ಅಪರಾಧಿಗಳ ಪತ್ತೆಗೆ ಸತ್ಯ ಬಿತ್ತರಗೊಳಿಸುವ ತಂತ್ರಜ್ಞಾನ

ಅಪರಾಧಿಗಳ ಪತ್ತೆಗೆ ಸತ್ಯ ಬಿತ್ತರಗೊಳಿಸುವ ತಂತ್ರಜ್ಞಾನ

ಇದುವರೆಗೆ ದರೋಡೆ, ಕೊಲೆಗಡುತನ, ಅತ್ಯಾಚಾರಗಳನ್ನೆಸಗಿದ ಧೂರ್ತರು ಸುಳ್ಳು ಸಾಕ್ಷಿ ಮತ್ತು ಹಣಬಲಗಳಿಂದ ಸತ್ಯ ಸಂದರೆಂದು ತೀರ್ಮಾನವಾಗಿ ಮತ್ತೆ ರಾಜಾರೋಷವಾಗಿ ತಿರುಗಾಡುತ್ತಿದ್ದರು. ಅಪರಾಧಿ ಎಂದು ತಿಳಿದರೂ ಒಪ್ಪಿಕೊಳ್ಳದ ವ್ಯಕ್ತಿಗಳು ಇಂದು ನೂತನ ತಂತ್ರಜ್ಞಾನದ ಪರಿಣಾಮವಾಗಿ ಅಂತರಂಗದಲ್ಲಿ ಬಚ್ಚಿಟ್ಟ ಸತ್ಯವನ್ನು ಹೇಳುತ್ತ ಹೋಗುತ್ತಾರೆ. ಹೀಗಾಗಿ ಇದು “ಸತ್ಯಮೇವ ಜಯತೆ” ಎಂಬ ವಾಕ್ಯಕ್ಕೆ ಜಯಸಿಕ್ಕಂತಾಗಿದೆ.

ನೂತನ ಡಿ.ಎನ್.ಎ. ತಂತ್ರ : ಕೆಲವು ವರ್ಣ ತಂತ್ರಗಳ ಒಂದು ಶಾರ್ಟ್ಕಟ್ ವಿಧಾನವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಕೆಲವು ವರ್ಣ ತಂತುಗಳ ಮೇಲೆ ಡಿ.ಎನ್.ಎ.ಯ ಸಣ್ಣಸರಣಿಗಳು ಪದೇಪದೇ ಮರುಕಳಿಸುತ್ತವೆ. ಇದನ್ನು V.N.T.R. (ಮೆಮೋರಿಯಲ್ ನಂಬರ್ ಆಫ್ ಟ್ಯಾಂಡಮ್ ರೀಪೀಟ್ಸ್) ಎಂದು ಕರೆಯುತ್ತಾರೆ. D.N.A ಪಿಂಗರ್ ಪ್ರಿಂಟಿಂಗ್‌ ಅನ್ನು ವ್ಯಾಪಕವಾಗಿ ತಂದೆ, ತಾಯಿ, ಮಕ್ಕಳ ಸಂಬಂಧನ್ನು ಗುರುತಿಸುವುದಕ್ಕಾಗಿ ಇವಲ್ಲದೇ ಯಾವುದೇ ಅಪರಾಧ ನಡೆದ ಸ್ಥಳದಿಂದ ಸಂಗ್ರಹಿಸಲಾದ ರಕ್ತ ಕೂದಲು, ಚರ್ಮದ ಕೋಶಗಳು ಇತ್ಯಾದಿಗಳ D.N.A. ಯನ್ನು ಹೋಲಿಸಿಕೊಂಡ ಅಪರಾಧಿಯನ್ನು ಕಂಡು ಹಿಡಿಯಬಹುದು.

ಬುಲೆಟ್ ಫಿಂಗರ್ ಪ್ರಿಂಟಿಂಗ್‌ : ಬುಲೆಟಿನಿಂದ ಹಾರಿಬಂದ ಗುಂಡು ಮೈಮೇಲೆ ಅನೇಕ ವಿಶಿಷ್ಟ ಗುರುತುಗಳನ್ನು ಮೂಡಿಸುತ್ತದೆ. ಈ ಗುರುತುಗಳನ್ನು ತಜ್ಞರು ಗುರುತಿಸುತ್ತಾರೆ. ಪಿಸ್ತೂಲಿನಿಂದ ಎಷ್ಟು ಗಂಡು ಹಾರಿಸಿದರೂ ಅದೇ ಬಗೆಯ ಗುರುತುಗಳು ಮೂಡುತ್ತವೆ. ಅದನ್ನು ಆಧರಿಸಿ ಅಪರಾಧಕ್ಕಾಗಿ ಬಳಸಲಾದ ಪಿಸ್ತೂಲನ್ನು ತಜ್ಞರು ಗುರುತಿಸುತ್ತಾರೆ. ಕೇವಲ ೨ ಅಡಿ ದೂರದಿಂದ ಗುಂಡು ಹಾರಿಸಿದ್ದೇ ಆದರೆ ದೇಹದುಲ್ಲುಂಟಾದ ಗಾಯದ ಸುತ್ತನಿರ್ದಿಷ್ಟ ಪ್ರಮಾಣದ ರಾಸಾಯನಿಕಗಳು (ಸೀಸ ಇತ್ಯಾದಿ) ಶೇಖರಗೊಂಡಿರುತ್ತವೆ. ಅದನ್ನು ಆಧರಿಸಿ ಎಷ್ಟು ದೂರದಿಂದ ಗುಂಡನ್ನು ಹಾರಿಸಲಾಯಿತು ಎಂಬುವುದನ್ನು ಕಂಡುಕೊಳ್ಳಲಾಗುತ್ತದೆ.

ಪೆನ್ನೆಲ್ ಪ್ಲೆಥಿಸ್ಮೋಗ್ರಫಿ : ಲೈಗಿಂಕತೆಯ ವಿಷಯದಲ್ಲಿ ವ್ಯಕ್ತಿಯ ಅಸಹಜ ಮತ್ತು ಕ್ರೌರ್ಯಭರಿತ ವರ್ತನೆಯನ್ನು ಗುರುತಿಸಲೆಂದು ಬಳೆಸಲಾಗುವ ಈ ವಿವಾದಾತ್ಮಕ ಪರೀಕ್ಷೆಯನ್ನು ಇನ್ನು ಭಾರತದಲ್ಲಿ ನಡೆಸಲು ಜಾರಿ ಆಗಿಲ್ಲ. ಕೆಲವು ಅಸಹಜ ಲೈಂಗಿಕ ಭಾವನೆಗಳನ್ನುಂಟು ಮಾಡಿದರೆ ವ್ಯಕ್ತಿ ಉದ್ರೇಕಗೊಳ್ಳುತ್ತಾನೆಯೇ? ಅವನ ಮಾನಸಿಕ ಸ್ಥಿತಿ ಹೇಗೆ, ಇಂಥಹ ಪ್ರಚೋದನೆಗಳಿಗೆ ಅವನು ಶಿಶ್ನ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಇತ್ಯಾದಿಗಳನ್ನು ಗಮನದಲ್ಲಿರಿಸಿಕೊಂಡು ಈ ಪರೀಕ್ಷೆಯನ್ನು ರೂಪಿಸಲಾಗಿದೆ. ನಿರ್ದಿಷ್ಟ ಉತ್ತೇಜನಕ್ಕೆ ಒಳಗಾದ ಶಿಶ್ನದ ಗಾತ್ರ ಮತ್ತು ಸುತ್ತಳತೆಯಲ್ಲಿ ಗುರುತಿಸಲು ಮರ್ಕ್ಯುರಿ ಸ್ಪೇನ್‌ಗೇಜ್ ಇಲ್ಲವೆ ಬ್ಯೂರೋಗೇಜ್ ಎಂಬ ಎರಡರಲ್ಲೊಂದು ಉಪಕರಣಗಳನ್ನು ಶಿಶ್ನಕ್ಕೆ ಅಳವಡಿಸಲಾಗುತ್ತದೆ. ಆ ಬಳಿಕ ಪ್ರಜೋದನಕಾರಿ ಸನ್ನಿವೇಷವನ್ನು ರೂಪಿಸಿ ಅಳತೆಯನ್ನು ಗುರುತಿಸಲಾಗುತ್ತದೆ. ಅತ್ಯಾಚಾರದ ಕೇಸುಗಳ ತನಿಖೆಯಲ್ಲಿ ಹಾಗೂ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಪೀಡೋಪೈಲ್‌ಗಳನ್ನು ಗುರುತಿಸುವಲ್ಲಿ ಈ ವಿಧಾನ ಸಹಾಯಕವಾಗುತ್ತದೆ.

ಸುಳ್ಳ ಪತ್ತೆಯಂತ್ರ : ಆರೋಪಿಯ ರಕ್ತದ ಒತ್ತಡ, ಉಸಿರಾಟದಲ್ಲಿರುವ ಬದಲಾವಣೆ, ಮಾಂಸ ಖಂಡಗಳ ಚಲನೆ, ಬೆವರು ಹರಿಯುವ ರೀತಿ ಎಲ್ಲವನ್ನು ದಾಖಲು ಮಾಡಿಕೊಳ್ಳುವಯಂತ್ರಕ್ಕೆ ಸುಳ್ಳು ಪತ್ತೆಯಂತ್ರವೆಂದು ಕರೆಯುತ್ತಾರೆ. ಇವೆಲ್ಲವನ್ನು ದಾಖಲಿಸಿಕೊಳ್ಳುವ ಯಂತ್ರಗಳ ಸಂಪರ್ಕವನ್ನು ಆರೋಪಿಯ ದೇಹದೊಂದಿಗೆ ಏರ್ಪಡಿಸಿ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆಯಾ ಪ್ರಶ್ನೆಗೆ ಅವನ ಹಾಗೂ ಅವನ ದೇಹದ ಪ್ರತಿಕ್ರಿಯೆಯನ್ನು ದಾಖಲಿಸಿಕೊಳ್ಳಲಾಗುತ್ತದೆ. ಈ ಅಂಕಿ ಅಂಶಗಳನ್ನು ಆಧರಿಸಿ ಆರೋಪಿ ಹೇಳುತ್ತಿರುವ ಸತ್ಯಾಸತ್ಯವನ್ನು ಕಂಡುಕೊಳ್ಳಲಾಗುತ್ತದೆ.

ವಿಡಿಯೋ ಪೊರೆನ್ಸಿಕ್ : ವಿಡಿಯೋ ಟೆಪ್‌ಅನ್ನು ಪರೀಕ್ಷಣೆಗೆ ಒಳಪಡಿಸಿದಾಗ ತಜ್ಞರು ಪ್ರತಿಯೊಂದು ನೆರಳು, ಬೆಳಕು, ಚಲನೆ, ಅವು ಎಷ್ಟೇ ಚಿಕ್ಕದಾಗಿರಲಿ ಎಲ್ಲವನ್ನು ಗಮನಿಸುತ್ತಾರೆ. ಧ್ವನಿಯ, ಬಿಂಬಗಳನ್ನು ಹೋಲಿಸಿ ನೋಡಲಾಗುತ್ತದೆ. ಯಾವ ರೆಕಾರ್ಡ್‌ಗಳಿಂದ ದಾಖಲಿಸಲಾಯಿತೋ ಅದು ಟೇಪಿನ ಮೇಲೆ ಕೆಲವು ಗುರುತುಗಳನ್ನು ಉಳಿಸುತ್ತದೆ. ಅದನ್ನು ಕೂಡ ಪರಿಶೀಲಿಸಲಾಗುತ್ತದೆ.

ಆಡಿಯೋಟೇಪಿನ ಪರೀಕ್ಷೆಯಲ್ಲಿ ಆಟೋಮೆಟಿಕ್ ಸೌಂಡ್‌ವೇವ್ ಅನಲೈಜರ್ ಅಥವಾ ಸೌಂಡ್‌ಸ್ಪೆಕ್ಟ್ರೋ ಗ್ರಾಫ್‌ನ ಸಹಾಯವನ್ನು ಪಡೆದು- ಕೊಳ್ಳಲಾಗುತ್ತದೆ. ಅವುಗಳ ಸಹಾಯದಿಂದ ವ್ಯಕ್ತಿಯೊಬ್ಬ ಮಾತನಾಡುವ ವಿಧಾನ ಹಾಗೂ ಕ್ಯಾಸೆಟ್‌ನಲ್ಲಿ ದಾಖಲಾದ ಅವನ ಧ್ವನಿ ಎಲ್ಲವನ್ನು ಸ್ಪಷ್ಟವಾಗಿ ಹೋಲಿಸಿ ನೋಡಲಾಗುತ್ತದೆ.

ಬ್ರೈನ್ ಫಿಂಗರ್ ಪ್ರಿಂಟಂಗ್ : ಆರೋಪಿಯ ತಲೆಗೆ ವಿಶೇಷ ಸೆನ್ಸಾರ್‌ಗಳನ್ನು ಜೋಡಿಸಿ ಅಪರಾಧಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ತೋರಿಸಿ ಕೆಲವು ಧ್ವನಿಗಳನ್ನು ಕೇಳಿಸಲಾಗುತ್ತದೆ. ಆರೋಪಿಗೆ ಈ ಪ್ರಚೋದನೆಗಳೊಂದಿಗೆ ತೃಣಮಾತ್ರದ ಸಂಬಂಧ ಇದ್ದುದ್ದೆ ಆದರೂ ಆತನ ಮಿದುಳು ವಿಚಿತ್ರ ಅಲೆಗಳನ್ನು ಎಬ್ಬಿಸುತ್ತದೆ. ಈ ಅಲೆಗಳನ್ನು P-300 ಎಂದು ಗುರುತಿಸಲಾಗುತ್ತದೆ. ಈ ಅಲೆಗಳನ್ನು ಸೆನ್ಸರ್‌ಗಳು ಗುರುತಿಸುತ್ತವೆ.

ಅಂದರೆ ಈ ವಿಧಾನ ಸುಳ್ಳುಪತ್ತೆ ಯಂತ್ರದ ಕಾರ್ಯಾಚರಣೆಯನ್ನು ಬಹಳಷ್ಟು ಮಟ್ಟಿಗೆ ಹೇಳುತ್ತದೆ. ಆದರೆ ಆರೋಪಿಗೆ ಇಲ್ಲಿಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ. ಇಡೀ ಪರೀಕ್ಷೆ ಎರಡು ಹಂತಗಳಲ್ಲಿ ನಡೆಯುತ್ತದೆ. ಈ ಪರೀಕ್ಷೆ ನಡೆಸುವುದಕ್ಕೆ ಮೊದಲು ಆರೋಪಿಯ ಸಂದರ್ಶನವನ್ನು ಮಾಡಲಾಗುತ್ತದೆ. ನಂತರ ನಿಜವಾದ ಪರೀಕ್ಷೆ ಪ್ರಾರಂಭವಾಗುತ್ತದೆ. ಆಗ ಅಪರಾಧಿಯ ಮೆದುಳ ಒಂದು ಹಂತದಲ್ಲಿ ಒಪ್ಪಿಕೊಳ್ಳುವಂತೆ ಸೂಚಿಸುತ್ತದೆ.

ಮಂಪರು ಪರೀಕ್ಷೆ : (Nareoanalysis): ಇದೊಂದು ಎಂಥ ಚಾಣಾಕ್ಷ ಅಪರಾಧಿಯನ್ನು ಪರೀಕ್ಷಿಸಿ ಆತ ನಿಜವಾದ ಅಪರಾಧಿ, ಎಂದು ಸಾಬೀತು ಪಡಿಸುತ್ತದೆ. ಇಲ್ಲಿ ಸುಳ್ಳು, ತಂತ್ರಗಾರಿಕೆ, ಚಾಣಾಕ್ಷತನಗಳೇನೂ ಅಪರಾಧಿಯಿಂದ ನಡೆಸಲು ಸಾಧ್ಯವೇ ಇಲ್ಲ.

ಸೋಡಿಯಂ ಪೆಂಟೊಥಾರ್ ಅಥವಾ ಸೋಡಿಯಂ ಅಮೈಟಿಲ್‌ಗಳನ್ನು ‘ಟ್ರೂಥ್ ಸೀರಮ್’, ಎಂದೇ ಕರೆಯಲಾಗುತ್ತದೆ. ಪರಿಣತ ವೈದ್ಯರು ಎರಡರಲ್ಲಿ ಯಾವುದಾದರೊಂದು ರಾಸಾಯನಿಕ ಕಣವನ್ನು ನೀರಿನಲ್ಲಿ ಸೇರಿಸಿ ದ್ರಾವಣವನ್ನು ತಯಾರಿಸುತ್ತಾರೆ. ಪರೀಕ್ಷೆ ನಡೆಸಬೇಕಾದ ವ್ಯಕ್ತಿಯ ಲಿಂಗ, ವಯಸ್ಸು, ಆರೋಗ್ಯ ಸ್ಥಿತಿ ಇತ್ಯಾದಿಗಳನ್ನು ಗಮನಿಸಿ ಆ ಆಧಾರದ ಮೇರೆಗೆ ನಿರ್ದಿಷ್ಟ ಪ್ರಮಾಣವನ್ನು ವ್ಯಕ್ತಿಯ ರಕ್ತದೊಳಗೆ ಸೇರಿಸಲಾಗುತ್ತದೆ. ಕೇಂದ್ರೀಯ ನರವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಈ ರಾಸಾಯನಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯದ ಗತಿ ನಿಧಾನಗೊಳ್ಳುತ್ತದೆ. ವ್ಯಕ್ತಿ ಅರೆಪ್ರಜ್ಞಾಶೂನ್ಯತೆ ಅಥವಾ ಮಂಪರು ಸ್ಥಿತಿಯನ್ನು ತಲುಪುತ್ತಾನೆ. ಈ ಸ್ಥಿತಿಯಲ್ಲಿ ಆತ ಕಲ್ಪನೆಯನ್ನು ಹರಿಬಿಡಲಾರ. ಕಥೆ ಕಟ್ಟಲಾರ. ಯಾವುದೇ ಪ್ರಶ್ನೆ ಕೇಳಿದರೂ ತನ್ನ ನೆನಪಿನ ಆಳದಿಂದ ಸತ್ಯವನ್ನು ಬಿಟ್ಟು ಇನ್ನೇನೂ ಹೇಳುವುದಿಲ್ಲ. ಈ ಸತ್ಯದ ಔಷಧವನ್ನು ಎರಡನೇ ಮಹಾಯುದ್ದದ ಸಂದರ್ಭದಲ್ಲಿಯೇ ಅಮೇರಿಕನ್ ಮನೋಶಾಸ್ತ್ರಜ್ಞರು ಬಳಸಿದರ ಬಗೆಗೆ ದಾಖಲೆಗಳಿವೆ. ಸೈನಿಕರು ಯುದ್ಧದ ಸಂದರ್ಭದಲ್ಲಿ ಕಂಡ ಹಾಗೂ ಅನುಭವಿಸಿದ ಭಯಾನಕ ಸನ್ನಿವೇಶಗಳನ್ನು ಯಾರಲ್ಲೂ ಹೇಳದೇ ತಮ್ಮಲೇ ಅದು ಮಿಟ್ಟುಕೊಳ್ಳುತ್ತಿದ್ದರು. ಅದು ಅವರ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತಿತ್ತು ಅಂಥಹ ಸೈನಿಕರನ್ನು ಮಂಪರು ಪರೀಕ್ಷೆಗೊಳಪಡಿಸಿ ಸತ್ಯವನ್ನು ಹೊರಗೆಡುವಂತೆ, ಮಾಡಲಾಗುತ್ತಿತ್ತು. ಆಗ ಅವರ ಆರೋಗ್ಯವೂ ಸುಧಾರಿಸುತಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಡವೂರ ವೀರಭದ್ರನ ಸ್ತೋತ್ರ
Next post ಬೆಳಕ ನೀ ನೋಡಬೇಕೆ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…