಡೂದನೆ? ಸುವ್ವೇ ||೧೬||

“ದೆನವು ವಳ್ಳದೇ ಗಳುಗಿನೂ ವಳ್ಳದೇ
ಕಾಳಿಂಗನಂಬೂ ಹೆಸೂರಲ್ಲೀ ಸುವ್ವೇ || ಹೆಸರಲ್ಲೇ ಮಾಲಕ್ಷ್ಮೀ
ಹನ್ನೈಡ ವರುಸೀನಾ ಲಾಯಿಸ್ವಂತೇ ಸುವ್ವೇ || ಆಯಿಸ್ವಂತೇ ಮಾಲಕ್ಷ್ಮೀ
ಹುಲಿರೂವಾ ನೋಡೀ ಮಡಿದೋಗ್ವಾ” ಸುವ್ವೇ ||೧೭||

ಅಟ್ಟಂಬೂ ಮಾತಾ ಕೇಳಿತ್ತೂ ಮಾಲಕ್ಷ್ಮೀ
ಮತ್ತೇ ಕಡುದುಕ್ಕಾ ಬಿಡೂವದೂ ಸುವ್ವೇ || ಬಿಡುವದೇ ಮಾಲಕ್ಷ್ಮೀ
ಆರು ಮೂರು ವರುಸಾ ಗಳೂತನುಕಾ ಸುವ್ವೇ
ಆರು ಮೂರ್‌ ವರುಸಾ ಗಳುದವೇ ಲೀಗಿನ್ನೇ
ಹನ್ನೈಡ್‌ ವರುಸೀನಾ ಪರಾಯಕೇ ಸುವ್ವೇ ||೧೮||

“ಕೇಳು ಕೇಳೆ ನನು ತಾಯೇ, ನೀಕೇಳೇ ನನು ತಾಯೇ
ಅಂಬು ಬಿಲ್‌ಯೆಯ್ದಾ, ಮಾಡಿಕೊಡೇ ಸುವ್ವೇ ಲಂಬಾಗೇ
ಮಾಲಕ್ಷ್ಮೀ ಮಾಡೀ, ಕೊಡೂವದೂ ಸುವ್ವೇ ಲಾಗಿನ್ನೇ
ಊರ ಮಕ್ಕಳಾ ಕುರಕಂಡಾ, ಸುವ್ವೇ || ಕರಕಂಡಾ ಕಾಳಿಂಗಾ
ಹಕ್ಕಿಬೇಟೆಗೇ ನೆಡೀದನೆ ಸುವ್ವೇ || ನೆಡದನೆ ಕಾಳಿಂಗಾ
ವಂದಂಬೂ ಬಿಲ್ದಾ ಯಸೂದನೇ ಸುವ್ವೇ || ಯಸದನೇ ಕಾಳಿಂಗಾ ||೧೯||

ಹುತ್ತಿನಾ ಗುಡ್ಡೀ ಕೆಳುಗಿನ್ನೇ ಸುವ್ವೇ ||
ವಂದಂಬೂ ಬಾಣಾ ಹೊಡುದಾನೇ ಸುವ್ವೇ || ಲೇಗಿನ್ನೇ
ಇನ್ನೊಂದು ಬಾಣಾ ಲೆಸದಾನೇ ಸುವ್ವೇ || ಯೆಸ್ವರೊಳಗಿನ್ನೇ
ಹುಲಿರೂವಾ ಕಂಡೀ ಮಡದಾನೇ ಸುವ್ವೇ || ಕಾಳಿಂಗಾ ||೨೦||

ಮಕ್ಕಳ್ಯೇಗೆ ಮನಿಗೆ ಬರುವರು ಸುವ್ವೇ ||
“ಕೇಳಿರೋ ಕೇಳ್ಯೋ ಕೇರಿಯಾ ಹುಡುಗಾರಾ
ಕಾಳಿಂಗ ಯೆಲ್ಲಿಗೋಗೀ, ಬರಲಿಲ್ಲಾ ಸುವ್ವೇ || ಲೇಗಿನ್ನೇ
ಕಾಳಿಂಗಾನಾ ತಂದೀ ನೀವ್‌ ಕೊಡುಬೇಕೂ” ಸುವ್ವೇ ||೨೧||

“ಕೇಳಿಲ್ಲೇ ಕೇಳೇ ನೀಕೇಳೇ ಯೆಲು ಹೆಣ್ಣೇ
ನಿನ ಕಾಳಿಂಗಾ ಹುತ್ತಿನಾ ಕೆಳಗೇ ಮಡದಾನೇ” ಸುವ್ವೇ ||
ಅಟ್ಟಂಬೂ ಮಾತಾ, ಹೇಳುವ ತನುಕಿನ್ನೇ
ಮತ್ತೇ ದೂಕ್ಕಾವಾ ಬಿಡುತದ್ಯೇ ಸುವ್ವೇ || ಬಿಡ್ವಂತಾ ಸಮ್ಯದಲ್ಲೀ ||೨೨||

ಕತ್ತಲರಾಯ ವೋಡ ಹೋಗೀ, ತರೂವನೆ ಸುವ್ವೇ ||
ಕತ್ತಲರಾಯ ಹೋಗೀ ತರ್‌ವಂತಾ ಸಮಿದಲ್ಲೀ
ಹಾಳ್‌ಬಿದ್‌ ದೇವಸ್ತಾನದಾ ವಳುಗಿಟ್ಟಾ ಸುವ್ವೇ||
ಹಾಳ್‌ಬಿದ್‌ ದೇವಸ್ಥಾನಾದ ವಳುಗಿಟ್ಟಾ ಕತ್ತಲರಾಯ ||೨೩||

ಕದ್ವಮೀಡವಾ ಜಡದನೇ ಸುವ್ವೆ ||
ಹಿಂತಿರಗೀ ಮನಿಗೇ ಬರವನೇ ಕತ್ತಲರಾಯಾ
ಕೇರೀ ಮೇನಿನ್ನೂ ನೆಡೂದನೆ ಸುವ್ವೇ ||೨೪||

“ಅಚಿಕೇರಿ ಅಕ್ಕದೀರಾ, ಇಚಿಕೇರೀ ತಂಗದೀರಾ
ಹತ ಹೇರೂ ಹೊನ್ನಾ ಕೊಡುತೇನೇ ಸುವ್ವೇ || ಕೊಡುತೇನಕ್ಕಾದಿರಾ,
ಸತ ಹಣಕ ಹಣ್ಣಾ ನೀವ್‌ ಕೂಡೀ’ ಸುವ್ವೇ ||೨೫||

ಅಟ್ಟಂಬೂ ಮಾತಾ ಹೇಳೂವ ತನಕಿನ್ನೇ
ಅಕ್ಕದೀರ್‌ ಯೇನಾ ನುಡುದಾರೇ? ಸುವ್ವೇ ||
“ಕೇಳಿರಿ ಕೇಳಿ ಪುರಿಸಾರೆ, ನೀವೇ ಕೇಳೀ
ಆರಂಬೂ ಹೆಣ್ಣು ನಮಗಂಟೇ ಸುವ್ವೇ || ನಮಗುಂಟು ಯಲಸ್ವಾಮಿ ||೨೬||

ಚೆನ್ನಮ್ಮಾ ಮಗಳೂ ಕೊಡುವಾನಿ ಸುವ್ವೇ || ಪುರಿಸಾರೇ
ಹತ್ತೇರೂ ಹೊನ್ನಾ ಲಳುಕಂಬಾ” ಸುವ್ವೇ
ಅಟ್ಟಂಬೂ ಮಾತಾ, ಕೇಳಿತೂ ಲಾಜಾಣೇ
ಹತ್‌ ಹೇರು ಹೊನ್ನಾ ಲಳುಕಂಡೀ ಸುವ್ವೇ || ಲ್ಯೇಗಿನ್ನೇ ||೨೭||

ಚನ್ನಮ್ಮ ಮಗಳಾ ಕೂಡುವಾರೆ ಸುವ್ವೇ || ಕರಕಂಡೀ ಬಂದನೂ
ಹಾಳಬಿದ್‌ ದೇವಸ್ತಾನದಾ ಒಳಗಿಟ್ಟು ಸುವ್ವೇ || ಕತ್ತಲರಾಯ
ಕದ್ವ ಮೆಡವಾ ಜಡುದಿದ್ದಾ ಸುವ್ವೇ || ಜಡದನೆ ಕತ್ತಲರಾಯ
ತನ್ನ ಅರಮನಿಗೆ ತಾ ನಡದನೇ ಸುವ್ವೇ ||೨೮||

ಮೂರು ಯೆಳ್ಳುಂಡೀ ತಾಯಮ್ಮ ಕೊಟ್ಟಿದಾಳೆ
ಅದ್ರಕಟ್ಟಿಲ್ಯೇಗೇ ಬರುತಾಳೆ ಸುವ್ವೇ | ಬರ್‌ವದು ಚೆನ್ನಮ್ಮ
ಕತ್ತಲರಾಯ ಹೋಗ್ವಂತಾ ಸಮಿದಲ್ಲೀ
ಮೂರು ಯೆಳ್ಳುಂಡೀ ಮುರೀತಾಳೆ ಕಟ್ಟುತಾಳೆ ||೨೯||

ಮತ್ತೆ ಲೀಗ್ಯೇನಾ ನುಡಿತಾಳೇ ಸುವ್ವೇ ಚೆನ್ನಮ್ಮಾ
“ಮತ್ತೆಲಿದುವೇನೂ ವಿಪುರೀತಾ” ಸುವ್ವೇ
ಅಟ್ಟಂಬೂ ಮಾತಾ ಹೇಳೂವ ತನುಕಿನ್ನೇ
ಪಾರ್‍ವತಿ ಪರುಮೇಸ ಆಲ್‌ ಬರುತಾರೆ ಸುವ್ವೇ | ಬಂದುಲ್ಯೇನಂಬೂರೆ ||೩೦||

“ಕೇಳಲ್ಲೇ ಕೇಳೇ ನೀ ಕೇಳೇ ಸುವ್ವೇ|| ಯಲು ಮಗುವೆ,
ಅಲ್‌ ಮಲಗಿದರಾತು? ಅವನ್ಯಾರೇ? ಸುವ್ವೇ
ಮಲಗಿದಾರಾತು ಅವನ್ಯಾರೆ” ಲಂಬಾಗೇ ||೩೧||

“ನನಗೆ ಯೇನೀಗೆ ಗುರುತಿಲ್ಲ ಸುವ್ವೆ ||
ಮತ್ತೆ ಯಾರಂದೀ ಗುರುತಿಲ್ಲ ಯಲು ಸ್ವಾಮೀ”
ಅಟ್ಟಂಬು ಮಾತಾ, ನುಡುದಳು ಸುವ್ವೇ || ನುಡ್ವರೊಳಗೆ ಲೀಗೇ
ಮತ್ತೆಲೀಗ್ಯೇನಾ ನುಡುದರೇ? ಸುವ್ವೆ ||೩೨||

“ಕೇಳಲ್ಲೆ ಕೇಳೇ ಯೇ ಮಗುವೆ, ನೀ ಕೇಳೇ
ಅವ್ನಕಯ್ಯನೇ ಹಿಡದೀ ಕೊಳ್ಸಬೇಕೇ” ಸುವ್ವೇ
ಅಟ್ಟಂಬೂ ಮಾತಾ ಹೇಳುವ ತನಕಿಲ್ಲಿ
ಯಯ್ದು ಕಯ್ಯಲ್ಲೀ ನೆಗ್ದೆ ಕುಳುಸದ್ಯೇ ಸುವ್ವೇ | ಕುಳ್ಸೂವ ಸಮೀದಲ್ಲೀ ||೩೩||

ಸ್ವಾಮೀ ಮಾಯಾಗೀ ನೆಡುದಿರೆ ಸುವ್ವೇ || ಹೋಗುವಾಗೆ ಲೀಗಿನ್ನೇ
ಬಿಳ್ಳುಮೂಡಿನ್ನೂ ಬೆಳುಗಾಗೀ ಸುವ್ವೇ || ಬೆಳೂಗಾಗೂ ಸಮಯಕ್ಕೇ
ಕತ್ತಲರಾಯೇನಾ ಮಾಡುವನೇ? ಸುವ್ವೇ || ಮಾಡಿದಾ ಲೇಗಿನ್ನೇ
ಬೆಂಕಿಪೆಟ್ಟಿಗೆಯ ತಡದನೇ ಸುವ್ವೇ || ತಡದನೆ ಕತ್ತಲರಾಯಾ ||೩೪||

ಸೌದಿಕೋಲಿಟ್ಟೂ ಹಿಡುಕಂಡೀ ಸುವ್ವೇ || ಕತ್ತಲರಾಯಾ
ಹಾಳ್‌ಬಿದ್‌ ದೇವಸ್ಥಾನಕೇ ಬರುವನೇ ಸುವ್ವೇ | ಬರ್‌ವಂತಾ ಸಮಿದಲ್ಲಿ
ಮಕ್ಕಳ ಪಗಡಿಯಾ ಹೂಡರೆ ಸುವ್ವೇ ||
ದೇವರ ಮಣ ಕದವಾ ತೆಗ್ದು ಕತ್ತಲರಾಯ ||೩೫||

ಪಗಡಿಯಲಾಟ ಲಾಡ್ವದ ನೋಡಿನ್ನೇ
ಯೆದ್ದಿ ಹೆರಗಿನ್ನ ನೆಡದನೆ ಸುವ್ವೇ ||
ಹಕ್ಕಿ ಬೇಟೆಯ ಮಾಡಿದನೆ ಸುವ್ವೇ || ಕತ್ತಲರಾಯಾ
ಬೆಂಕಿಪೆಟ್ಗಿ ಹೊಡ್ದೀ ಕತ್ತಸಿದ ಸುವ್ವೇ ||೩೬||

ಬೆಂಕಿಪೆಟ್ಗಿ ಹೊಡ್ದೀ ಕತ್ತಸಿದಾ ಸುವ್ವೇ || ಕತ್ತಸಿದಾಲೀಗಿನ್ನೇ
ದವಸದ ಮೇನೇ ಹೆಕ್ಕಿ ಗರುದನೇ ಸುವ್ವೇ || ಗರುದಿದ್ದಾ ಲೇಗಿನ್ನೇ
ಮತ್ತೇ ದೇವಸ್ತಾನಕೇ ಬರುವನೇ ಸುವ್ವೇ || ಬರ್‍ವ ಕತ್ತಲರಾಯಾ
ಚನ್ನಮ್ಮ ಸೊಸ್ಯಾ ಮೆಚ್ಚಿಕಂಡಾ ಸುವ್ವೇ || ಕರೆಕಂಡ ಕತ್ತಲರಾಯಾ ||೩೭||

ಮಗ್ನ ಕೈಹಿಡದೀ ಕರಕಂಡಾ ಸುವ್ವೇ || ಕತ್ತಲರಾಯಾ
ತನ್ನಲರಮನೆಗೇ ತರುವನೆ ಸುವ್ವೇ?
ತನ್ನಲರಮನಿಗೇ ಬಂದೀ ಲ್ಯೇನಂಬೂವಾ?
“ಕೇಳಲ್ಲೇ ಕೇಳೇ ಮನಿಮಡದೀ ಸುವ್ವೇ || ನೀನೀಗೇ ||೩೮||

ನಿನ ನೊಸಿಯು ಚೆನ್ನಮ್ಮಾನಾ ಕರುಕೊಳೇ” ಸುವ್ವೇ
ಅಟ್ಟಂಬೂ ಮಾತಾ ಕೇಳಿತ್ತು ಮನಿಮಡುದೀ
ವೋಡೋಡೀ ಸೊಸ್ಯಾ ಕರಕಂಡ್ತೇ ಸುವ್ವೇ || ಕರಕಂಡೀ ಲ್ಯೇಗಿನ್ನೇ
ಪಟ್ಟೆಮಂಚದಲ್ಲೀ ಕುಳುಸದ್ಯೇ ಸುವ್ವೇ
ಮುತ್ತಾ ಕಂಡಂತೇ ಸಲುಗೂದೇ ಸುವ್ವೇ ||೩೯||
*****

ಕೆಲವು ಪದಗಳ ವಿವರಣೆ:

ಹರಿಯಳಾ = ಹರಿವಾಣ
ಮಡುದೋತ = ಸತ್ತು ಹೋಗುತ್ತಾನೆ

ಹೇಳಿದವರು: ದಿ. ನಾಗಮ್ಮ ನರಸ ನಾಯ್ಕ, ಮಿರ್‍ಜಾನ, ದಿನಾಂಕ: ೦೫-ಏಪ್ರಿಲ್-೧೯೭೨

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...