ಬಂದವರು ಬಂದಿರಲಿ ಹೋದವರು ಹೋಗಿರಲಿ ನಿನ್ನ ಜತೆ ನಾನಿರಲು ಸಾಲದೇನು? ಅವರಿವರು ಹಾಗಿರಲಿ ಈ ದಾರಿ ನಿನಗಿರಲಿ ನೂರಾರು ಸಂಕಷ್ಟ ಬಂದರೇನು. ತೇಲು ನೋಟದ ಜನರ ಅಣಕು ನುಡಿಗಳ ಕೇಳಿ ಎದೆನೊಂದು ಬಗೆಗೆಡುವ ಮನವು ಬೇಡ; ನಿನ್ನ ಹೆಗ್ಗುರಿ ದಾರಿ ಬಹುದೂರ ಹರಿದಿಹುದು ಮುತ್ತಿನಂತಹ ಮಾತು ತಿಳಿದು ನೋಡ. ಜೀವನದ ಕಠಿಣತೆಯ ...

ಓಡುತಿರುವ ಗಾಡಿಯೊಳಗೆ ಇರುಳು ಹೆಪ್ಪುಗಟ್ಟುತಿದೆ ಒಳದೀಪಗಳನುರಿಸಿದರೆ ಹೊರಜಗವೇ ಮಾಯ ಕಿಟಕಿಗಾಜುಗಳ ಗೋಡೆಯಾಗಿ ಎಲ್ಲಿ ನೋಡಿದರೂ ಅಲ್ಲಿ ನೋಡಿದವನ ಮುಖವೆ ತೋರುವುದು ಲೋಕ ಮುಚ್ಚಿಕೊಳ್ಳುವುದು ಅಲ್ಲಿ ಹೊರಗೆ ಮಿನುಗುವ ಸಣ್ಣ ಮಿಂಚು ಹುಳಗಳೋ ಅಲ್ಲಿ ಮ...

ಇದುವರೆಗೆ ದರೋಡೆ, ಕೊಲೆಗಡುತನ, ಅತ್ಯಾಚಾರಗಳನ್ನೆಸಗಿದ ಧೂರ್ತರು ಸುಳ್ಳು ಸಾಕ್ಷಿ ಮತ್ತು ಹಣಬಲಗಳಿಂದ ಸತ್ಯ ಸಂದರೆಂದು ತೀರ್ಮಾನವಾಗಿ ಮತ್ತೆ ರಾಜಾರೋಷವಾಗಿ ತಿರುಗಾಡುತ್ತಿದ್ದರು. ಅಪರಾಧಿ ಎಂದು ತಿಳಿದರೂ ಒಪ್ಪಿಕೊಳ್ಳದ ವ್ಯಕ್ತಿಗಳು ಇಂದು ನೂತನ ...

ಎಡವೂರ ತಳದಲ್ಲಿ ಏನೇನ ಶಡಗರ ಎಡಕ ನಂದೀಕೋಲ ಬಲಕ ಪಲ್ಲಕಿ ಪಂಕ ಶಡಗರದ ಛತ್ತರಕಿ ಎಡಬಲ ಬತಾಗೀರಿ ಹಾರೂವ ಹೂಬಾಣ ಹೊಬತ್ತಿ ಕಂಡಿಽರಿ ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ ಜಯಮಂಗಳಽ ನಿತ್ಯ ಶಿನಮಂಗಳ ||೧|| ಹ...

ಗನ್ನು ನಿಮ್ಮದು ಪೆನ್ನು ನಮ್ಮದು ನಡೆದಿದೆ ಹೋರಾಟ ಮುಖವಿರುವವರ ಮುಖವಿರದವರ ನಡುವಿನ ಹೋರಾಟ //ಪ// ಬುಲೆಟ್ಟು ನಿಮ್ಮದು ಬ್ಯಾಲೆಟ್ಟು ನಮ್ಮದು ನಡೆದಿದೆ ಹೋರಾಟ ಕತ್ತಲೆ ಮುಖಗಳ ಬೆಳಕಿನ ಕುಡಿಗಳ ನಡುವಿನ ಹೋರಾಟ ಭ್ರಾಂತಿ ನಿಮ್ಮದು ಕ್ರಾಂತಿ ನಮ್ಮದ...

ಮಹಿಳೆಯರ ಒಂದೊಂದು ನೋಟ, ಮಾತುಕತೆಗಳಿಗೂ ಒಂದೊಂದು ವಿಶೇಷಾರ್ಥ ಕಲ್ಪಿಸುವ ಮಾಮೂಲಿ ಗಂಡಸರ ಜಾತಿಗೆ ಸೇರಿದವನು ನಾನು. ಅಲ್ಲೀವರೆಗೆ ನನ್ನನ್ನು ಯಾರೂ ಅಷ್ಟೊಂದು ಹಚ್ಚಿಕೊಂಡಿರಲಿಲ್ಲ. ನನ್ನ ಪ್ರತಿಭೆಯ ಕುರಿತು ಮಾತಾಡಿರಲಿಲ್ಲ ಕಷ್ಟ, ಸುಖಗಳಿಗೆ ಸ್ಪ...

ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ಗೌರಿ ಶಂಕರನಿಗೆ ಶಿರ ಬಾಗಿದರೂ ಮನ ಸಹ್ಯಾದ್ರಿಗೆ ಮರಳುವುದು ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ಗಂಗೆಯಲಿ ಮಿಂದರೂ ಮೈ-ಮನ ತುಂಗೆಯಲಿ ತಂಗುವುದು ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ನಾನ...

“ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?” “ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?” “ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ...

ಗುಡುಗುಟ್ಟಿದ ಧರೆ ಕೆರಳಿತು ಸಾಗರ ಅಪ್ಪಳಿಸುತ ರಾಕ್ಷಸಾಕಾರದ ಸುನಾಮಿ ಕೊಚ್ಚಿ ಹೋದವು ಮನೆ ಮಠ ಜಲಸಮಾಧಿಯಾದವು ಜೀವರಾಶಿ ಕಂದಮ್ಮಗಳ ಸಾವಿನಲ್ಲಿ ಮುಗಿಲ ಮುಟ್ಟಿದ ಹೆತ್ತೊಡಲ ಕರುಳಿನ ನೋವು! ಕೇಳುವವರ್‍ಯಾರು? ಮಾರಣ ಹೋಮ ನಡೆಯಿತು ಜೀವರಾಶಿಗಳ ಮೇಲೆ...

ಮನೆಯ ತುಂಬ ಹಾರಿಕೊಂಡು ಅಡುಗೆ ಮನೆಗೆ ನುಗ್ಗಿಕೊಂಡು ಅಂಗಳದಲ್ಲಿ ನಲಿದುಕೊಂಡು ನಮ್ಮ ನೋಡಿ ಹೆದರಿಕೊಂಡು ಬುರ್ರೆಂದು ಹಾರಿ ಹೋಗಿ ಮತ್ತೆ ಮತ್ತೆ ಇಣುಕುತ್ತಿದ್ದ ಚಿಲಿಪಿಲಿ ಹಾಡಿಕೊಂಡು ಮಕ್ಕಳಿಗೆ ಕುಶಿ ಕೊಡುತ್ತಿದ್ದ ಗುಬ್ಬಚ್ಚಿಗಳೆಲ್ಲಿ ಕಾಣೆಯಾದ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...