ಬಂದವರು ಬಂದಿರಲಿ ಹೋದವರು ಹೋಗಿರಲಿ ನಿನ್ನ ಜತೆ ನಾನಿರಲು ಸಾಲದೇನು? ಅವರಿವರು ಹಾಗಿರಲಿ ಈ ದಾರಿ ನಿನಗಿರಲಿ ನೂರಾರು ಸಂಕಷ್ಟ ಬಂದರೇನು. ತೇಲು ನೋಟದ ಜನರ ಅಣಕು ನುಡಿಗಳ ಕೇಳಿ ಎದೆನೊಂದು ಬಗೆಗೆಡುವ ಮನವು ಬೇಡ; ನಿನ್ನ ಹೆಗ್ಗುರಿ ದಾರಿ ಬಹುದೂರ ಹರಿದಿಹುದು ಮುತ್ತಿನಂತಹ ಮಾತು ತಿಳಿದು ನೋಡ. ಜೀವನದ ಕಠಿಣತೆಯ ...

ದೇವರಲಿ ನಿನಗಿರಲಿ ವಿಶ್ವಾಸ ಅಚಲ ಆಗದಿರಲಿ ನಿನ್ನ ಮನಸ್ಸು ಚಂಚಲ ಶುದ್ಧ ಮನವೇ ಆತ್ಮದ ಪ್ರತಿರೂಪ ನಿನ್ನಲ್ಲೆ ಉದಯಿಸುವದು ಪುಣ್ಯ ಪಾಪ ಮನ ಧ್ಯಾನದಲ್ಲಿರಲಿ ಸದಾ ಪರಿಪಕ್ವತೆ ಮಾಡದಿರು ಇನ್ನೋರ್ವರಲಿ ಅಪಖ್ಯಾತಿ ಸಾಧನೆಯ ದಾರಿಯಲಿ ಗಂಭೀರನಾಗಿರು ಹೆಜ...

ವಾಗ್ದೇವಿಗೆ ಭೀಮಾಜಿಯ ಅನುಗ್ರಹದಿಂದ ಶಾಬಯ್ಯನ ಕಟಾಕ್ಷವು ಪರಿಪೂರ್ಣವಾಗಿ ದೊರಕಿತು. ಅವಳು ಮನಸ್ಸಿನಲ್ಲಿ ಮಾಡಿಕೊಂಡ ಪ್ರಧಾ ನವಾದ ಸಂಕಲ್ಪಸಿದ್ಧಿಗೆ ಆ ಇಬ್ಬರು ಅಧಿಕಾರಸ್ತರ ಕೃಪೆಯೇ ಮುಖ್ಯವಾದ ದ್ಹೆಂದು ಮುಂದಿನ ಚರಿತ್ರೆಯಿಂದ ವಾಚಕರಿಗೆ ತಿಳಿಯು...

ಒಂದು ಬಿನ್ನಾಣವಿಹುದು ಸುಸಮಾಧಿ ಸುಪ್ತ ಸೂರ್‍ಯನಂತೆ. ಹೃದಯಗುಹೆಯಲ್ಲಿ ಹಿಗ್ಗು ಹೊತ್ತಿಹುದು ಅನ್ನಿಸತ್ವದಂತೆ. ಹೃದಯ ಹೃದಯ ಮಿಲಿತೈಕ್ಯದಂಥದಿದೆ ಒಂದೆ ಹೃದಯಲೋಕ. ಸುಪ್ರಮೋದ ಪರ್‍ವತದ ಅಗ್ರಕಿದೆ ಭವ್ಯಮೌನ ಮೂಕ. ಶಾಂತಿ ತೊಡೆಯ ತೊಟ್ಟಿಲದಲಾಡಿಸುವಳ...

ಧನ್ಯಾಸಿ ಸತಿಯನಿತು ಪತಿಗೆ ಹತ್ತಿರದ ಜೊತೆಯಾಸತಿಗೆ ಪತಿಯನಿತು ಬಳಿಯಾವುದಿಲ್ಲವಂತೆ ! ಕತೆಯ ಮಾತಿದು ! ಅಲ್ಲದಿರಲು ನಮ್ಮಿಬ್ಬರೊಳು ಅತಿ ದೂರದಂತರವಿದೇತಕಂತೆ ? ಮಡದಿಯಲ್ಲದೆ ಅವನ ಮುಡಿಗೆ ನಾನಾಗಿದ್ದ- ರೆಡೆಬಿಡದೆ ಇರುತಿರ್‍ದೆ ಮುಡಿಯ ಮೇಲೆ, ಮುಡ...

ಪ್ರೀತಿಯಿಂದ ಕೊಲ್ಲು ನೀ ಸುಖವಾಗಿ ಸಾಯುವೆ|| ಪ್ರೀತಿಸಿದಂತೆ ನಟಿಸಿ ಮಾತ್ರ ಮೋಸವ ಮಾಡಬೇಡ! ಪವಿತ್ರ ಪ್ರೀತಿ ನನ್ನದು, ಅದು ಎಂದೆಂದೂ ಅಜರಾಮರ|| ಮಗುವು ಅಮ್ಮನ ನಂಬಿದಂತೆ ನಾನು ನಿನ್ನ ನಂಬಿದೆ| ತಂಗಿಯು ಅಣ್ಣನ ನಂಬಿದಂತೆ ನಾ ನಂಬಿದೆ| ಹೂವೊಂದು ...

ಸಿಡಿದು ಹೋಗಲಿ ತಾರೆ ನೆಗೆದು ಬೀಳಲಿ ಚಂದ್ರ ಹೂತು ಹೋಗಲಿ ಹಗಲು ಬಂದೀತು ನಮಗೆ ಹೊಸ ಹೊತ್ತು. ಕಗ್ಗತ್ತಲ ಕೋಟೆಯಲ್ಲಿ ಹೊಸ ಆಸೆಯ ಹುಟ್ಟು. ಕತ್ತು ಮುರಿಯುವ ಕತ್ತಲಿಗೆ ಇಟ್ಟೇವು ಭಗ್ಗೆನ್ನುವ ಬೆಂಕಿ ಬೆಂದು ಹೋಗಲಿ ಬೂದಿಯಾಗಲಿ ಸೆರೆ ಕುಡಿಸಿದ ಸಾಧನ...

ವರ್‍ಷದಲ್ಲಿ ಲೆಕ್ಕಹಾಕಿ ನೋಡಿದರೆ ಕವನ ಸಂಕಲನಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಅಂದರೆ ಕಾವ್ಯ ಕಟ್ಟುವವರ ಸಂಖ್ಯೆ ಹೆಚ್ಚಾಗಿಯೇ ಕಾಣಿಸುತ್ತದೆ. ಚಳವಳಿಯ ಹಿನ್ನೆಲೆಯಿಂದ, ತಾತ್ವಿಕ ಹಿನ್ನೆಲೆಯಿಂದ ವಿಪುಲವಾಗಿ ಸೃಷ್ಟಿಯಾದ ಕಾವ್ಯದ ಹುಲುಸಾದ ಬೆಳೆ...

ತಾತ ನೀನು ಕಥೆ ಹೇಳಿರುವೆ ನಿನಗೆ ಕಂಪ್ಯೂಟರ್ ಬಗ್ಗೆ ಹೇಳುವ ಮೊದಲಿಗೆ ಒತ್ತಿ ಆನ್ ಗುಂಡಿ ಬೆಳ್ಳಿ ಪರದೆ ಮೂಡಿತು ನೋಡಿ ಇದಕ್ಕೆ ಹೇಳುವರು ಮೌಸೆಂದು ಗಣಪತಿ ವಾಹನ ಇಲಿಯೆಂದು ಕನ್ನಡ ನುಡಿ ಫಾಂಟಾವನ್ನು ಗಣಕ ಪರಿಷತ್ತು ನೀಡಿದೆ. ಕನ್ನಡ ನುಡಿಯ ಅಕ್ಷ...

ಅರ್‍ಜುನನ ಹೃದಯದಲಿ ಪ್ರತಿಬಿಂಬಿಸಿದ ದೇವ ಪರ್ಜನ್ಯನೊಲು ಆತ್ಮ ಸುಜ್ಞಾನಗಳ ತಿಳಿವ ನಿರ್ಜೀವರಾದೆಮಗೆ ಧಾರೆಯೆರೆದೀ ಜಳವ ವರ್ಜಿಸಿದೆ ಬೋಧಿಸುತ ನಿನ್ನ ವಚನಾಮೃತವ. ಸೌಜನ್ಯ ಬೆಳೆ ಬಿತ್ತಿ ಬೆಳೆದೇರಿ ಪೂಫಲವ ನಾರ್ಜಿಸಿದೆವಾವಿಂದು ನಿನ್ನ ಕೃಪೆಯಿಂದೋಲ...

ನನ್ನ ಬಾಗಿ ಕಾಮನಬಿಲಾದ ಬೆನ್ನು ಗುಳಿಬಿದ್ದ ಕಣ್ಣು ಸುಕ್ಕುಗಟ್ಟಿ ಗೆರೆಮೂಡಿ ಮಾಗಿದ ಮುಖ ನಡುಗುತ್ತಿರುವ ಕೈಗಳಲ್ಲಿ ನನ್ನ ಕನಸಿನ ವಸಂತಗಳನ್ನು ಭದ್ರವಾಗಿ ಹಿಡಿದಿಡಲು ನಿರಂತರ ತವಕಿಸುತ್ತೇನೆ. ನನ್ನವನ ಪ್ರೀತಿ ತುಂಬಿದ ಪತ್ರಗಳನ್ನು ಹಳೆಯ ಪೆಟ್ಟ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...