ಪ್ರೀತಿಯಿಂದ ಕೊಲ್ಲು ನೀ

ಪ್ರೀತಿಯಿಂದ ಕೊಲ್ಲು ನೀ
ಸುಖವಾಗಿ ಸಾಯುವೆ||
ಪ್ರೀತಿಸಿದಂತೆ ನಟಿಸಿ
ಮಾತ್ರ ಮೋಸವ ಮಾಡಬೇಡ!
ಪವಿತ್ರ ಪ್ರೀತಿ ನನ್ನದು, ಅದು
ಎಂದೆಂದೂ ಅಜರಾಮರ||

ಮಗುವು ಅಮ್ಮನ ನಂಬಿದಂತೆ
ನಾನು ನಿನ್ನ ನಂಬಿದೆ|
ತಂಗಿಯು ಅಣ್ಣನ
ನಂಬಿದಂತೆ ನಾ ನಂಬಿದೆ|
ಹೂವೊಂದು ಮುಳ್ಳನು
ನಂಬಿದಂತೆ ನಾನು ನಿನ್ನ ನಂಬಿದೆ|
ಆದರೆ ನೀನು ಮಾತ್ರ
ಆ ನಂಬಿಕೆಯನ್ನೆಲ್ಲಾ ಹುಸಿಮಾಡಿದೆ||

ನನ್ನ ಪ್ರೀತಿ ಅಮೃತದಿ ನೀನು
ಸಿಹಿಯ ವಿಷಬೆರಸಿ ಉಣಿಸಿದೆ|
ಹಾಲಾಹಲವ ಹಾಲೆಂದು
ನಂಬಿ ನಾನು ಪ್ರೀತಿಯಿಂದಲಿ ಕುಡಿದೆ|
ನನ್ನ ಮಾನಸ ಸರೋವರದಲಿ
ಕರಗದ ಮಂಜು ಗಡ್ಡೆಯಾಗಿ ನೀನು
ಧುಮುಕಿ ಹೃದಯವನು ಕಲಕಿದೆ|
ಈಗ ಬಣ್ಣವೇ ಇರದ ಹಿಮಗಡ್ಡೆಯಾಗಿ
ಹೆಪ್ಪುಗಟ್ಟುತಾ ಶೀತ ಶೈತ್ಯದಲಿ
ನಾನು ಶಿಲೆಯಾಗುತಿರುವೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ಹೊತ್ತು
Next post ಆಗಿದ್ದರೆ…!

ಸಣ್ಣ ಕತೆ

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ಜೋತಿಷ್ಯ

  ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…