ಯಾವ ಊರಿಗೆ ಹೋದರೂ
ನನ್ನೂರು ನೆನಪಾಗುವುದು

ಗೌರಿ ಶಂಕರನಿಗೆ ಶಿರ
ಬಾಗಿದರೂ ಮನ
ಸಹ್ಯಾದ್ರಿಗೆ ಮರಳುವುದು

ಯಾವ ಊರಿಗೆ ಹೋದರೂ
ನನ್ನೂರು ನೆನಪಾಗುವುದು

ಗಂಗೆಯಲಿ ಮಿಂದರೂ
ಮೈ-ಮನ
ತುಂಗೆಯಲಿ ತಂಗುವುದು

ಯಾವ ಊರಿಗೆ ಹೋದರೂ
ನನ್ನೂರು ನೆನಪಾಗುವುದು

ನಾನು ನನ್ನದು ನನ್ನವರೆಂಬ
ಬೆಟ್ಟ-ಗುಡ್ಡ ನದಿ-ತೋಪು
ನಿತ್ಯ ಕೈ ಬೀಸಿ ಕರೆಯುವುದು

ಯಾವ ಊರಿಗೆ ಹೋದರೂ
ನನ್ನೂರು ನೆನಪಾಗುವುದು

ನನ್ನತನ ನನ್ನ ನುಡಿ
ನನ್ನೊಡನೆ
ಬಾಳುವುದು ಬೆಳಗುವುದು.
*****